ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಇತ್ತೀಚಿನ ಗೆಜೆಟ್ ಅಧಿಸೂಚನೆಯ ಪ್ರಕಾರ, ಅಶಿಸ್ತಿನ ಅಥವಾ ಹಿಂಸಾತ್ಮಕ ನಡವಳಿಕೆಯನ್ನು ಪ್ರದರ್ಶಿಸುವ ರೋಗಿಗಳಿಗೆ ಚಿಕಿತ್ಸೆಯನ್ನು ನಿರಾಕರಿಸುವ ಅಧಿಕಾರವನ್ನು ವೈದ್ಯರಿಗೆ ನೀಡಿದೆ. NMC ನೋಂದಾಯಿತ ವೈದ್ಯಕೀಯ ಪ್ರಾಕ್ಟೀಷನರ್ ನಿಯಮಗಳು 2023 ರಲ್ಲಿ (NMC Registered Medical Practitioner Regulations 2023) ವಿವರಿಸಿರುವ ಈ ಕ್ರಮವು ರೋಗಿಗಳು ವೈದ್ಯರ ಮೇಲೆ ನಡೆಸುವ ದಾಳಿಯನ್ನು ತಡೆಗಟ್ಟವ ಗುರಿಯನ್ನು ಹೊಂದಿದೆ.
ಈ ನಿಯಮಗಳ ಅಡಿಯಲ್ಲಿ, ಚಿಕಿತ್ಸೆಯನ್ನು ನಿರಾಕರಿಸುವ ಅವರ ನಿರ್ಧಾರದ ಜೊತೆಗೆ ರೋಗಿಗಳ ಹಿಂಸೆ ಅಥವಾ ಅಶಿಸ್ತಿನ ನಡವಳಿಕೆಯ ಯಾವುದೇ ನಿದರ್ಶನಗಳನ್ನು ದಾಖಲಿಸಲು ವೈದ್ಯರಿಗೆ ಸೂಚಿಸಲಾಗಿದೆ. ನಂತರ ಪರ್ಯಾಯ ಆರೋಗ್ಯ ಸೌಲಭ್ಯಗಳಿಗೆ ರೋಗಿಯನ್ನು ಶಿಫಾರಸು ಮಾಡಲಾಗುತ್ತದೆ. ಈ ಬೆಳವಣಿಗೆಯು 2002 ರಿಂದ ಪಾಲಿಸುತ್ತಿರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ವೈದ್ಯಕೀಯ ನೀತಿ ಸಂಹಿತೆಯನ್ನು ಬದಲಿಸುತ್ತದೆ.
ಹೆಚ್ಚುವರಿಯಾಗಿ ಈ ನಿಯಮವು, ಶುಲ್ಕವನ್ನು ಪಾವತಿಸದಿದ್ದರೆ ಚಿಕಿತ್ಸೆಯನ್ನು ತಡೆಹಿಡಿಯಲು ವೈದ್ಯರಿಗೆ ಅಧಿಕಾರ ನೀಡುತ್ತವೆ. ಆದಾಗ್ಯೂ, ಈ ನಿಯಮವು ಸರ್ಕಾರಿ ವೈದ್ಯರು ಅಥವಾ ತುರ್ತು ಪರಿಸ್ಥಿತಿಗಳಿಗೆ ಅನ್ವಯಿಸುವುದಿಲ್ಲ. ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ನಂತರ ಹೊಸ ನಿಯಮಗಳು ಆಗಸ್ಟ್ 2, 2023 ರಿಂದ ಜಾರಿಯಾಗಿದೆ.
ಇದನ್ನೂ ಓದಿ: ಕೋರಿಕೆಯ ಮೇರೆಗೆ ನೆರೆಯ ಹೈಕೋರ್ಟ್ಗೆ ಕರ್ನಾಟಕ ನ್ಯಾಯಮೂರ್ತಿ ವರ್ಗಾಯಿಸಲು ಶಿಫಾರಸು
ಈ ಮಾರ್ಗಸೂಚಿಯನ್ನು ಅನುಸರಿಸುವ ಮೂಲಕ, ವೈದ್ಯರ ಹಕ್ಕುಗಳನ್ನು ರಕ್ಷಿಸಲು ಮತ್ತು ರೋಗಿಯ-ವೈದ್ಯರ ನಡುವಿನ ಸಂಬಂಧಗಳನ್ನು ಹೆಚ್ಚಿಸಲು NMC ಗುರಿಯನ್ನು ಹೊಂದಿದೆ. ವೈದ್ಯಕೀಯ ವೃತ್ತಿಪರರು ಕೆಲವೊಮ್ಮೆ ಎದುರಿಸುವ ಸವಾಲುಗಳನ್ನು ಈ ಕ್ರಮವು ಅಂಗೀಕರಿಸುತ್ತದೆ ಮತ್ತು ಗುಣಮಟ್ಟದ ಆರೈಕೆಯನ್ನು ನೀಡುವಾಗ ಅವರು ತಮ್ಮ ಸುರಕ್ಷತೆ ಮತ್ತು ನೈತಿಕ ಅಭ್ಯಾಸಗಳಿಗೆ ಆದ್ಯತೆ ನೀಡಬಹುದೆಂದು ಖಚಿತಪಡಿಸುತ್ತದೆ.
ಇನ್ನಷ್ಟು ರಾಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ