ಪದೇ ಪದೇ ಏನಾದರೂ ತಿನ್ನಬೇಕು ಅನಿಸುತ್ತಿದ್ದರೆ ಮಾಧುರಿ ದೀಕ್ಷಿತ್ ಪತಿ ಹೇಳಿರುವ ಸರಳ ಪರಿಹಾರ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 28, 2024 | 2:17 PM

ಇದ್ದಕ್ಕಿದ್ದಂತೆ ಯಾವುದಾದರೂ ಆಹಾರಗಳನ್ನು ತಿನ್ನುವುದಕ್ಕೆ ಬಯಸುತ್ತೇವೆ. ಈ ಬಯಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹಾಗಾಗಿ ಆಗ ಕೆಲವು ಆಹಾರಗಳನ್ನು ಸೇವನೆ ಮಾಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಿಗೆ ಊಟ ಆದ ಸ್ವಲ್ಪ ಹೊತ್ತಲ್ಲೇ ಮಸಾಲೆ ಅಥವಾ ಸಿಹಿಯಾದ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದು ಅನಿಸುತ್ತದೆ. ಇದನ್ನು ಕಡುಬಯಕೆಗಳು ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಕಾರಕವಾದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ ಜೊತೆಗೆ ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿಯೇ ಈ ಸಮಸ್ಯೆಗೆ ಸರಳವಾದ ಪರಿಹಾರ ಹುಡುಕುವುದು ಉತ್ತಮ.

ಪದೇ ಪದೇ ಏನಾದರೂ ತಿನ್ನಬೇಕು ಅನಿಸುತ್ತಿದ್ದರೆ ಮಾಧುರಿ ದೀಕ್ಷಿತ್ ಪತಿ ಹೇಳಿರುವ ಸರಳ ಪರಿಹಾರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ನಾವು ಕೆಲಸ ಮಾಡುವ ಸಮಯದಲ್ಲಿ ಅಥವಾ ಬಿಡುವವಿದ್ದಾಗ ನಮಗೆ ಏನಾದರೂ ತಿನ್ನಬೇಕು ಎನಿಸುವುದು ಸಹಜ. ಇದ್ದಕ್ಕಿದ್ದಂತೆ ಯಾವುದಾದರೂ ಆಹಾರಗಳನ್ನು ತಿನ್ನುವುದಕ್ಕೆ ಬಯಸುತ್ತೇವೆ. ಈ ಬಯಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಹಾಗಾಗಿ ಆಗ ಕೆಲವು ಆಹಾರಗಳನ್ನು ಸೇವನೆ ಮಾಡುತ್ತೇವೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರಿಗೆ ಊಟ ಆದ ಸ್ವಲ್ಪ ಹೊತ್ತಲ್ಲೇ ಮಸಾಲೆ ಅಥವಾ ಸಿಹಿಯಾದ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದು ಅನಿಸುತ್ತದೆ. ಇದನ್ನು ಕಡುಬಯಕೆಗಳು ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಆರೋಗ್ಯಕ್ಕೆ ಹಾನಿಕಾರಕವಾದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಲಾಗುತ್ತದೆ ಜೊತೆಗೆ ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿಯೇ ಈ ಸಮಸ್ಯೆಗೆ ಸರಳವಾದ ಪರಿಹಾರ ಹುಡುಕುವುದು ಉತ್ತಮ.

ಹಾಗಾಗಿಯೇ ಈ ರೀತಿ ಸಮಸ್ಯೆಗಳಿಂದ ಪಾರಾಗಲು ನಟಿ ಮಾಧುರಿ ದೀಕ್ಷಿತ್ ಅವರ ಪತಿ ಮತ್ತು ವೈದ್ಯ ಶ್ರೀರಾಮ್, ಕಡುಬಯಕೆಗಳಿಗೆ ಉತ್ತಮ ಪರಿಹಾರ ನೀಡಿದ್ದಾರೆ. ಅವರ ಪ್ರಕಾರ, ನಿಮಗೆ ಇದ್ದಕ್ಕಿದ್ದಂತೆ ಅನಾರೋಗ್ಯಕರ ಆಹಾರ ಸೇವನೆ ಮಾಡಬೇಕು ಎಂಬ ಪ್ರಚೋದನೆ ಮನಸ್ಸಿಗೆ ಬಂದರೆ ತಕ್ಷಣವೇ ಆ ಸಮಯದಲ್ಲಿ ಮತ್ತೊಂದು ಕೆಲಸ ಮಾಡಿ. ಈ ರೀತಿ ಮಾಡುವುದರಿಂದ, ನಿಮ್ಮ ಮನಸ್ಸು ಆ ಕಡುಬಯಕೆಗಳಿಂದ ಮತ್ತೊಂದು ಕೆಲಸದಲ್ಲಿ ತೊಡಗುತ್ತದೆ ಮತ್ತು ಅಲ್ಪಾವಧಿಯಲ್ಲಿ ನಿಮಗೆ ಏನಾದರೂ ತಿನ್ನಬೇಕು ಎಂಬ ಬಯಕೆ ದೂರವಾಗುತ್ತದೆ. ಈ ಅಭ್ಯಾಸಕ್ಕೆ ನೀವು ವಿಭಿನ್ನವಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ನೆಲ್ಲಿಕಾಯಿ ಚೂರ್ಣ ತಿನ್ನುವ ಮೂಲಕ ಅನಾರೋಗ್ಯಕರ ಆಹಾರ ತಿನ್ನುವ ಬಯಕೆಯನ್ನು ನೀಗಿಸಿಕೊಳ್ಳಬಹುದು. ಇದು ಕ್ರಮೇಣ ನಿಮಗೆ ಅಭ್ಯಾಸವಾಗುತ್ತದೆ ಬಳಿಕ ಕಡುಬಯಕೆಯನ್ನು ಕಡಿಮೆ ಮಾಡುತ್ತದೆ ಎಂದು ಡಾ. ಶ್ರೀರಾಮ್ ಹೇಳುತ್ತಾರೆ.

ಇದನ್ನೂ ಓದಿ: ಮೊಳಕೆ ಒಡೆದ ಆಲೂಗಡ್ಡೆಯನ್ನು ಎಂದಿಗೂ ತಿನ್ನಲೇಬೇಡಿ; ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ

ಇಲ್ಲಿದೆ ವಿಡಿಯೋ :

ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ಹೃದಯ ಶಸ್ತ್ರಚಿಕಿತ್ಸಕರಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಅವುಗಳಲ್ಲಿ ಇದು ಒಂದಾಗಿದ್ದು ನೀವು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರು ನೀಡಿರುವ ಈ ಸಲಹೆಯನ್ನು ಪಾಲಿಸಿ ಫಲಿತಾಂಶ ನೋಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ