ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಬರುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಂಟಾಗುವ ಕೆಲವು ಸಾಮಾನ್ಯ ರೋಗಗಳಿಂದ ನಿಮ್ಮನ್ನು ತಡೆಯುವ ಈ ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಇಲ್ಲಿದೆ ಮಾಹಿತಿ. ಮಾನ್ಸೂನ್ ಈಗಾಗಲೇ ಆರಂಭವಾಗಿದ್ದು ಅಸಹನೀಯ ಬೇಸಿಗೆಯ ತಾಪಮಾನದಿಂದ ಬಹುನಿರೀಕ್ಷಿತ ಪರಿಹಾರವನ್ನು ತಂದು ಕೊಟ್ಟಿದ್ದು ನಿಜವಾದರೂ ಮಳೆಗಾಲವು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಸಹ ತರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ಮಳೆಗಾಲದಲ್ಲಿ ಬರುವ ಕೆಲವು ಸಾಮಾನ್ಯ ರೋಗಗಳು ತಡೆಯಲು ಮುನ್ನೆಚ್ಚರಿಕೆ ವಹಿಸುವುದದರ ಜೊತೆಗೆ ಕೆಲವು ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಪ್ರತಿನಿತ್ಯ ನೀವು ಮಾಡುವ ತಪ್ಪುಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತವೆ. ಹಾಗಾದರೆ ನೀವು ಮಾಡುವ ತಪ್ಪುಗಳೇನು? ಏನು ಮಾಡಬಾರದು? ಮಾಹಿತಿ ಇಲ್ಲಿದೆ.
ಹೊರಗೆ ತಿನ್ನುವುದರಿಂದ ನೀರಿನಿಂದ ಹರಡುವ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಬೀದಿ ಬದಿಯ ಆಹಾರಗಳನ್ನು ಮತ್ತು ರೆಸ್ಟೋರೆಂಟ್ ಗಳಲ್ಲಿ ತಿನ್ನುವುದನ್ನು ತಪ್ಪಿಸಿ ಏಕೆಂದರೆ ಮಳೆಗಾಲವು ಬ್ಯಾಕ್ಟೀರಿಯಾಗಳ ಬೆಳವಣಿಗೆ ತುಂಬಾ ವೇಗವಾಗಿ ಆಗುವುದರಿಂದ ಆಹಾರ ಪದಾರ್ಥಗಳನ್ನು ಕಲುಷಿತಗೊಳಿಸುತ್ತದೆ. ಅಂತಹ ಆಹಾರ, ನೀರು ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ.
ಮಳೆಗಾಲದಲ್ಲಿ ಸಮೋಸಾ ಮತ್ತು ಪಕೋಡಾ ಎಲ್ಲರ ಅಚ್ಚು ಮೆಚ್ಚಿನವು ಆದರೆ ಅವುಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ. ಎಣ್ಣೆಯುಕ್ತ ಮತ್ತು ಜಿಡ್ಡಿನ ಆಹಾರವು ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ನೀವು ಎಣ್ಣೆಯಲ್ಲಿ ಮಾಡಿದ ತಿಂಡಿಯನ್ನು ತಿನ್ನಲು ಹಂಬಲಿಸುತ್ತಿದ್ದರೆ, ರಸ್ತೆ ಬದಿಯ ಆಹಾರವನ್ನು ಸೇವಿಸುವ ಬದಲು ಅವುಗಳನ್ನು ಮನೆಯಲ್ಲಿ ತಯಾರಿಸುವುದು ಉತ್ತಮ.
ಇದನ್ನೂ ಓದಿ: Monsoon 2023: ಮಳೆಗಾಲದಲ್ಲಿ ಕೂದಲು ಉದುರುವಿಕೆಯನ್ನು ತಡೆಯುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ
ಮಾನ್ಸೂನ್ ಸಮಯದಲ್ಲಿ, ಕಡಿಮೆ ಸೂರ್ಯನ ಬೆಳಕು ಇರುವುದರಿಂದ ಇದು ತೇವಾಂಶಕ್ಕೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆ ಉಂಟಾಗುತ್ತದೆ. ಆದ್ದರಿಂದ, ಅವುಗಳನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯುವುದು ಮತ್ತು ತಿನ್ನುವ ಮೊದಲು ಸರಿಯಾಗಿ ಬೇಯಿಸುವುದು ಮುಖ್ಯವಾಗುತ್ತದೆ.
ಈ ಋತುವಿನಲ್ಲಿ ಮಾಲಿನ್ಯದ ಅಪಾಯವು ಹೆಚ್ಚಾಗಿರುತ್ತದೆ, ಇದು ಮಾಂಸಾಹಾರಿ ಆಹಾರವನ್ನು ಸೋಂಕುಗಳಿಗೆ ಗುರಿಯಾಗಿಸುತ್ತದೆ. ಹಾಗಾಗಿ ಹೆಚ್ಚು ನಾನ್ ವೆಜ್ ಆಹಾರವನ್ನು ಸೇವಿಸದಿರುವುದು ಒಳ್ಳೆಯದು.
ಹೊಟ್ಟೆಯ ಸೋಂಕು ಮತ್ತು ಜ್ವರದ ಹೊರತಾಗಿ, ಸೊಳ್ಳೆಯಿಂದ ಹರಡುವ ರೋಗಗಳು ಸಹ ಮಳೆಗಾಲದಲ್ಲಿ ಸಾಕಷ್ಟು ಸಾಮಾನ್ಯವಾಗಿದೆ. ಹೀಗಾಗಿ, ನಿಮ್ಮ ಮನೆ ಅಥವಾ ಆವರಣದೊಳಗೆ ಎಲ್ಲಿಯೂ ನೀರು ನಿಂತಿಲ್ಲ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಕೂಲರ್ಗಳು, ಹೂದಾನಿಗಳು ಅಥವಾ ಮಡಕೆಗಳು ಇತ್ಯಾದಿಗಳನ್ನು ಕಾಲ ಕಾಲಕ್ಕೆ, ಎಲ್ಲಿ ನೀರು ನಿಲ್ಲುವ ಸಾಧ್ಯತೆಗಳಿವೆಯೋ ಅಲ್ಲಿ ಖಾಲಿ ಮಾಡುತ್ತಲೇ ಇರಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:48 pm, Thu, 29 June 23