ಬೆಳಗಿನ ಉಪಾಹಾರ ಬಿಡುವ ಮುನ್ನ ಇರಲಿ ಎಚ್ಚರ! ಅಧ್ಯಯನದಲ್ಲಿ ಹೊರಗೆ ಬಿತ್ತು ಶಾಕಿಂಗ್ ಸುದ್ದಿ

| Updated By: sandhya thejappa

Updated on: Mar 14, 2022 | 12:25 PM

ಬೆಳಗಿನ ತಿಂಡಿ ಸೇವಿಸದಿದ್ದರೆ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು ಅಂತ ಅಧ್ಯಯನವೊಂದರಲ್ಲಿ ತಿಳಿದಿದೆ. ಬುದ್ಧಿಮಾಂದ್ಯತೆಯಿಂದ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ದಿನಗಳು ಕಳೆದಂತೆ ಆಲೋಚನಾ ಶಕ್ತಿ, ನೆನಪಿನ ಶಕ್ತಿ ಕೂಡಾ ಕಡಿಮೆಯಾಗುತ್ತದೆ.

ಬೆಳಗಿನ ಉಪಾಹಾರ ಬಿಡುವ ಮುನ್ನ ಇರಲಿ ಎಚ್ಚರ! ಅಧ್ಯಯನದಲ್ಲಿ ಹೊರಗೆ ಬಿತ್ತು ಶಾಕಿಂಗ್ ಸುದ್ದಿ
ಸಾಂದರ್ಭಿಕ ಚಿತ್ರ
Follow us on

ಬ್ಯುಸಿ ಲೈಫಲ್ಲಿ ಸರಿಯಾಗಿ ಉಪಹಾರ (Breakfast) ಸೇವಿಸಲ್ಲ. ಕೆಲವರು ಆಫೀಸಿಗೆ, ಶಾಲೆ- ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಬೆಳಿಗ್ಗೆ ಬ್ರೇಕ್ ಫಾಸ್ಟ್ ಮಾಡಲ್ಲ. ಇನ್ನು ಕೆಲವರು ದೇಹದ ತೂಕ ಇಳಿಸಲು ಉಪಹಾರ ತಿನ್ನಲ್ಲ. ಇದು ಒಳ್ಳೆಯ ಜೀವನ ಶೈಲಿಯಲ್ಲ. ಬೆಳಿಗ್ಗೆ ಉಪಹಾರ ಸೇವಿಸಿದರೆ ಬೇರೆ ಸಮಸ್ಯೆಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ. ಅಧ್ಯಯನವೊಂದರಲ್ಲಿ ಬೆಳಗಿನ ಉಪಾಹಾರವನ್ನು ಬಿಡುವುದರಿಂದ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ಬೆಳಗಿನ ಉಪಾಹಾರ ದಿನದ ಪ್ರಮುಖ ಊಟ ಇದ್ದಂತೆ. ಹೀಗಂತೆ ನಿಮ್ಮ ಮನೆಯಲ್ಲಿ ಹೇಳುತ್ತಿರುತ್ತಾರೆ. ಆದರೆ ಅವರ ಮಾತಿಗೆ ತಲೆಕೆಡಿಸಿಕೊಳ್ಳದೆ ಉಪಹಾರ ಸೇವಿಸದೇ ಇರುವವರು ಹಲವಾರು ಜನ ಇದ್ದಾರೆ. ಹೀಗೆ ಮಾಡುವುದು ತಪ್ಪು. ಉತ್ತಮ ಆರೋಗ್ಯಕ್ಕೆ ಬೆಳಗಿನ ಟಿಫಿನ್ ಅನಿವಾರ್ಯ.

ನೆನಪಿನ ಶಕ್ತಿ ಕಡಿಮೆ:
ಬೆಳಗಿನ ತಿಂಡಿ ಸೇವಿಸದಿದ್ದರೆ ಬುದ್ಧಿಮಾಂದ್ಯತೆಗೆ ಕಾರಣವಾಗಬಹುದು ಅಂತ ಅಧ್ಯಯನವೊಂದರಲ್ಲಿ ತಿಳಿದಿದೆ. ಬುದ್ಧಿಮಾಂದ್ಯತೆಯಿಂದ ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ದಿನಗಳು ಕಳೆದಂತೆ ಆಲೋಚನಾ ಶಕ್ತಿ, ನೆನಪಿನ ಶಕ್ತಿ ಕೂಡಾ ಕಡಿಮೆಯಾಗುತ್ತದೆ. ಬುದ್ಧಿಮಾಂದ್ಯತೆ ಹೊಂದಿರುವ ಕೆಲವು ಜನರು ತಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಹಾಗೇ ಅವರ ವ್ಯಕ್ತಿತ್ವವು ಬದಲಾಗಬಹುದು.

ದಿ ಲ್ಯಾನ್ಸೆಟ್​ನ ಇತ್ತೀಚಿನ ವರದಿಯ ಪ್ರಕಾರ, 2050 ರ ವೇಳೆಗೆ ಭಾರತದಲ್ಲಿ ಬುದ್ಧಿಮಾಂದ್ಯತೆಯ ಪ್ರಕರಣಗಳು ದ್ವಿಗುಣಗೊಳ್ಳುತ್ತವೆ ಎಂದು ತಿಳಿದುಬಂದಿದೆ. ಇನ್ನು ಜಪಾನೀಸ್ ಜರ್ನಲ್ ಆಫ್ ಹ್ಯೂಮನ್ ಸೈನ್ಸಸ್ ಆಫ್ ಹೆಲ್ತ್-ಸೋಶಿಯಲ್ ಸರ್ವೀಸಸ್ನಲ್ಲಿ ಪ್ರಕಟವಾದ 2011 ರ ಅಧ್ಯಯನದಲ್ಲಿ, ನಮ್ಮ ಜೀವನಶೈಲಿ ಮತ್ತು ಬುದ್ಧಿಮಾಂದ್ಯತೆಗೆ ಕಾರಣವಾಗುವ ವಿಷಯಗಳ ನಡುವೆ ಪ್ರಮುಖ ಸಂಬಂಧವಿದೆ ಎಂದು ಉಲ್ಲೇಖವಾಗಿದೆ.

ಆರು ವರ್ಷಗಳ ಅವಧಿಯಲ್ಲಿ ನಡೆಸಿದ ಅಧ್ಯಯನವನ್ನು ಜಪಾನ್ನ ಪ್ರಮುಖ ನಗರದಲ್ಲಿ ನಡೆಸಲಾಗಿದೆ. ಈ ಸಂಶೋಧನೆಯಲ್ಲಿ ಸಂಶೋಧಕರು 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಟ್ಟು 525 ಹಿರಿಯ ವಯಸ್ಕರನ್ನು ಗಮನಿಸಿದ್ದಾರೆ. ಉಪಹಾರ ಸೇವಿಸದೆ ಪಾಲ್ಗೊಳ್ಳುವವರಲ್ಲಿ ಬುದ್ಧಿಮಾಂದ್ಯತೆಯ ರೋಗನಿರ್ಣಯವು ನಾಲ್ಕು ಪಟ್ಟು ಹೆಚ್ಚಾಗಿದೆ ಅಂತ ಅಧ್ಯಯನದಲ್ಲಿ ತಿಳಿದಿದೆ.

ಇದನ್ನೂ ಓದಿ

‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬಳಿಕ ಶಿವಣ್ಣ ಭಾವುಕ ಮಾತು

‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​