ಭಾರತದಲ್ಲಿ ಚಿಕನ್​ಪಾಕ್ಸ್​ನ ಹೊಸ ತಳಿ ಪತ್ತೆ; ಏನಿದರ ಲಕ್ಷಣ, ನಿಯಂತ್ರಣ ಹೇಗೆ?

|

Updated on: Sep 14, 2023 | 2:21 PM

ಕೊವಿಡ್-19, ಡೆಂಗ್ಯೂ ನಂತರ ಈಗ ಭಾರತದಲ್ಲಿ ಚಿಕನ್​ಪಾಕ್ಸ್​ನ ಹೊಸ ತಳಿ ಪತ್ತೆಯಾಗಿದೆ. ಇದಕ್ಕೆ ಕ್ಲಾಡ್-9 ಎಂದು ಹೆಸರಿಡಲಾಗಿದೆ. ಜ್ವರ ಮತ್ತು ದದ್ದುಗಳು ವೈರಸ್‌ನ ಕೆಲವು ಮೊದಲ ಲಕ್ಷಣಗಳಾಗಿವೆ. ದೇಹದ ಮೇಲೆ ದದ್ದುಗಳು ಚಿಕನ್ಪಾಕ್ಸ್​ನ ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವೊಮ್ಮೆ ನೋವಿನಿಂದ ಕೂಡಿರುತ್ತದೆ.

ಭಾರತದಲ್ಲಿ ಚಿಕನ್​ಪಾಕ್ಸ್​ನ ಹೊಸ ತಳಿ ಪತ್ತೆ; ಏನಿದರ ಲಕ್ಷಣ, ನಿಯಂತ್ರಣ ಹೇಗೆ?
ಚಿಕನ್​ಪಾಕ್ಸ್
Image Credit source: iStock
Follow us on

ಇಡೀ ವಿಶ್ವವನ್ನು ಕೊವಿಡ್-19 ತಲ್ಲಣಗೊಳಿಸಿದ ನಂತರ ಅನೇಕ ಹೊಸ ರೀತಿಯ ವೈರಸ್​​ಗಳು ಕಾಣಿಸಿಕೊಳ್ಳತೊಡಗಿವೆ. ಪ್ರತಿದಿನವು ಹೊಸ ವೈರಸ್, ಕೆಲವು ಹೊಸ ರೂಪಾಂತರಿ ಅಥವಾ ಹೊಸ ಅಪರೂಪದ ಆರೋಗ್ಯ ಕಾಯಿಲೆಗಳು ಗೋಚರವಾಗುತ್ತಿವೆ. ಇದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೊವಿಡ್-19, ಡೆಂಗ್ಯೂ ನಂತರ ಈಗ ಭಾರತದಲ್ಲಿ ಚಿಕನ್​ಪಾಕ್ಸ್​ನ ಹೊಸ ತಳಿ ಪತ್ತೆಯಾಗಿದೆ. ಇದಕ್ಕೆ ಕ್ಲಾಡ್-9 ಎಂದು ಹೆಸರಿಡಲಾಗಿದೆ.

ಈ ಹೊಸ ಚಿಕನ್​ಪಾಕ್ಸ್​ನ ತಳಿ ಜರ್ಮನಿ, ಅಮೆರಿಕಾ, ಇಂಗ್ಲೆಂಡ್​​ಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಭಾರತದಲ್ಲಿ ಚಿಕನ್​ಪಾಕ್ಸ್​ಗೆ ಕಾರಣವಾಗುವ ವರಿಸೆಲ್ಲಾ-ಜೋಸ್ಟರ್ ವೈರಸ್​ನ ಇರುವಿಕೆಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಕಂಡುಹಿಡಿದಿರುವುದು ಇದೇ ಮೊದಲು. ವರಿಸೆಲ್ಲಾ ವೈರಸ್ 9 ಹರ್ಪಿಸ್ ವೈರಸ್ ತಳಿಗಳಲ್ಲಿ ಒಂದಾಗಿದೆ. ಇದು ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಚಿಕನ್​ಪಾಕ್ಸ್​ಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ, ರೋಗಿಗಳ ಸಂಪರ್ಕಕ್ಕೆ ಬಂದಿರುವ 700 ಮಂದಿ ಪೈಕಿ 77 ಜನರಿಗೆ ಅಪಾಯ ಹೆಚ್ಚು

ಕ್ಲಾಡ್ 9 ಹೊಸ ಚಿಕನ್ಪಾಕ್ಸ್ ವೈರಸ್​ನ ತಳಿಯ ರೋಗಲಕ್ಷಣಗಳು:

– ಸಣ್ಣ ಕಜ್ಜಿಗಳು

– ವಿಪರೀತ ಜ್ವರ

– ಹಸಿವಾಗದಿರುವುದು

– ತಲೆನೋವು

– ಆಯಾಸ

ಜ್ವರ ಮತ್ತು ದದ್ದುಗಳು ವೈರಸ್‌ನ ಕೆಲವು ಮೊದಲ ಲಕ್ಷಣಗಳಾಗಿವೆ. ದೇಹದ ಮೇಲೆ ದದ್ದುಗಳು ಚಿಕನ್ಪಾಕ್ಸ್​ನ ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವೊಮ್ಮೆ ನೋವಿನಿಂದ ಕೂಡಿರುತ್ತದೆ. ವ್ಯಕ್ತಿಯಲ್ಲಿ ಈ ವೈರಸ್‌ ಕಾಣಿಸಿಕೊಂಡ 2-3 ವಾರಗಳ ನಂತರ ಈ ದದ್ದುಗಳು ಬೆಳೆಯುತ್ತವೆ. ಇದಕ್ಕೂ ಮೊದಲು ಜ್ವರ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: Scrub Typhus Infection: ಸ್ಕ್ರಬ್ ಟೈಫಸ್​ನಿಂದ ಭಾರತದಲ್ಲಿ 14 ಸಾವು; ಏನಿದು ಮಾರಕ ಸೋಂಕು?

ತಡೆಗಟ್ಟುವಿಕೆ ಹೇಗೆ?:

ಸರಿಯಾಗಿ ಮತ್ತು ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಅದರಲ್ಲೂ ಕೆಮ್ಮು ಅಥವಾ ಸೀನಿನ ನಂತರ ಕೈ ತೊಳೆದುಕೊಳ್ಳುವುದು, ಚಿಕನ್​ಪಾಕ್ಸ್ ಬಂದವರಿಂದ ದೂರ ಇರುವುದು, ಸೋಂಕಿತರು ಬಳಸಿದ ಟವೆಲ್, ಬಟ್ಟೆ ಇತ್ಯಾದಿ ಉತ್ಪನ್ನಗಳನ್ನು ಬಳಸದಿರುವುದು, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದರ ಮೂಲಕ ಚಿಕನ್​ಪಾಕ್ಸ್​ ಹೊಸ ತಳಿಯನ್ನು ತಡೆಗಟ್ಟಬಹುದು.

ವಿಶೇಷವಾಗಿ ಗರ್ಭಿಣಿಯರು, ನವಜಾತ ಶಿಶುಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ