Mint Benefits: ಅಸ್ತಮಾದಿಂದ ಕಾಲರಾ ತನಕ ಅನೇಕ ಸಮಸ್ಯೆಗಳಿಗೆ ಪುದೀನಾ ರಾಮಬಾಣ

|

Updated on: May 13, 2021 | 2:20 PM

ಪುದೀನಾ ಎಲೆಗಳ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಅದೆಷ್ಟೋ ರೋಗಗಳಿಗೆ ರಾಮಬಾಣವಾಗಿ ಪುದೀನಾ ಕೆಲಸ ಮಾಡುತ್ತದೆ. ಪುದೀನಾ ಸೇವನೆ ಯಾವ ಯಾವ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂಬುದರ ವಿವರ ಇಲ್ಲಿದೆ.

Mint Benefits: ಅಸ್ತಮಾದಿಂದ ಕಾಲರಾ ತನಕ ಅನೇಕ ಸಮಸ್ಯೆಗಳಿಗೆ ಪುದೀನಾ ರಾಮಬಾಣ
ಪುದೀನ ಸೊಪ್ಪು
Follow us on

ಪುದೀನಾದ ಪರಿಮಳ ಹಿತಕರವಾಗಿರುತ್ತದೆ. ಪುದಿನಾ ಎಲೆಗಳು ಹೆಚ್ಚು ತಂಪಾಗಿರುವುದರಿಂದ ದೇಹ ತಂಪಾಗಿರಲು ಬೇಸಿಗೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಮನಸ್ಸು ಹೆಚ್ಚು ಶಾಂತವಾಗಿರಲು ಪುದೀನಾ ಸೇವನೆ ಅತ್ಯಂತ ಪ್ರಯೋಜನಕಾರಿ. ಮೆಂಥಾಲ್​, ಪ್ರೋಟೀನ್​, ಕಾರ್ಬೊಹೈಡ್ರೇಟ್​, ಮ್ಯಾಂಗನೀಸ್​, ವಿಟಮಿನ್​ ಸಿ, ವಿಟಮಿನ್​ ಎ, ರೈಬೋಫ್ಲಾವಿನ್​, ಕಬ್ಬಿಣ, ಕೊಬ್ಬು ಮತ್ತು ತಾಮ್ರದಂತಹ ಪೋಷಕಾಂಶಗಳನ್ನು ಪುದೀನಾ ಎಲೆಯೊಂದರಿಂದಲೇ ಪಡೆಯಬಹುದು. ಜೊತೆಗೆ, ಆಂಟಿವೈರಸ್​, ಆಂಟಿಆಕ್ಸಿಡೆಂಟ್​ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು ಹೋಗಲು ಪುದೀನಾ ಎಲೆಗಳ ಸೇವನೆ ಪ್ರಯೋಜನಕಾರಿ.

ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಗೆ ಪರಿಹಾರ
ಒಂದು ಟೀಸ್ಪೂನ್​ ಜೇನುತುಪ್ಪದ ಜೊತೆಗೆ ಪುದೀನಾ ರಸವನ್ನು ಸೇರಿಸಿ ಸೇವನೆ ಮಾಡುವುದರಿಂದಾಗಿ ಹೊಟ್ಟೆ ನೋವು, ಅಜೀರ್ಣದಂತಹ ಸಮಸ್ತೆಗಳಿಂದ ಪರಿಹಾರ ಕಂಡುಕೊಳ್ಳಬಹುದು.

ವಾಂತಿಯ ಸಮಸ್ಯೆಗೆ ಪರಿಹಾರ
ಆಹಾರದ ಏರುಪೇರಿನಿಂದ ಅಥವಾ ತಿಂದ ಆಹಾರ ಜೀರ್ಣವಾಗದೇ ವಾಂತಿ ಸಮಸ್ಯೆ ಉಂಟಾಗುತ್ತಿದ್ದರೆ, ಜೇನುತುಪ್ಪದೊಂದಿಗೆ ಕೊಂಚ ಪುದೀನಾ ರಸವನ್ನು ಸೇರಿಸಿ ತಿನ್ನುವುದ ಮೂಲಕ ವಾಂತಿಯನ್ನು ನಿಯಂತ್ರಿಸಬಹುದು. ಬಹುಬೇಗ ಇದರಿಂದ ಆರೋಗ್ಯ ಚೇತರಿಸಿಕೊಳ್ಳುತ್ತದೆ.

ಕೆಮ್ಮು ಮತ್ತು ಜ್ವರ
ಕರಿಮೆಣಸು(ಕಾಳುಮೆಣಸು), ಚೂರೇ ಚೂರು ಉಪ್ಪು ಜೊತೆಗೆ ಪುದೀನಾ ಸೇರಿಸಿ ಗ್ರೀನ್​ ಟೀ(ಚಹ) ತಯಾರಿಸಿ ಸೇವಿಸುವುದರಿಂದ ಶೀತ, ಕೆಮ್ಮು, ಜ್ವರದಿಂದ ಪರಿಹಾರ ಪಡೆದುಕೊಳ್ಳಬಹುದು. ಪುದೀನಾ ಎಲೆಗಳ್ನು ಹಣೆಯ ಮೆಲೆ ಇರಿಸಿಕೊಳ್ಳುವುದರಿಂದ ತಲೆನೋವಿನಿಂದಲೂ ಮುಕ್ತರಾಗಬಹುದು.

ಕಾಲರಾ ಕಾಯಿಲೆಯಿಂದ ಪರಿಹಾರ
ಕಾಲರಾದಿಂದ ಬಳಲುತ್ತಿರುವವರು ಪುದೀನ ರಸ, ನಿಂಬೆ ರಸ, ಈರುಳ್ಳಿ ರಸ ಮತ್ತು ಕಲ್ಲು ಉಪ್ಪನ್ನು ಸೇರಿಸಿ ಸೇವಿಸುವುದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಈ ಔಷಧ ಬಹಳ ಪ್ರಯೋಜನಕಾರಿಯಾಗಿದೆ.

ಅಸ್ತಮಾ ರೋಗದಿಂದ ಮುಕ್ತರಾಗಿ
ಪುದೀನಾ ಎಲೆಗಳಲ್ಲಿ ಉತ್ಕರ್ಷಣ ನಿರೋಧಕ ಮತ್ತು ಆಂಟಿಮೈಕ್ರೊಬಿಯಲ್​ ಗುಣಗಳು ಇರುತ್ತದೆ. ಇದು ಅಲರ್ಜಿ ಮತ್ತು ಅಸ್ತಮಾ ರೋಗಲಕ್ಷಣಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಕಾಂತಿಯುತ ಚರ್ಮಕ್ಕಾಗಿ
ಪುದೀನಾ ಎಲೆಗಳು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಹಾಗೂ ಚರ್ಮದ ಮೇಲಿನ ಚಿಕ್ಕ ಗುಳ್ಳೆಗಳನ್ನು ತೆಗೆದು ಹಾಕಲು ಪುದೀನಾ ರಸ ಕೆಲಸ ಮಾಡುತ್ತದೆ. ಪುದೀನಾ ಎಲೆಯ ರಸವನ್ನು ಚರ್ಮಕ್ಕೆ ಹಚ್ಚುವುದರಿಂದ ತುರಿಕೆಯಂತಹ ಸಮಸ್ಯೆಗಳಿಗೂ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Benefits of Mint Leaves: ಸುವಾಸನೆಯುಕ್ತ ಮೂಲಿಕೆ ಪುದೀನಾದಿಂದ ಇರುವ ವೈದ್ಯಕೀಯ ಉಪಯೋಗಗಳು ಒಂದೆರಡಲ್ಲ..!