ಯಾವ ಬ್ರೆಡ್ ಖರೀದಿಸಬೇಕು ಎಂಬ ಗೊಂದಲವಿದೆಯೇ?; ಆಹಾರ ತಜ್ಞರು ಏನಂತಾರೆ?

Health Tips: ಬ್ರೆಡ್​ ಮಕ್ಕಳು- ರೋಗಿಗಳಾದಿಯಾಗಿ ಎಲ್ಲರಿಗೂ ಪ್ರಿಯವಾದ ಹಿತವಾದ ಆಹಾರ. ಆದರೆ ಬ್ರೆಡ್ ಖರೀದಿಸುವಾಗ ಏನನ್ನು ಗಮನಿಸಬೇಕು ಎಂಬಲ ಗೊಂದಲ ಕಾಡುಉತ್ತಿದೆಯೇ? ಇದನ್ನು ಓದಿ.

ಯಾವ ಬ್ರೆಡ್ ಖರೀದಿಸಬೇಕು ಎಂಬ ಗೊಂದಲವಿದೆಯೇ?; ಆಹಾರ ತಜ್ಞರು ಏನಂತಾರೆ?
ಸಾಂದರ್ಭಿಕ ಚಿತ್ರ

ಈ ದಿನಗಳಲ್ಲಿ ಲಭ್ಯವಿರುವ ಹಲವಾರು ಬಗೆಯ ಬ್ರೆಡ್‌ಗಳ ಬಗ್ಗೆ ನಾವು ನಿಮಗೆ ಹೇಳುವ ಅಗತ್ಯವಿಲ್ಲ. ಆದರೆ ಪ್ರಶ್ನೆ ಇರುವುದು ಅವೆಲ್ಲವೂ ಒಂದೆಯೇ ಅಥವಾ ಮಲ್ಟಿಗ್ರೇನ್, ಬ್ರೌನ್, ಅಂಟು ರಹಿತ ಅಂತ ಅವುಗಳ ವಿಧಗಳಿದ್ದಾವಲ್ಲಾ… ಅವುಗಳು ವಿಭಿನ್ನ ಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿದೆಯೇ ಎಂಬುದು. ಇದರ ಕುರಿತು ಹೆಚ್ಚಿನ ಮಾಹಿತಿಗೆ ಈ ಬರಹವನ್ನು ಓದಿ.

ಇತ್ತೀಚಿಗೆ, ಅತ್ಯುತ್ತಮ ಬ್ರೆಡ್ ತೆಗೆದುಕೊಳ್ಳಲು ಸರಳ ಸಲಹೆಗಳನ್ನು ಹಂಚಿಕೊಂಡ ಪೌಷ್ಟಿಕ ತಜ್ಞರು, ಬ್ರೆಡ್‌ನಲ್ಲಿ ಕೇವಲ ಈ ‘ನಾಲ್ಕು’ ಪದಾರ್ಥಗಳನ್ನು ಮಾತ್ರ ನೋಡಬೇಕು ಎಂದು ಹೇಳಿದ್ದಾರೆ. ಅವುಗಳೆಂದರೆ – ‘ಹಿಟ್ಟು, ಯೀಸ್ಟ್, ನೀರು ಮತ್ತು ಉಪ್ಪು,’

ಬ್ರೆಡ್​ಗಳನ್ನು ಎಲ್ಲಿ ಖರೀದಿಸಬಹುದು?
ಸಾಮಾನ್ಯವಾಗಿ ಕಿರಾಣಿ ಅಂಗಡಿಗಳಲ್ಲಿ ಈ ಮಾದರಿಯ ಉತ್ಪನ್ನ ಲಭ್ಯವಾಗುವುದಿಲ್ಲ. ಏಕೆಂದರೆ ಸಾಮೂಹಿಕವಾಗಿ ಉತ್ಪಾದನೆಯಾಗುವ ಬ್ರೆಡ್‌ನ ಪ್ಯಾಕೇಜ್‌ನಲ್ಲಿರುವ ಘಟಕಾಂಶದ ಲೇಬಲ್  ನೋಡಿದಾಗ, ನೀವು ಕೆಲವು ಮೂಲಭೂತ ಪದಾರ್ಥಗಳಿಗಿಂತ ಹೆಚ್ಚಿನದನ್ನು ನೋಡುತ್ತೀರಿ. ಈ ಬ್ರೆಡ್‌ಗಳಲ್ಲಿ ‘ಆರೋಗ್ಯ’ದ ವಿಷಯದಲ್ಲಿ ಸಾಕಷ್ಟು ಜಂಕ್ ಇರುತ್ತದೆ. ಹಾಗಾಗಿ  ಸ್ಥಳೀಯ ಬೇಕರಿಗಳಿಂದಲೇ ಸಾಧ್ಯವಾದಷ್ಟು ಬ್ರೆಡ್‌ಗಳನ್ನು ಖರೀದಿಸಿ ಎನ್ನುತ್ತಾರೆ ತಜ್ಞರು.

‘ವೆಬ್‌ಎಂಡಿ’ ಪ್ರಕಾರ, ಬ್ರೆಡ್‌ನಲ್ಲಿ ಸೋಡಿಯಂ ಅಂಶವನ್ನು ನೋಡುವುದು ಮುಖ್ಯ. ಶೇಕಡಾ 100 ರಷ್ಟು ಸಂಪೂರ್ಣ ಗೋಧಿಯಾಗಿದ್ದರೆ, ಘಟಕಾಂಶದ ಲೇಬಲ್‌ನಲ್ಲಿ ಸಂಪೂರ್ಣ ಗೋಧಿ ಹಿಟ್ಟು ಅಥವಾ 100 ಪ್ರತಿಶತದಷ್ಟು ಸಂಪೂರ್ಣ ಗೋಧಿ ಹಿಟ್ಟು ಎಂದು ಅದು ಉಲ್ಲೇಖಿಸಿಲಾಗಿರುತ್ತದೆ. ಧಾನ್ಯಗಳು ನೈಸರ್ಗಿಕವಾಗಿ ಕೊಬ್ಬು ಕಡಿಮೆ ಮತ್ತು ಕೊಲೆಸ್ಟ್ರಾಲ್ ಮುಕ್ತವೆಂದು ತಿಳಿದುಬಂದಿದೆ; ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ಆರೋಗ್ಯಕರ ಫೈಬರ್, ನಿರೋಧಕ ಪಿಷ್ಟ, ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತದೆ. ಆದ್ದರಿಂದ ಅಂತಹ ಬ್ರೆಡ್​ಗಳನ್ನೇ ಖರೀದಿಸುವುದು ಸೂಕ್ತ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು.

ಬ್ರೆಡ್ ಜೊತೆಗೆ ಏನೇನು ಒಳ್ಳೆಯದು ಎಂಬ ಗೊಂದಲಕ್ಕೆ ಈ ವಿಡಿಯೊ ನೋಡಿ:

ಇದನ್ನೂ ಓದಿ: Health Benefits: ಸಾಸಿವೆ ಒಗ್ಗರಣೆಗೆ ಮಾತ್ರವಲ್ಲ; ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳಿಗೆ ಸಾಸಿವೆಯೇ ರಾಮಬಾಣ

ಇದನ್ನೂ ಓದಿ: Women Health: ತೂಕ ಕಡಿಮೆಯಾಗಿದೆ ಎಂದು ಅತಿಯಾಗಿ ತಿಂದರೆ ಏನಾಗಬಹುದು? ತಜ್ಞರ ಸಲಹೆಗಳು ಇಲ್ಲಿದೆ

(Which type of bread is good for health- nutritions tips)

Click on your DTH Provider to Add TV9 Kannada