Nap: ಹಗಲಿನಲ್ಲಿ ಮಾಡುವ ಚಿಕ್ಕನಿದ್ರೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

| Updated By: ನಯನಾ ರಾಜೀವ್

Updated on: Jun 13, 2022 | 4:07 PM

ಹಗಲಿನಲ್ಲಿ ಮಾಡುವ ಐದು ಅಥವಾ ಹತ್ತು ನಿಮಿಷಗಳ ನಿದ್ರೆ(Sleep) ಮನಸ್ಸಿಗೆ ಒಂದು ರೀತಿಯ ಖುಷಿಯನ್ನು, ಹೊಸ ಚೈತನ್ಯವನ್ನು ನೀಡುತ್ತದೆ.

Nap: ಹಗಲಿನಲ್ಲಿ ಮಾಡುವ ಚಿಕ್ಕನಿದ್ರೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?
Short Nap
Image Credit source: News9live
Follow us on

ಹಗಲಿನಲ್ಲಿ ಮಾಡುವ ಐದು ಅಥವಾ ಹತ್ತು ನಿಮಿಷಗಳ ನಿದ್ರೆ(Sleep) ಮನಸ್ಸಿಗೆ ಒಂದು ರೀತಿಯ ಖುಷಿಯನ್ನು, ಹೊಸ ಚೈತನ್ಯವನ್ನು ನೀಡುತ್ತದೆ. ಆದರೆ ನೀವು ಕೆಲಸ ಮಾಡಿ ತುಂಬಾ ದಣಿದಿದ್ದಾಗ ನಿದ್ರೆ ಮಾಡಿದರೆ ಓಕೆ ಆದರೆ ಮನೆಯಲ್ಲಿಯೇ ಇದ್ದು ರಾತ್ರಿಯೂ ಚೆನ್ನಾಗಿ ನಿದ್ರೆ ಮಾಡಿ ಮತ್ತೆ ಹಗಲಿನಲ್ಲಿ ಮಲಗಿದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿಮ್ಮನ್ನರಸಿ ಬರಲಿವೆ.

ಹಾಗಾದರೆ ಚಿಕ್ಕನಿದ್ರೆ ಯಾವಾಗ ಮಾಡಬೇಕು, ಹಗಲಿನಲ್ಲಿ ನಿದ್ರೆ ಮಾಡುವುದು ಉತ್ತಮವೇ?, ಚಿಕ್ಕನಿದ್ರೆಯಿಂದ ಆರೋಗ್ಯಕ್ಕೆ ಲಾಭವೇ ಅಥವಾ ಹಾನಿಯೇ ಎಂಬುದರ ಕುರಿತು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಒಂದೊಮ್ಮೆ ನೀವು ಹಗಲಿನಲ್ಲಿ ನಿದ್ರೆ ಮಾಡುತ್ತೀರಿ ಎಂದಾದರೆ ನೀವು ಇನ್ಸೋಮ್ನಿಯಾ, ನಿದ್ರಾಹೀನತೆ, ಸ್ಲೀಪ್ ಡಿಪ್ರಿವೇಷನ್ ಸಮಸ್ಯೆಯಿಂದ ಬಳಲುತ್ತಿದ್ದೀರಿ ಎಂದರ್ಥ. ನಿದ್ರೆ ಮಾಡಿ ಆದರೆ 15 ರಿಂದ 30 ನಿಮಿಷಗಳವರೆಗೆ ಮಾಡಿ ಆ ನಿದ್ರೆಯು ನಿಮ್ಮನ್ನು ಹೆಚ್ಚೆಚ್ಚು ಕೆಲಸ ಮಾಡಲು ಉತ್ತೇಜಿಸುತ್ತದೆ.

ಯುವಕರು ನಿತ್ಯ ರಾತ್ರಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು, ಆದರೆ ಶೇ.36ರಷ್ಟು ಮಂದಿ ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ.

ಒಂದು ಚಿಕ್ಕನಿದ್ರೆಯಿಂದ ಏನೆಲ್ಲಾ ಪ್ರಯೋಜನವಿದೆ?
-ರೋಗ ನಿರೋಧಕ ಶಕ್ತಿ ಹೆಚ್ಚಳ
-ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಖಿನ್ನತೆ, ಅಲ್​ಝೈಮರ್​ನಂತಹ ಕಾಯಿಲೆಗಳಿಂದ ದೂರವಿರಬಹುದು
-ನಿಮ್ಮ ಮಾನಸಿಕ ಸ್ಥಿತಿ ಸುಧಾರಿಸಿ, ಸದಾ ಕ್ರಿಯಾಶೀಲರಾಗಿರುವಂತೆ ಮಾಡುತ್ತದೆ
-ನಿಮ್ಮ ನೆನಪಿನ ಶಕ್ತಿ ಉತ್ತಮವಾಗಲಿದೆ

ಚಿಕ್ಕನಿದ್ರೆ ಮಾಡಲು ಯಾವ ಸಮಯ ಒಳ್ಳೆಯದು
-ಮಧ್ಯಾಹ್ನ 1 ರಿಂದ 3 ಗಂಟೆ ಅಥವಾ ಸಂಜೆ 5 ರಿಂದ 7 ಗಂಟೆಯ ಸಮಯದಲ್ಲಿ ಜನರು ಚಿಕ್ಕನಿದ್ರೆ ಮಾಡಬಹುದು. ನಿದ್ರೆ ಮಾಡಿದಾಕ್ಷಣ ಅವರು ಸೋಮಾರಿ, ಲೇಜಿ ಎನ್ನುವುದು ತಪ್ಪು, ಈ ಪವರ್​ ನ್ಯಾಪ್​ನಿಂದ ಅವರು ಇನ್ನೂ ಹೆಚ್ಚಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
-ನಿಮ್ಮ ಪವರ್ ನ್ಯಾಪ್ 10 ರಿಂದ 30 ನಿಮಿಷದ್ದಾಗಿರಲಿ, ಆದರೆ ರಾತ್ರಿ ನಿದ್ದೆಗೆ ತೊಂದರೆಯಾಗುವಷ್ಟು ಹೊತ್ತು ಮಲಗಬೇಡಿ
-ಒಂದೊಮ್ಮೆ ನೀವು ವರ್ಕ್​ಫ್ರಂ ಹೋಂನಲ್ಲಿದ್ದರೆ ಸೋಫಾ ಅಥವಾ ಚೇರ್​ ಮೇಲೆ ಕುಳಿತು ಕೆಲ ನಿಮಿಷಗಳ ಕಾಲ ನಿದ್ರೆ ಮಾಡಿ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿಯಾಗಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ