Miscarriages: ಈ ತಪ್ಪುಗಳು ಮಹಿಳೆಯರಲ್ಲಿ ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು

| Updated By: ಅಕ್ಷಯ್​ ಪಲ್ಲಮಜಲು​​

Updated on: May 16, 2024 | 4:04 PM

 ಇಂದಿನ ದಿನಗಳಲ್ಲಿ ವೃತ್ತಿಜೀವನಕ್ಕೆ ಅನುಕೂಲವಾಗುವಂತೆ ಅಥವಾ ಇನ್ನಿತರ ಕಾರಣಗಳಿಂದ, ತಡವಾಗಿ ಮದುವೆಯಾಗುವುದು ಬಳಿಕ ಮಗು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ, ಅದರಲ್ಲಿಯೂ ಮಹಿಳೆಯರು ತುಂಬಾ ವಯಸ್ಸಾದ ಮೇಲೆ ಮಗು ಮಾಡಿಕೊಳ್ಳಲು ಯೋಜಿಸುತ್ತಿದ್ದಾರೆ, ಇದರಿಂದಾಗಿ ಗರ್ಭಪಾತ ಪ್ರಕರಣಗಳು ಹೆಚ್ಚುತ್ತಿದೆ. ಇದರ ಹೊರತಾಗಿ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಲು ಅನೇಕ ಕಾರಣಗಳಿವೆ. ಅವು ಯಾವವು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Miscarriages: ಈ ತಪ್ಪುಗಳು ಮಹಿಳೆಯರಲ್ಲಿ ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು
Follow us on

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಅತ್ಯಂತ ವಿಶೇಷ ಭಾವನೆ. ಆದರೆ ಇಂದಿನ ದಿನಗಳಲ್ಲಿ ವೃತ್ತಿಜೀವನಕ್ಕೆ ಅನುಕೂಲವಾಗುವಂತೆ ಅಥವಾ ಇನ್ನಿತರ ಕಾರಣಗಳಿಂದ, ತಡವಾಗಿ ಮದುವೆಯಾಗುವುದು ಬಳಿಕ ಮಗು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ, ಅದರಲ್ಲಿಯೂ ಮಹಿಳೆಯರು ತುಂಬಾ ವಯಸ್ಸಾದ ಮೇಲೆ ಮಗು ಮಾಡಿಕೊಳ್ಳಲು ಯೋಜಿಸುತ್ತಿದ್ದಾರೆ, ಇದರಿಂದಾಗಿ ಗರ್ಭಪಾತ ಪ್ರಕರಣಗಳು ಹೆಚ್ಚುತ್ತಿದೆ. ಇದರ ಹೊರತಾಗಿ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಲು ಅನೇಕ ಕಾರಣಗಳಿವೆ. ಅವು ಯಾವವು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ತ್ರೀರೋಗ ತಜ್ಞ ಡಾ. ನೂಪುರ್ ಗುಪ್ತಾ ಅವರು ಹೇಳುವ ಪ್ರಕಾರ, ವಯಸ್ಸು ಹೆಚ್ಚಾದಂತೆ, ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಂಡುಬರಲು ಪ್ರಾರಂಭಿಸುತ್ತವೆ, ಅವುಗಳಲ್ಲಿ ಒಂದು ಗರ್ಭಾಶಯದಲ್ಲಿ ಕಡಿಮೆ ಅಂಡಾಣುಗಳ ಉತ್ಪತ್ತಿ ಮತ್ತು ಕಳಪೆ ಗುಣಮಟ್ಟದ ಅಂಡಾಣುಗಳ ಸಮಸ್ಯೆಯೂ ಒಂದಾಗಿದೆ. 30 ರಿಂದ 35 ವರ್ಷದ ನಂತರ ಮಗು ಮಾಡಿಕೊಳ್ಳಲು ಯೋಚಿಸಿದಾಗ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಗರ್ಭಧರಿಸಲು ಕಷ್ಟವಾಗುತ್ತದೆ ಜೊತೆಗೆ ಗರ್ಭ ಧರಿಸಿದರೆ ಗರ್ಭಪಾತದ ಸಮಸ್ಯೆ ಉಂಟಾಗಬಹುದು. ಆದ್ದರಿಂದ, 25 ರಿಂದ 30 ವರ್ಷ ವಯಸ್ಸು ಮಕ್ಕಳನ್ನು ಪಡೆಯಲು ಉತ್ತಮ ಸಮಯ ಎಂದು ಹೇಳಲಾಗುತ್ತದೆ.

ಧೂಮಪಾನ ಮತ್ತು ಮದ್ಯಪಾನ

ಇತ್ತೀಚಿನ ದಿನಗಳಲ್ಲಿ, ಧೂಮಪಾನ ಮತ್ತು ಮದ್ಯಪಾನ ಮಾಡುವ ಪ್ರವೃತ್ತಿ ಮಹಿಳೆಯರಲ್ಲಿ ಸಾಕಷ್ಟು ಹೆಚ್ಚಾಗಿದೆ. ಇದರಿಂದಾಗಿ ಮಹಿಳೆಯರ ಅಂಡಾಣುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಹ ಮಹಿಳೆಯರು ಗರ್ಭಧರಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ ಜೊತೆಗೆ ಅವರಲ್ಲಿ ಗರ್ಭಪಾತದ ಪ್ರಕರಣಗಳು ಸಹ ಹೆಚ್ಚಾಗಿ ಕಂಡುಬರುತ್ತವೆ.

ಹಿಮ್ಮಡಿಯ ಭಾಗ ಎತ್ತರವಿರುವ ಚಪ್ಪಲಿಗಳನ್ನು ಧರಿಸುವುದು

ಹಿಮ್ಮಡಿ ಮತ್ತು ಗರ್ಭಧಾರಣೆಯ ನಡುವೆ ಯಾವುದೇ ನೇರ ಸಂಬಂಧವಿಲ್ಲದಿದ್ದರೂ, ಆರಂಭಿಕ ತಿಂಗಳುಗಳಲ್ಲಿ, ಅನೇಕ ಮಹಿಳೆಯರು ಹಿಮ್ಮಡಿಯ ಭಾಗ ಎತ್ತರವಿರುವ ಚಪ್ಪಲಿಗಳನ್ನು ಧರಿಸಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದನ್ನು ಹಾಕಿಕೊಂಡು ನಡೆಯುವಾಗ ಎಲ್ಲಿಯಾದರೂ ನಡಿಗೆಯಲ್ಲಿ ವ್ಯತ್ಯಾಸವಾಗಿ ಬಿದ್ದರೆ ಗರ್ಭಪಾತಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಈ ರೀತಿಯ ಆಹಾರ ಪದ್ಧತಿ ಬಂಜೆತನಕ್ಕೆ ಕಾರಣವಾಗಬಹುದು; ಸಂಶೋಧನೆ

ಹಾರ್ಮೋನುಗಳ ಸಮಸ್ಯೆಗಳು

ಅನೇಕ ಹಾರ್ಮೋನುಗಳ ಸಮಸ್ಯೆಗಳು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ. ಹಾರ್ಮೋನುಗಳ ವ್ಯತ್ಯಾಸ ಗರ್ಭಧಾರಣೆಯ ಮೇಲೆ ಪರಿಣಾಮ ಬೀರುತ್ತವೆ, ಆದ್ದರಿಂದ ಗರ್ಭಧರಿಸುವ ಮೊದಲು, ವೈದ್ಯರನ್ನು ಸಂಪರ್ಕಿಸಿ ಮತ್ತು ಅಗತ್ಯವಿರುವ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

ಅನಗತ್ಯ ಔಷಧಿಗಳ ಸೇವನೆ

ಅನೇಕ ರೀತಿಯ, ಅಗತ್ಯವಿಲ್ಲದ ಔಷಧಿಗಳ ಸೇವನೆಯು ಗರ್ಭಪಾತಕ್ಕೆ ಕಾರಣವಾಗಬಹುದು, ಆದ್ದರಿಂದ ಗರ್ಭಧಾರಣೆಯ ಪ್ರಾರಂಭದ ನಂತರ, ನಿಮ್ಮ ವೈದ್ಯರನ್ನು ಸಂಪರ್ಕಿಸದೆ ಯಾವುದೇ ಔಷಧಿಯನ್ನು ತೆಗೆದುಕೊಳ್ಳಬೇಡಿ. ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.

ಮಧುಮೇಹ ಸಮಸ್ಯೆ

ಮಧುಮೇಹವು ಗರ್ಭಪಾತಕ್ಕೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಮಧುಮೇಹವನ್ನು ನಿಯಂತ್ರಿಸುವುದು ಬಹಳ ಮುಖ್ಯ, ವೈದ್ಯರ ಸಲಹೆಯ ಪ್ರಕಾರ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ ಮತ್ತು ಅನಗತ್ಯ ಔಷಧಿಗಳನ್ನು ಬಳಸುವುದನ್ನು ತಪ್ಪಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ