Baking Soda: ಅಡುಗೆ ಸೋಡಾವನ್ನು ಎಚ್ಚರಿಕೆಯಿಂದ ಬಳಸಿ, ಅತಿಯಾದ ಸೇವನೆಯಿಂದ ಆರೋಗ್ಯಕ್ಕೆ ಹಾನಿ

| Updated By: ನಯನಾ ರಾಜೀವ್

Updated on: Aug 26, 2022 | 12:07 PM

ಅಡುಗೆ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ ಏಕೆಂದರೆ ಇದನ್ನು ಅನೇಕ ವಿಧದ ಕೇಕ್​ಗಳು, ಬ್ರೆಡ್​ಗಳು, ಬೇಕರಿ ತಿನಿಸುಗಳಲ್ಲಿ ಬಳಸಲಾಗುತ್ತದೆ.

Baking Soda: ಅಡುಗೆ ಸೋಡಾವನ್ನು ಎಚ್ಚರಿಕೆಯಿಂದ ಬಳಸಿ, ಅತಿಯಾದ ಸೇವನೆಯಿಂದ ಆರೋಗ್ಯಕ್ಕೆ ಹಾನಿ
Baking Soda
Follow us on

ಅಡುಗೆ ಸೋಡಾ ನಮ್ಮ ಆಹಾರದ ಪ್ರಮುಖ ಭಾಗವಾಗಿದೆ ಏಕೆಂದರೆ ಇದನ್ನು ಅನೇಕ ವಿಧದ ಕೇಕ್​ಗಳು, ಬ್ರೆಡ್​ಗಳು, ಬೇಕರಿ ತಿನಿಸುಗಳಲ್ಲಿ ಬಳಸಲಾಗುತ್ತದೆ. ಕೆಲವರು ಸೋಡಾ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಅಡುಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಕೆಟ್ಟದ್ದಲ್ಲ, ಆದರೆ ಅತಿಯಾಗಿ ತಿನ್ನುವುದು ಹಾನಿಕಾರಕವೆಂದು ಸಾಬೀತುಪಡಿಸಲಾಗಿದೆ.

ಹೆಚ್ಚು ಅಡುಗೆ ಸೋಡಾ ಸೇವನೆಯಿಂದಾಗುವ ಅನನುಕೂಲಗಳೇನು?

ಗ್ಯಾಸ್ಟ್ರಿಕ್ ಸಮಸ್ಯೆ
ಅಡುಗೆ ಸೋಡಾ ಅತಿಯಾಗಿ ಸೇವಿಸುವುದರಿಂದ ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಇದು ಹೊಟ್ಟೆ ಉಬ್ಬರ ಸಮಸ್ಯೆಯನ್ನು ಉಂಟುಮಾಡುತ್ತದೆ. ನೀವು ಸೋಡಾವನ್ನು ಸೇವಿಸಿದಾಗ, ಅದು ರಾಸಾಯನಿಕ ಪ್ರಕ್ರಿಯೆಯ ಅಡಿಯಲ್ಲಿ ಆಮ್ಲದೊಂದಿಗೆ ಬೆರೆಯುತ್ತದೆ. ಆದ್ದರಿಂದ, ಅಡುಗೆ ಸೋಡಾವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.

ಹೃದಯಾಘಾತ
ಅಡುಗೆ ಸೋಡಾದಲ್ಲಿ ಸೋಡಿಯಂ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಈ ವಸ್ತುವಿನ ಕಾರಣದಿಂದಾಗಿ, ನಮ್ಮ ಹೃದಯದ ಆರೋಗ್ಯದ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದರ ಮಿತಿಮೀರಿದ ಸೇವನೆಯು ಹೃದಯಾಘಾತ ಅಥವಾ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು.

ಹೆಚ್ಚು ಅಡುಗೆ ಸೋಡಾ ಬಳಕೆ ಮಾಡುವವರಿಗೆ ಹೃದಯ ಸ್ತಂಭನದಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು, ಆದ್ದರಿಂದ, ಸೇವನೆಯನ್ನು ಕಡಿಮೆ ಮಾಡುವುದು ಬಹಳ ಮುಖ್ಯ.

ಅಡುಗೆ ಸೋಡಾವನ್ನು ಯಾವ ಪ್ರಮಾಣದಲ್ಲಿ ಸೇವಿಸಬೇಕು?
ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿಲ್ಲದಿದ್ದರೆ, ಅರ್ಧ ಚಮಚ ಅಡುಗೆ ಸೋಡಾವನ್ನು ಅರ್ಧ ಕಪ್ ನೀರಿನಲ್ಲಿ ಬೆರೆಸಿ ಕುಡಿಯಿರಿ, ವಾರದಲ್ಲಿ ಸುಮಾರು 2 ಬಾರಿ ಮಾತ್ರ ಸೇವಿಸಿ, ಇಲ್ಲದಿದ್ದರೆ ನಿಮ್ಮ ಸಮಸ್ಯೆಗೆ ನೀವೇ ಹೊಣೆಯಾಗುತ್ತೀರಿ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:07 pm, Fri, 26 August 22