
ಇತ್ತೀಚಿಗೆ ಆರೋಗ್ಯ (Health) ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಲೇ ಇರುತ್ತದೆ. ಕೆಲವು ಗಂಭೀರ ಸಮಸ್ಯೆಗಳಾಗಿದ್ದರೆ ಇನ್ನು ಕೆಲವು ಬಗೆಹರಿಸಿಕೊಳ್ಳಬಹುದಾಗಿರುತ್ತದೆ. ಅಂತವುಗಳಲ್ಲಿ ಈ ಮುಖ (Face) ಊದಿಕೊಳ್ಳುವ ಸಮಸ್ಯೆಯೂ ಒಂದು. ಅನೇಕರು ಬೆಳಿಗ್ಗೆ ಎದ್ದು ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡರೆ ಮುಖ ಸ್ವಲ್ಪ ಊದಿಕೊಂಡಂತೆ (Face Swelling) ಕಾಣುವುದನ್ನು ಗಮನಿಸಿರುತ್ತಾರೆ. ಸ್ನಾನ, ಚಹಾ ಅಥವಾ ಕಾಫಿ ಕುಡಿದ ನಂತರವೂ ಮುಖದ ಮೇಲಿನ ಊತವು ಕಡಿಮೆ ಆಗುವುದಿಲ್ಲ. ಆದರೆ ಈ ರೀತಿಯಾಗುವುದಕ್ಕೆ ನಿಖರವಾದ ಕಾರಣವೇನು, ಕಳೆದ ಕೆಲವು ವರ್ಷಗಳಿಂದ ಈ ರೀತಿ ಸಮಸ್ಯೆ ಕಂಡುಬರುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಬೆಳಿಗ್ಗೆ ಎದ್ದ ತಕ್ಷಣ ಅನೇಕರಲ್ಲಿ ಮುಖದ ಊತ ಕಾಣಿಸಿಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಿಂದ, ಮುಖದ ಊತದ ಸಮಸ್ಯೆ ಅನೇಕರಲ್ಲಿ ಹೆಚ್ಚುತ್ತಿದೆ. ಇದು ಸಂಭವಿಸಲು ಕಾರಣ, ಊಟಕ್ಕೆ ಕುಳಿತಾಗ ಅಗತ್ಯಕ್ಕಿಂತ ಹೆಚ್ಚಾಗಿ ಉಪ್ಪನ್ನು ಸೇವನೆ ಮಾಡುವುದಾಗಿದೆ. ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡಿದಾಗ ಮುಖದ ಊತ ಉಂಟಾಗುತ್ತದೆ. ಆದ್ದರಿಂದ, ಊಟ ಮಾಡುವಾಗ ಉಪ್ಪನ್ನು ಕಡಿಮೆ ಸೇವನೆ ಮಾಡುವುದು ಅವಶ್ಯಕ. ಉಪ್ಪು ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ, ಮಾತ್ರವಲ್ಲ ಮುಖ ಊದಿಕೊಂಡ ಹಾಗೆ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಗೆ ಈ 2 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಮುಖ ಹೊಳೆಯುವುದು ಖಂಡಿತ
ರಾತ್ರಿ ಮಲಗುವ ಮೊದಲು ಹೆಚ್ಚು ಆಹಾರ ಸೇವನೆ ಮಾಡಬಾರದು ಜೊತೆಗೆ ಉಪ್ಪು ಕಡಿಮೆ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಮುಖದ ಊತವನ್ನು ಕಡಿಮೆ ಮಾಡಬಹುದಾಗಿದೆ. ಉಪ್ಪಿನ ಸೇವನೆಯ ಜೊತೆಗೆ, ನಿದ್ರೆಯ ಗುಣಮಟ್ಟವೂ ಸಹ ಇದಕ್ಕೆ ಕಾರಣವಾಗಿದೆ. ಹಾಗಾಗಿ ರಾತ್ರಿ ಸಮಯದಲ್ಲಿ ತುಂಬಾ ಕಡಿಮೆ ನಿದ್ರೆ ಮಾಡಿದರೆ ಅಥವಾ ಒಂದೇ ಬದಿಯಲ್ಲಿ ಮಲಗಿದರೆ, ಮುಖಕ್ಕೆ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹಾಗಾಗಿ ಇದು ಕೂಡ ಮುಖದ ಊತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ರಾತ್ರಿ 7 ರಿಂದ 8 ಗಂಟೆ ಚೆನ್ನಾಗಿ ನಿದ್ರಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಮುಖದ ಊತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ