
ಮಳೆಗಾಲವಾದ್ದರಿಂದ ಪ್ರತಿನಿತ್ಯ ಹೋಗುವ ದಾರಿಯಲ್ಲಿ ನೀರು, ಕೆಸರು ಎಲ್ಲವೂ ಇರುತ್ತದೆ. ಈ ಋತುವಿನಲ್ಲಿ ಇದು ಸಾಮಾನ್ಯ. ಕೆಲವೊಮ್ಮೆ ಕೊಳಚೆ ನೀರಿರುವ ದಾರಿಯಲ್ಲಿ ಹೆಜ್ಜೆ ಹಾಕಬೇಕಾಗುತ್ತದೆ. ಅದಲ್ಲದೆ ನಾವು ಧರಿಸುವ ಚಪ್ಪಲಿಗಳು ಸರಿಯಾಗಿ ಇಲ್ಲದಿದ್ದರೂ ಕೂಡ ನಂಜಿನ ಕಾರಣದಿಂದ ಕಾಲ್ಬೆರಳುಗಳ ಮಧ್ಯೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಈ ರೀತಿ ಮಳೆಗಾಲದಲ್ಲಿ (rainy season) ಬರುವ ಈ ಫಂಗಲ್ ಸೋಂಕಿನಿಂದ (Fungal Foot Infections) ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ, ಈ ರೀತಿ ಕಂಡು ಬರುವ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟಲು, ಮಳೆಗಾಲದಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಕೆಲವೊಂದು ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಈ ಫಂಗಲ್ ಸೋಂಕಿನಂತಹ ಸಮಸ್ಯೆಗೆ ಮನೆಯಲ್ಲೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಮಳೆಗಾಲದಲ್ಲಿ ಕೊಳಚೆ ನೀರು, ನಾವು ಧರಿಸುವ ಚಪ್ಪಲಿ ಹಾಗೂ ನಂಜಿನ ಕಾರಣದಿಂದ ಕಾಲ್ಬೆರಳುಗಳ ಮಧ್ಯೆ ಅಲರ್ಜಿ, ತುರಿಕೆ ಉಂಟಾಗುತ್ತದೆ. ಈ ಫಂಗಲ್ ಸೋಂಕಿನಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಈ ರೀತಿ ಆಗದಿರಲು ಮಳೆಗಾಲದಲ್ಲಿ ನಮ್ಮ ಪಾದಗಳನ್ನು ಮರೆಯದೆಯೇ ಸ್ವಚ್ಛಗೊಳಿಸಿಕೊಳ್ಳಬೇಕು. ವಿಶೇಷವಾಗಿ ಮಳೆಯಲ್ಲಿ ಒದ್ದೆಯಾಗಿ ಮನೆಗೆ ಬಂದ ನಂತರ, ನಿಮ್ಮ ಪಾದಗಳನ್ನು ಸೌಮ್ಯವಾದ ಸೋಪ್ ಮತ್ತು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ನಿಮ್ಮ ಪಾದಗಳನ್ನು ಶಿಲೀಂಧ್ರ ಸೋಂಕು ಅಥವಾ ಇತರ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು.
ನಿಮ್ಮ ಪಾದಗಳು, ಕಾಲ್ಬೆರಳುಗಳು ಮತ್ತು ವಿಶೇಷವಾಗಿ ಕಾಲ್ಬೆರಳುಗಳ ನಡುವೆ ಮೃದುವಾದ ಟವಲ್‌ನಿಂದ ನೀರು ಇಲ್ಲದಂತೆ ಚೆನ್ನಾಗಿ ಒಣಗಿಸಿ. ಹೀಗೆ ಮಾಡುವುದರಿಂದ, ಕಾಲ್ಬೆರಳುಗಳಲ್ಲಿ ನೀರು ಸಂಗ್ರಹವಾಗುವುದನ್ನು ನೀವು ತಡೆಯಬಹುದು. ಇದು ನಂಜಾಗದಂತೆ ತಡೆಯಲು ಸಹಾಯ ಮಾಡುತ್ತದೆ.
ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಜಿಡ್ಡು ಇಲ್ಲದಂತಹ ಮಾಯಿಶ್ಚರೈಸರ್ ಹಚ್ಚಿ. ವಿಶೇಷವಾಗಿ ನಿಮ್ಮ ಪಾದಗಳು ಬೆವರುತ್ತಿದ್ದರೆ, ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳಲು ಆಂಟಿಫಂಗಲ್ ಪೌಡರ್ ಬಳಸಿ.
ನಿಮ್ಮ ಕಾಲಿನ ಉಗುರುಗಳ ಕೆಳಗೆ ಕೊಳಕು ಮತ್ತು ಕಸ ಸಂಗ್ರಹವಾಗುವುದನ್ನು ತಡೆಯಲು, ಅವುಗಳನ್ನು ನಿಯಮಿತವಾಗಿ ಕತ್ತರಿಸಿ. ನೀವು ಇದನ್ನು ಮಾಡದಿದ್ದರೆ, ಉಗುರುಗಳಲ್ಲಿ ಕೊಳಕು ಸಂಗ್ರಹವಾಗಬಹುದು, ಇದು ಪಾದಗಳಲ್ಲಿ ಫಂಗಲ್ ಸೋಂಕಿಗೆ ಕಾರಣವಾಗಬಹುದು.
ಇದನ್ನೂ ಓದಿ: ಎಷ್ಟೇ ಕಡಿಮೆ ಬೆಲೆ ಇರಲಿ, ಮಳೆಗಾಲದಲ್ಲಿ ಮಾತ್ರ ಈ ಹಣ್ಣುಗಳನ್ನು ಮನೆಗೆ ತರಬೇಡಿ
ಒದ್ದೆ ಅಥವಾ ಹೆಚ್ಚಿನ ನೀರಿರುವ ಪ್ರದೇಶಗಳಲ್ಲಿ ಬರಿಗಾಲಿನಲ್ಲಿ ನಡೆಯಬೇಡಿ, ಆದಷ್ಟು ಶೂ ಬಳಕೆ ಮಾಡಿ. ಏಕೆಂದರೆ ಇದು ನಿಮ್ಮ ಪಾದಗಳಲ್ಲಿ ಫಂಗಲ್ ಸೋಂಕಿಗೆ ಕಾರಣವಾಗಬಹುದು. ನೀವು ಹೊರಗೆ ಹೋಗಿ ಬಂದ ನಂತರ ಕಡಿತ ಆರಂಭವಾದರೆ ತಕ್ಷಣ ನಂಜುನಿರೋಧಕ ಕ್ರೀಮ್ ಹಚ್ಚಿಕೊಳ್ಳುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ