Food Poisoning: ಮಳೆಗಾಲದಲ್ಲಿ ಕಾಡುವ ಫುಡ್​ಪಾಯ್ಸನ್​ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಲ್ಲಿವೆ ಟಿಪ್ಸ್​

|

Updated on: Jun 29, 2023 | 12:55 PM

ಮಳೆಗಾಲ ಶುರುವಾದಾಕ್ಷಣ ರೋಗಗಳ ಸರಮಾಲೆಯೇ ಆರಂಭವಾಗುತ್ತದೆ. ಏನೇ ತಿಂದರೂ ಜೀರ್ಣವಾಗದೇ ಇರುವುದು, ಪದೇ ಪದೇ ವಾಂತಿ, ಹೊಟ್ಟೆನೋವು, ಅತಿಸಾರದಂತಹ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು

Food Poisoning: ಮಳೆಗಾಲದಲ್ಲಿ ಕಾಡುವ ಫುಡ್​ಪಾಯ್ಸನ್​ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಲ್ಲಿವೆ ಟಿಪ್ಸ್​
ಫುಡ್ ಪಾಯ್ಸನ್
Follow us on

ಮಳೆಗಾಲ ಶುರುವಾದಾಕ್ಷಣ ರೋಗಗಳ ಸರಮಾಲೆಯೇ ಆರಂಭವಾಗುತ್ತದೆ. ಏನೇ ತಿಂದರೂ ಜೀರ್ಣವಾಗದೇ ಇರುವುದು, ಪದೇ ಪದೇ ವಾಂತಿ, ಹೊಟ್ಟೆನೋವು, ಅತಿಸಾರದಂತಹ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅದರಲ್ಲಿ ಫುಡ್​ ಪಾಯ್ಸನ್​ ಕೂಡ ಒಂದು. ಮಳೆಗಾಲ ಬಾಯಾರಿಕೆಯಾಗುವುದಿಲ್ಲ ಎಂದು ನೀರು ಕಡಿಮೆ ಕುಡಿದರೆ ಖಾರವಾದ ಪದಾರ್ಥಗಳನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಉದ್ಭವಿಸಬಹುದು.

ಮಳೆಗಾಲದಲ್ಲಿ ಬಿಸಿ ಬಿಸಿ ಏನಾದರೂ ತಿನ್ನಬೇಕೆಂಬ ಆಸೆ ಹುಟ್ಟುವುದು ಸಹಜ ಆಗ ಬೀದಿ ಬದಿಗಳಲ್ಲಿ ಸಿಗುವ ಆಹಾರವನ್ನು ತಿನ್ನುವ ಬದಲು ಮನೆಯಲ್ಲೇ ಏನಾದರೂ ಮಾಡಿಕೊಂಡು ತಿಂದರೆ ಒಳಿತು. ವಾಸ್ತವವಾಗಿ ಫುಡ್​ ಪಾಯ್ಸನ್ ಸಮಸ್ಯೆಯು ಕಲುಷಿತ ಆಹಾರವನ್ನು ಸೇವಿಸುವುದರಿಂದ ಉಂಟಾಗುತ್ತದೆ. ಅದೇ ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು ಬ್ಯಾಕ್ಟೀರಿಯಾ ಸುಲಭವಾಗಿ ಹರಡುತ್ತದೆ.

ಈ ಬ್ಯಾಕ್ಟೀರಿಯಾಗಳು ಆಹಾರವನ್ನು ಕಲುಷಿತಗೊಳಿಸುತ್ತವೆ ಮತ್ತು ಆಹಾರವು ನಿಮ್ಮ ಹೊಟ್ಟೆಗೆ ಹೋಗುತ್ತದೆ ಮತ್ತು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಮತ್ತಷ್ಟು ಓದಿ: ನೆರೆ ರಾಜ್ಯ ಕೇರಳದಲ್ಲಿ ಆತಂಕ ಸೃಷ್ಟಿಸಿದ ಜ್ವರ: ಕರ್ನಾಟಕದ ಶಾಲಾ-ಕಾಲೇಜುಗಳಿಗೆ ಆರೋಗ್ಯ ಇಲಾಖೆ ಅಲರ್ಟ್

ಹಿಂದಿನ ದಿನ ಮಾಡಿದ ಊಟವನ್ನು ತಿನ್ನಬೇಡಿ 
ಮಳೆಗಾಲದಲ್ಲಿ ಹಳಸಿದ ಆಹಾರವನ್ನು ಎಂದಿಗೂ ಸೇವಿಸಬಾರದು. ಏಕೆಂದರೆ ಹಳಸಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಪರಿಸರದಲ್ಲಿನ ತೇವಾಂಶದಿಂದ ಬ್ಯಾಕ್ಟೀರಿಯಾಗಳು ಆಹಾರಕ್ಕೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ಹಿಂದಿನ ದಿನ ಮಾಡಿದ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ.

ಅರ್ಧ ಬೇಯಿಸಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ
ಅರ್ಧ ಬೇಯಿಸಿದ ಆಹಾರವನ್ನು ಎಂದಿಗೂ ತಿನ್ನಬೇಡಿ. ಏಕೆಂದರೆ ಹೊರಗಿನಿಂದ ತಂದ ತರಕಾರಿ ಅಥವಾ ಮಾಂಸಾಹಾರಿ ವಸ್ತುಗಳ ಮೇಲೆ ಬ್ಯಾಕ್ಟೀರಿಯಾಗಳು ಈಗಾಗಲೇ ಇರುತ್ತವೆ. ನೀವು ಅದನ್ನು ಸರಿಯಾಗಿ ಬೇಯಿಸದಿದ್ದರೆ, ಈ ಸೂಕ್ಷ್ಮಜೀವಿಗಳು ಸಾಯುವುದಿಲ್ಲ ಮತ್ತು ಆದ್ದರಿಂದ ಫುಡ್​ ಪಾಯ್ಸನ್ ಉಮಟಾಗಬಹುದು. ಯಾವಾಗಲೂ ಹೆಚ್ಚಿನ ತಾಪಮಾನದಲ್ಲಿ ಆಹಾರವನ್ನು ಬೇಯಿಸಿ ತಿನ್ನುವುದು ಉತ್ತಮ.

ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ
ನೀವು ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸುವ ಮೊದಲು ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಏಕೆಂದರೆ ಮಳೆಗಾಲದಲ್ಲಿ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಸುಲಭವಾಗಿ ಅವುಗಳನ್ನು ಸೇರುತ್ತವೆ. ಹಣ್ಣುಗಳು ಅಥವಾ ತರಕಾರಿಗಳನ್ನು ತೊಳೆಯದೆ ತಿಂದರೆ ಆ ಬ್ಯಾಕ್ಟೀರಿಯಾಗಳು ನಿಮ್ಮ ದೇಹದೊಳಗೆ ಹೋಗಬಹುದು.
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ತರಕಾರಿ ತೊಳೆಯುವ ದ್ರವವನ್ನು ನೀವು ಬೇಕಾದರೆ ಬಳಸಬಹುದು.

ಅಡುಗೆ ಮನೆಯ ಸ್ವಚ್ಛತೆ ಅವಶ್ಯ
ಮಳೆಗಾಲದಲ್ಲಿ ಅಡುಗೆ ಮನೆಯ ಸ್ವಚ್ಛತೆಗೆ ವಿಶೇಷ ಗಮನ ಕೊಡಿ. ತರಕಾರಿಗಳನ್ನು ಕತ್ತರಿಸುವ ಹಲಗೆಗಳು, ಚಾಕುಗಳು ಮತ್ತು ಪಾತ್ರೆಗಳನ್ನು ತೊಳೆಯುತ್ತಿರಿ.

ಇದು ನಿಮ್ಮ ಅಡುಗೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಮುಕ್ತವಾಗಿರುತ್ತದೆ. ಮೊದಲೇ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ ಮಳೆಗಾಲದಲ್ಲಿ ಮೊದಲೇ ಕತ್ತರಿಸಿದ ಹಣ್ಣುಗಳನ್ನು ತಿನ್ನಬೇಡಿ. ಏಕೆಂದರೆ ಬ್ಯಾಕ್ಟೀರಿಯಾಗಳು ಹಣ್ಣುಗಳ ಮೇಲೆ ಅಂಟಿಕೊಳ್ಳಬಹುದು, ಇದರಿಂದಾಗಿ ಅವು ನಿಮ್ಮ ಹೊಟ್ಟೆಗೆ ಹೋಗಿ ಅನಾರೋಗ್ಯಕ್ಕೆ ಕಾರಣವಾಗಬಹುದು. ನೀವು ಹಣ್ಣುಗಳನ್ನು ಸೇವಿಸಲು ಬಯಸಿದಾಗ, ತಾಜಾ ಹಣ್ಣುಗಳನ್ನು ಕತ್ತರಿಸಿ ತಿಂದುಬಿಡಿ.

ಸ್ಟ್ರೀಟ್ ಫುಡ್ ತಿನ್ನುವುದನ್ನು ತಪ್ಪಿಸಿ
ಬೀದಿ ಆಹಾರದಿಂದ ದೂರವಿರಿ ಏಕೆಂದರೆ ಈ ಆಹಾರಗಳು ತೆರೆದಿರುವುದರಿಂದ ಅವುಗಳ ಮೇಲೆ ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಹೆಚ್ಚು, ನೀವು ಈ ಆಹಾರವನ್ನು ಸೇವಿಸಿದರೆ ನಿಮ್ಮ ಹೊಟ್ಟೆ ಹಾಳಾಗುವುದು ಖಂಡಿತ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ