ಮರಸೇಬು ಹಣ್ಣನ್ನು ನೀವು ಸೇವಿಸಿರಬಹುದು. ವಿವಿಧ ಹಣ್ಣುಗಳು ನಮಗೆ ವಿವಿಧ ತೆರೆನಾದ ಆರೋಗ್ಯಕರ ಪೋಷಕಾಂಶಗಳನ್ನು ನೀಡುತ್ತದೆ. ಹಾಗಿರುವಾಗ ಪಿಯರ್ಸ್ ಹಣ್ಣು ಅಥವಾ ಮರಸೇಬು ಹಣ್ಣಿನ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇದರಲ್ಲಿ ಪೊಟ್ಯಾಶಿಯಂ ಪೋಷಕಾಂಶ ಹಾಗೂ ದೇಹಕ್ಕೆ ಅಗತ್ಯವಿರುವ ವಿಟಮಿನ್ಗಳು ಕಂಡು ಬರುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿ ಕಂಡು ಬರುವುದರಿಂದ ಇದು ದೇಹದಲ್ಲಿ ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಪಿಯರ್ಸ್ ಹಣ್ಣನ್ನು ಮರಸೇಬು ಎಂದೂ ಕರೆಯುತ್ತಾರೆ. ಇದು ಹೃದಯದ ಆರೋಗ್ಯವನ್ನು ಸದೃಢವಾಗಿರಿಸಲು ಸಹಾಯಕವಾಗಿದೆ. ದೇಹದಲ್ಲಿನ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ಈ ಹಣ್ಣಿನ ಸೇವನೆ ಉತ್ತಮವಾಗಿದೆ. ಮರಸೇಬು ಹಣ್ಣಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಎ, ಬಿ ಮತ್ತು ಸಿ ಜೀವಸತ್ವಗಳು ಕಂಡು ಬರುತ್ತವೆ. ಇವು ನಿಮ್ಮ ಆರೋಗ್ಯ ಸುಧಾರಣೆಗೆ ಅವಶ್ಯಕವಾಗಿದೆ.
ಮರಸೇಬು ಹಣ್ಣು ಸೇವನೆಯ ಆರೋಗ್ಯ ಪ್ರಯೋಜನಗಳು
ಫೈಬರ್ ಅಂಶದಿಂದ ಸಮೃದ್ಧವಾಗಿದೆ
ಮರಸೇಬು ಹಣ್ಣು ಫೈಬರ್ನಿಂದ ಸಮೃದ್ಧವಾಗಿದೆ. ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯ ಪ್ರಕಾರ, ಒಂದು ಮರಸೇಬು 6 ಗ್ರಾಂ ನಷ್ಟು ಫೈಬರ್ ಅಂಶವನ್ನು ದೇಹಕ್ಕೆ ನೀಡುತ್ತದೆ. ಜೀರ್ಣಕ್ರಿಯೆ ನಿಧಾನವಾಗುವುದರಿಂದ ಹೊಟ್ಟೆ ಬಹುಬೇಗ ತುಂಬುತ್ತದೆ.
ನೀರಿನಾಂಶವಿದೆ
ಮರಸೇಬುವಿನಲ್ಲಿ ಶೇ. 84 ರಷ್ಟು ನೀರಿನ ಅಂಶವಿರುತ್ತದೆ. ಜತೆಗೆ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಹಾಗಾಗಿ ದೇಹದ ತೂಕ ನಿಯಂತ್ರಿಸುವಲ್ಲಿ ಇದು ಸಹಾಯಕ. ಜತೆಗೆ ಈ ಹಣ್ಣು ಸೇವನೆಯು ದೇಹವನ್ನು ತಂಪಾಗಿರಿಸುತ್ತದೆ.
ಜೀರ್ಣಕ್ರಿಯೆಗೆ ಸಹಾಯಕ
ಮರಸೇಬು ಜೀರ್ಣಕ್ರಿಯೆಗೆ ಸಹಾಯಕ. ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅಧಿಕ ನೀರಿನ ಅಂಶ ಮತ್ತು ನಾರಿನಾಂಶವಿರುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಹಾಯಕವಾಗಿದೆ. ಜತೆಗೆ ದೇಹದ ತೂಕ ನಿಯಂತ್ರಣಕ್ಕೆ ಸಹಾಯಕ.
ಇದನ್ನೂ ಓದಿ:
Health Tips: ಅಧಿಕ ರಕ್ತದೊತ್ತಡ ಸಮಸ್ಯೆ ನಿಂಯತ್ರಿಸಲು ಈ ಕೆಲವು ವಿಷಯಗಳು ಗಮನದಲ್ಲಿರಲಿ
(Know about pears fruit health benefits check in Kannada)