ಸಾಮಾನ್ಯವಾಗಿ ನಗರದ ಜನರು ಬೆಳಗ್ಗಿನ ಉಪಹಾರಕ್ಕೆ ಬ್ರೆಡ್ ಸೇವಿಸುತ್ತಾರೆ. ಉದ್ಯೋಗಸ್ಥರು ಬೆಳಿಗ್ಗೆ ಬೇಗ ಕೆಲಸಕ್ಕೆ ತೆರಳಬೇಕು ಎಂದು ಗಡಿಬಿಡಿಯಲ್ಲಿ ಬ್ರೆಡ್ ತಿಂದು ಓಡುತ್ತಾರೆ. ಆದರೆ ಬೆಳ್ಳಂಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಬ್ರೆಡ್-ಜಾಮ್ ಸೇವನೆ ಒಳ್ಳೆಯದಲ್ಲ. ಬೆಳಗ್ಗಿನ ಉಪಹಾರ ನಮ್ಮ ಇಡೀ ದಿನದ ಆರೋಗ್ಯ ಮಟ್ಟವನ್ನು ಸುಧಾರಿಸುತ್ತದೆ. ಹಾಗಿರುವಾಗ ಒಳ್ಳೆಯ ತಿಂಡಿಗಳನ್ನು ಸೇವಿಸುವುದರ ಮೂಲಕ ನಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ವಹಿಸಲೇಬೇಕು. ಬೆಳಗ್ಗಿನ ಉಪಹಾರಕ್ಕೆ ಬಿಸಿ ಬಿಸಿಯಾಗಿ ತಯಾರಿಸಿದ ಉಪಹಾರವನ್ನು ಸೇವಿಸಿ. ಆದಷ್ಟು ಬ್ರೆಡ್ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.
ಅನಾರೋಗ್ಯ
ಬ್ರೆಡ್ಗೆ ಹಚ್ಚಿಕೊಳ್ಳುವ ಜಾಮ್ ಸಾಕಷ್ಟು ರಾಸಾಯನಿಕಗಳಿಂದ ಕೂಡಿರುತ್ತದೆ. ಅಷ್ಟೇ ಅಲ್ಲದೇ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಬ್ರೆಡ್ ಹೆಚ್ಚು ಕ್ಯಾಲೋರಿ ಹೊಂದಿರುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರಿಂದ ಮಲಬದ್ಧತೆ, ಡಯಾಬಿಟಿಸ್ ಸಮಸ್ಯೆಗಳು ಕಾಡತೊಡಗುತ್ತದೆ.
ತೂಕವನ್ನು ಹೆಚ್ಚಿಸುತ್ತದೆ
ಆರೋಗ್ಯವನ್ನು ಸುಧಾರಿಸಿಕೊಳ್ಳುವತ್ತ ಯೋಚಿಸುತ್ತಿದ್ದರೆ ಸಾಧ್ಯವಾದಷ್ಟು ಬ್ರೆಡ್ ಸೇವನೆಯಿಂದ ದೂರವಿರಿ. ಅದರಲ್ಲಿಯೂ ಮುಖ್ಯವಾಗಿ ಬೆಳಗ್ಗೆ ಉಪಹಾರವಾಗಿ ಬ್ರೆಡ್ ಸೇವಿಸಿದರೆ ಇದು ಅರೋಗ್ಯಕ್ಕೆ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಂತೆ ದೇಹದ ತೂಕ ಹೆಚ್ಚಾಗುತ್ತದೆ. ಇದು ರಕ್ತದೊತ್ತಡ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಆದಷ್ಟು ಬೆಳಗ್ಗಿನ ಉಪಹಾರ ಸರಿಯಾಗಿರುವಂತೆ ನೋಡಿಕೊಳ್ಳಿ.
ಮಾನಸಿಕ ಒತ್ತಡ
ಬ್ರೆಡ್ನಿಂದ ತಯಾರಿಸಿದ ತಿಂಡಿಗಳು ತಿನ್ನಲು ರುಚಿ. ಆದರೆ ನಿಮ್ಮ ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮಾನಸಿಕ ಖಿನ್ನತೆಗೆ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳಿವೆ. ದೇಹಕ್ಕೆ ಸುಸ್ತು ಮತ್ತು ಅನಾರೋಗ್ಯ ಉಂಟಾಗುವ ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರಿ.
ಇದನ್ನೂ ಓದಿ:
Health Tips: ಗೋಡಂಬಿ ಸೇವನೆಯಿಂದ ಉತ್ತಮ ಅರೋಗ್ಯ; ನಿಯಮಿತವಾಗಿ ಬಳಸಿ ಕಾಯಿಲೆಗಳಿಂದ ದೂರವಿರಿ
Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು