ಮೊಳಕೆ ಒಡೆದ ಆಲೂಗಡ್ಡೆಯನ್ನು ಎಂದಿಗೂ ತಿನ್ನಲೇಬೇಡಿ; ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ
ಮೊಳಕೆ ಒಡೆದ ಮತ್ತು ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯಲ್ಲಿ ಸೋಲನೈನ್ ಮತ್ತು ಚಾಕೋನೈನ್ ಎಂಬ ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ. ಇವುಗಳ ಸೇವನೆಯಿಂದ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಡಾ. ದೀಪಕ್ ಆರಾಧ್ಯ ಸಲಹೆ ನೀಡುತ್ತಾರೆ.
ಅಲೂಗಡ್ಡೆ ಬಳಸಿಕೊಂಡು ನಾನಾ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಸಾಂಬಾರಿನಿಂದ ಹಿಡಿದು ಫ್ರೆಂಚ್ ಫೈಸ್ ವರೆಗೆ ಅಲೂಗಡ್ಡೆಯನ್ನು ಬಳಸಲಾಗುತ್ತದೆ. ಮಾರುಕಟ್ಟೆಯಿಂದ ಅಲೂಗಡ್ಡೆಯನ್ನು ಖರೀದಿಸುವಾಗ ಅದರಲ್ಲಿ ಕೆಲವೊಂದು ಮೊಳಕೆ ಒಡೆದ ಆಲೂಗಡ್ಡೆಗಳೂ ಕೂಡ ಇರುತ್ತದೆ. ಆದರೆ ಈ ಮೊಳಕೆಗಳನ್ನು ಕತ್ತರಿಸಿ ಖಾದ್ಯಗಳಲ್ಲಿ ಬಳಸುವುದು ಸಾಮಾನ್ಯ. ಆದರೆ ಎಂದಿಗೂ ಈ ರೀತಿಯ ತಪ್ಪು ಮಾಡಬೇಡಿ ಎಂದು ಬೆಂಗಳೂರಿನ ಡಾ ದೀಪಕ್ ಆರಾಧ್ಯ ಎಚ್ಚರಿಸುತ್ತಾರೆ.
“ಹೌದು ಮೊಳಕೆ ಒಡೆದ ಆಲೂಗಡ್ಡೆ ಸೇವನೆ ತಪ್ಪಿಸಿ. ಯಾಕೆಂದರೆ ಮೊಳಕೆ ಒಡೆದ ಅಥವಾ ಸ್ಪಲ್ಪ ಹಸಿರು ಬಣ್ಣಕ್ಕೆ ತಿರುಗಿರುವ ಆಲೂಗಡ್ಡೆಯಲ್ಲಿ ಸೋಲನೈನ್ (Solanine) ಮತ್ತು ಚಾಕೋನೈನ್(Chaconine) ಅಂಶ ಉತ್ಪತ್ತಿಯಾಗುತ್ತದೆ. ಇವುಗಳನ್ನು ಸೇವಿಸುವುದರಿಂದ ಅದು ದೇಹಕ್ಕೆ ವಿಷವಾಗಿ ಪರಿಣಮಿಸುತ್ತದೆ. ಇದರಿಂದಾಗಿ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು ಕಂಡುಬರುತ್ತದೆ. ಇದಲ್ಲದೇ ತಲೆನೋವು, ತಲೆಸುತ್ತುವಿಕೆ ಮುಂತಾದ ನರವೈಜ್ಞಾನಿಕ ಲಕ್ಷಣಗಳಿಗೂ ಕಾರಣವಾಗಬಹುದು” ಎಂದು ಡಾ ದೀಪಕ್ ಹೇಳುತ್ತಾರೆ.
ಇದನ್ನೂ ಓದಿ: ಇನ್ಮುಂದೆ ಈ AI ಕ್ಯಾಲ್ಕುರೇಟರ್ ಮೂಲಕ ಸಾವಿಗೆ ಎಷ್ಟು ಹತ್ತಿರದಲ್ಲಿದ್ದೇವೆ ಎಂದು ತಿಳಿಯಬಹುದು
drdeepakaradhya ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಅಕ್ಟೋಬರ್ 18ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 6ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ” ಉಪಯುಕ್ತ ಮಾಹಿತಿಗೆ ಧನ್ಯವಾದಗಳು” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Mon, 28 October 24