Electric Shock: ಕರೆಂಟ್​​ ಹೊಡೆದಾಗ ಮೊದಲು ಏನು ಮಾಡಬೇಕು, ಮಾಡಬಾರದು?

ವಿದ್ಯುತ್ ಸ್ಪರ್ಶಕ್ಕೆ ಒಳಗಾಗದಂತೆ ಸಾಕಷ್ಟು ರೀತಿಯಲ್ಲಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿರುತ್ತದೆ ಆದರೂ ಕೂಡ ಆಕಸ್ಮಿಕವಾಗಿ ಯಾವುದಾದರೂ ಒಂದು ರೀತಿಯಲ್ಲಿ ವಿದ್ಯುತ್ ಅವಘಡಗಳಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನು ತಿಳಿದುಕೊಂಡಿದ್ದರೆ ಅಂತಹ ಸನ್ನಿವೇಶ ಎದುರಾದಾಗ ಸರಿಯಾದ ಪ್ರಥಮ ಚಿಕಿತ್ಸೆ ನೀಡಿ ನಡೆಯುವ ಅವಘಡವನ್ನು ತಪ್ಪಿಸಬಹುದು.

Electric Shock: ಕರೆಂಟ್​​ ಹೊಡೆದಾಗ ಮೊದಲು ಏನು ಮಾಡಬೇಕು, ಮಾಡಬಾರದು?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 27, 2024 | 12:17 PM

ಇಂದಿನ ಕಂಪ್ಯೂಟರ್ ಯುಗದಲ್ಲಿ ವಿದ್ಯುತ್ ಇಲ್ಲದ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿಯೂ ಸಾಮನ್ಯವಾಗಿ ವಿದ್ಯುತ್ ವ್ಯವಸ್ಥೆ ಇದ್ದೆ ಇರುತ್ತದೆ. ಅದರಲ್ಲಿಯೂ ವಿದ್ಯುತ್ ಸ್ಪರ್ಶಕ್ಕೆ ಒಳಗಾಗದಂತೆ ಸಾಕಷ್ಟು ರೀತಿಯಲ್ಲಿ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿರುತ್ತದೆ ಆದರೂ ಕೂಡ ಆಕಸ್ಮಿಕವಾಗಿ ಯಾವುದಾದರೂ ಒಂದು ರೀತಿಯಲ್ಲಿ ವಿದ್ಯುತ್ ಅವಘಡಗಳಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದನ್ನು ತಿಳಿದುಕೊಂಡಿದ್ದರೆ ಅಂತಹ ಸನ್ನಿವೇಶ ಎದುರಾದಾಗ ಸರಿಯಾದ ಪ್ರಥಮ ಚಿಕಿತ್ಸೆ ನೀಡಿ ನಡೆಯುವ ಅವಘಡವನ್ನು ತಪ್ಪಿಸಬಹುದು.

-ಮೊದಲು ವ್ಯಕ್ತಿಯ ಹತ್ತಿರ ಇರುವ ಇತರ ವ್ಯಕ್ತಿಗಳು ಆದಷ್ಟೂ ಕ್ಷಿಪ್ರವಾಗಿ ಈ ವ್ಯಕ್ತಿಯನ್ನು ವಿದ್ಯುತ್‌ನ ಸಂಪರ್ಕದಿಂದ ಹೊರತರುವುದು ಪ್ರಥಮ ಆದ್ಯತೆಯಾಗಿರಬೇಕು. ಹಾಗೆಂದು ಕರೆಂಟ್ ಶಾಕ್ ಹೊಡೆದವರನ್ನು ಗಾಬರಿಗೊಂಡು ಕೂಡಲೇ ಮುಟ್ಟಬೇಡಿ ಅವರಿಗೆ ತಗಲಿರುವ ಶಾಕ್ ನಿಮಗೂ ಕೂಡ ತಗಲಬಹುದು. ಮೊದಲು ಮನೆಗಳ ವಿದ್ಯುತ್ ಮೀಟರ್ ಇರುವಲ್ಲಿ ಫ್ಯೂಸ್ ತೆಗೆದು ಅಥವಾ ಟ್ರಿಪ್ಪರ್‌ಗಳನ್ನು ತಕ್ಷಣವೇ ಆಫ್ ಮಾಡಿ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಬೇಕು.

-ನಿಮಗೆ ವಿದ್ಯುತ್​​​ನ ಮೂಲ ಸಿಗದಿದ್ದಲ್ಲಿ ಅಥವಾ ಒಂದು ವೇಳೆ ಹೊರಾಂಗಣದಲ್ಲಿ ವ್ಯಕ್ತಿ ಆಘಾತಕ್ಕೆ ಒಳಗಾದರೆ ಆ ಕ್ಷಣಕ್ಕೆ, ಕರೆಂಟ್ ಶಾಕ್ ತಗಲಿದ ವ್ಯಕ್ತಿಯನ್ನು ವಿದ್ಯುತ್​​ನ ಮೂಲದಿಂದ ಬೇರ್ಪಡಿಸಬೇಕು ಎಂದಾಗ ತಕ್ಷಣ ಕೈಗೆ ಸಿಗುವ ಯಾವುದೇ ವಿದ್ಯುತ್ ಅವಾಹಕ ವಸ್ತುಗಳಾದ ಕಾರ್ಡ್ ಬೋರ್ಡ್ ಮರ, ರಬ್ಬರ್, ಬಟ್ಟೆ, ಪ್ಲಾಸ್ಟಿಕ್ ಮೊದಲಾದ ಇತರ ಯಾವುದೇ ವಸ್ತುಗಳನ್ನು ಬಳಸಿ ವ್ಯಕ್ತಿಯನ್ನು ವಿದ್ಯುತ್‌ನ ಸಂಪರ್ಕದಿಂದ ಬೇರ್ಪಡಿಸಬೇಕು. ಹೈ ವೋಲ್ಟೇಜ್ ಲೈನ್​​​​ನ ಶಾಕ್ ತುಂಬಾ ಅಪಾಯಕಾರಿ. ಇದರ ಮೂಲಕ ಶಾಕ್ ಆಗಿದ್ದಲ್ಲಿ ಅಂತಹ ಜಾಗದಿಂದ 20 ಫೀಟ್ ನ ಅಂತರದಲ್ಲಿ ಇರಿ.

-ನಂತರ ವ್ಯಕ್ತಿ ಉಸಿರಾಡುತ್ತಿದ್ದಾನೋ ಇಲ್ಲವೋ ಎಂದು ಪರಿಶೀಲಿಸಬೇಕು. ಒಂದು ವೇಳೆ ವ್ಯಕ್ತಿ ಉಸಿರಾಡುತ್ತಿಲ್ಲದಿದ್ದರೆ ಮತ್ತು ಹೃದಯದ ಬಡಿತ ನಿಂತಿದ್ದರೆ, ತಕ್ಷಣವೇ ಸಿಪಿಆರ್ (CPR -Cardiopulmonary Resuscitation) ಅಥವಾ ರೋಗಿಯ ಎದೆಗೆ ಒತ್ತಡಗಳನ್ನು ನೀಡಿ ಕೃತಕ ಉಸಿರಾಟದಿಂದ ಹೃದಯದ ಬಡಿತವನ್ನು ಮರುಪ್ರಾರಂಭಿಸಲು ಯತ್ನಿಸಬೇಕು.

-ಶಾಕ್ ತೆಗಲಿದ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೆಚ್ಚಗಿಡಲು ಪ್ರಯತ್ನಿಸಿ. ವ್ಯಕ್ತಿಯಲ್ಲಿ ಕಾಣಬರುವ ಇತರ ಲಕ್ಷಣಗಳನ್ನೂ ಪರಿಶೀಲಿಸಿ. ವ್ಯಕ್ತಿಯ ದೇಹದ ಯಾವ ಭಾಗ ಕಪ್ಪಗಾಗಿದೆ ಎಂಬುದನ್ನು ಗಮನಿಸಿ, ಒಂದು ವೇಳೆ ಕಪ್ಪಗಾಗಿದ್ದರೆ ಆ ಭಾಗ ಮೇಲೆ ಬರುವಂತೆ ವ್ಯಕ್ತಿಯನ್ನು ಮಲಗಿಸಿ. ಕಪ್ಪಗಾಗಿರುವ ಭಾಗದ ಮೇಲೆ ತಣ್ಣೀರು ಸುರಿಯಿರಿ.

-ಯಾವುದೇ ಭಾಗ ಕಪ್ಪಗಾಗದೆ ಇದ್ದರೂ ವ್ಯಕ್ತಿ ಆಂತರಿಕ ಗಾಯಗಳಿಗೆ ಒಳಗಾಗಿರುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ ಆದಷ್ಟು ಬೇಗ ವೈದ್ಯರ ಬಳಿ ಕರೆದೊಯ್ಯಬೇಕು.

ಇದನ್ನೂ ಓದಿ: ಅಪಧಮನಿಗಳನ್ನು ಆರೋಗ್ಯಕರವಾಗಿ ಇಡಲು ಈ ವಿಟಮಿನ್​​ ಬಹಳ ಮುಖ್ಯ

ಯಾವ ರೀತಿಯ ​ಮುನ್ನೆಚ್ಚರಿಕೆಗಳನ್ನು ವಹಿಸಬೇಕು?

ಮನೆಗಳಲ್ಲಿ ಉತ್ತಮ ಗುಣಮಟ್ಟದ ಟ್ರಿಪ್ಪರ್‌ಗಳನ್ನು ಹಾಕಿಸಬೇಕು. ಉತ್ತಮ ಗುಣಮಟ್ಟದ ಈಎಲ್ಸಿಬಿ ಯನ್ನು (ELCB Electric current leakage breaker) ಪ್ರತಿ ಮನೆಯಲ್ಲಿಯೂ ಹಾಕಿಸುವುದು ಒಳ್ಳೆಯದು. ಇವು ವಿದ್ಯುತ್ತಿನ ಅತಿ ಚಿಕ್ಕ ಪ್ರವಾಹಕ್ಕೂ ಸ್ಪಂದಿಸಿ ಕ್ಷಣಮಾತ್ರದಲ್ಲಿ ವಿದ್ಯುತ್ ಪೂರೈಕೆಯನ್ನು ನಿಲ್ಲಿಸುತ್ತವೆ.

ಮನೆ ಹಾಗೂ ಸುತ್ತಮುತ್ತಲಲ್ಲಿ ಎಲ್ಲಿಯೂ ತೆರೆದ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳಿದ್ದರೆ ತಕ್ಷಣವೇ ಸಂಬಂಧಪಟ್ಟ ವ್ಯಕ್ತಿಗಳಿಗೆ ಮಾಹಿತಿ ನೀಡಿ ಸರಿಪಡಿಸುವಂತೆ ಆಗ್ರಹಿಸಬೇಕು ಅಥವಾ ವಿದ್ಯುತ್ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಬೇಕು.

ಮಕ್ಕಳಿರುವ ಮನೆಗಳಲ್ಲಿ ಮೂರು ಪಿನ್ನಿನ ಸಾಕೆಟ್‌ ಗಳನ್ನು ಮುಚ್ಚುವ ಶಟರ್ ಅಥವಾ ಪ್ಲಾಸ್ಟಿಕ್ಕಿನ ಪಟ್ಟಿಯೊಂದು ಇರುವಂತಹ ಸಾಕೆಟ್‌ಗಳನ್ನು ಅಳವಡಿಸಿ. ಪ್ಲಗ್ ಇಲ್ಲದಿದ್ದರೆ ಸರಳವಾದ ಪ್ಲಾಸ್ಟಿಕ್ಕಿನ ಟೇಪ್ ಅನ್ನು ಅಡ್ಡಲಾಗಿ ಹಚ್ಚಿಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್