ಇತ್ತೀಚೆಗಿನ ದಿನಗಳಲ್ಲಿ ಗುಣಮಟ್ಟದ ಆಹಾರ ಸೇವನೆ ಮಾಡುವವರಿಗಿಂತ ಬಾಯಿ ರುಚಿಯ ಕಡೆಗೆ ಗಮನ ಕೊಡುವವರೇ ಹೆಚ್ಚು. ಫಾಸ್ಟ್ ಫುಡ್ ಹಾಗೂ ವಿದೇಶಿಗರ ಆಹಾರ ಪದ್ಧತಿಗಳ ಅಳವಡಿಕೆಯು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿವೆ. ಹೀಗಾಗಿ ಆಹಾರದ ಸೇವನೆಯ ಜೊತೆಗೆ ಆರೋಗ್ಯ ರಕ್ಷಣೆಯ ಕಡೆಗೂ ಹೆಚ್ಚು ಗಮನ ನೀಡಬೇಕು. ಹೆಚ್ಚಿನ ಕೊಬ್ಬು, ಸಕ್ಕರೆ ಅಥವಾ ಉಪ್ಪಿನ ಅಂಶದೊಂದಿಗೆ ತಯಾರಿಸಿದರೆ ಮನೆಯಲ್ಲಿ ಬೇಯಿಸಿದ ಊಟವೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬಿಡುಗಡೆ ಮಾಡಿದ ಹೊಸ ಆಹಾರ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ಚಿಪ್ಸ್, ಸಾಸ್, ಬಿಸ್ಕತ್ತುಗಳು, ಬೇಕರಿ ಉತ್ಪನ್ನಗಳು, ಮನೆಯಲ್ಲಿ ತಯಾರಿಸಿದ ಆಹಾರಗಳಾದ ಖಾರದ ತಿಂಡಿಗಳು, ಪಾಪಡ್ಸ್ ಮತ್ತು ಉಪ್ಪಿನಕಾಯಿಗಳಂತಹ ಪ್ಯಾಕ್ ಮಾಡಿ ಮಾರಾಟ ಮಾಡುವ ಆಹಾರಗಳು ಹೆಚ್ಚಿನ ಪ್ರಮಾಣದ ಉಪ್ಪನ್ನು ಹೊಂದಿರುತ್ತವೆ. ಈ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಹೃದಯರಕ್ತನಾಳದ ಕಾಯಿಲೆಗಳು ಬರುವ ಸಾಧ್ಯತೆಯೇ ಅಧಿಕವಾಗಿದೆ ಎಂದು ಎಚ್ಚರಿಸಿದೆ.
ಆರೋಗ್ಯಕರವಲ್ಲದ ಸಾಸ್‌ಗಳು, ಚೀಸ್, ಮೇಯನೇಸ್, ಜಾಮ್‌ಗಳು, ಜ್ಯೂಸ್‌ಗಳು, ಕಾರ್ಬೊನೇಟೆಡ್ ಪಾನೀಯಗಳು, ಬಿಸ್ಕತ್ತುಗಳು, ಕುಕೀಸ್, ಕೇಕ್‌ಗಳು, ಪೇಸ್ಟ್ರಿಗಳು, ತಂಪು ಪಾನೀಯಗಳು, , ಪ್ಯಾಕ್ ಮಾಡಿದ ಹಣ್ಣಿನ ರಸಗಳನ್ನು ಸೇವನೆಯಿಂದ ದೂರವಿರಿ. ಮನೆಯ ಹೊರಗೆ ತಯಾರಿಸಿದ ಆಹಾರವನ್ನು ಸೇವಿಸುವಾಗ ಎಚ್ಚರವಿರಲಿ.
ಇದನ್ನೂ ಓದಿ: ಬುದ್ಧಿವಂತಿಕೆ, ಮೆದುಳಿನ ಶಕ್ತಿಯನ್ನು ಹೆಚ್ಚಿಸುವ 5 ಆರೋಗ್ಯಕರ ಅಭ್ಯಾಸಗಳನ್ನು ಪಾಲನೆ ಮಾಡಿ
ದಿನಕ್ಕೆ 2000-ಕೆ.ಕೆ.ಎಲ್ ಆಹಾರದಲ್ಲಿ ದಿನಕ್ಕೆ 10 ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬುಗಳು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಉಪ್ಪಿನ ಸೇವನೆಯು ದಿನಕ್ಕೆ 5 ಗ್ರಾಂಗಿಂತ ಹೆಚ್ಚು ಮೀರಬಾರದು ಹಾಗೂ ಈ ಸಕ್ಕರೆಯು ಸೇವನೆಯು 25 ಗ್ರಾಂಕ್ಕಿಂತ ಕಡಿಮೆಯಿರಲಿ ಎಂದು ಐಸಿಎಂಆರ್ ತಿಳಿಸಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ