AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು

ಯುವತಿಯರಲ್ಲಿ ಕ್ಯಾನ್ಸರ್ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ ಎಂದು ಆಂಕಾಲಜಿಸ್ಟ್‌ಗಳು ಎಚ್ಚರಿಸಿದ್ದಾರೆ. ಬೊಜ್ಜು, ಒತ್ತಡ, ನಿದ್ರಾಹೀನತೆ, ತಡ ಗರ್ಭಧಾರಣೆಯಂತಹ ಜೀವನಶೈಲಿ ಅಂಶಗಳು ಪ್ರಮುಖ ಕಾರಣವಾಗಿವೆ. 30-40ರ ವಯಸ್ಸಿನವರಲ್ಲಿ ಸ್ತನ, ಎಂಡೋಮೆಟ್ರಿಯಲ್, ಥೈರಾಯ್ಡ್ ಮತ್ತು ಕಿಡ್ನಿ ಕ್ಯಾನ್ಸರ್‌ಗಳು ವರದಿಯಾಗುತ್ತಿವೆ. ರೋಗಲಕ್ಷಣಗಳನ್ನು ನಿರ್ಲಕ್ಷಿಸದೆ, ಸಕಾಲದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಆರಂಭಿಕ ಪತ್ತೆಗೆ ಅತ್ಯಗತ್ಯ ಎಂದವರು ತಿಳಿಸಿದ್ದಾರೆ.

ಮಹಿಳೆಯರಲ್ಲಿ ಕ್ಯಾನ್ಸರ್​​ ಹೆಚ್ಚಳ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆಂಕಾಲಜಿಸ್ಟ್‌ಗಳು
ಸಾಂದರ್ಭಿಕ ಚಿತ್ರImage Credit source: Google
ಪ್ರಸನ್ನ ಹೆಗಡೆ
|

Updated on: Feb 04, 2026 | 1:23 PM

Share

ಬೆಂಗಳೂರು, ಫೆಬ್ರವರಿ 04: ಕ್ಯಾನ್ಸರ್‌ನ ಪ್ರವೃತ್ತಿಗಳಲ್ಲಿ ಕಳವಳಕಾರಿ ಬದಲಾವಣೆ ಕಂಡುಬರುತ್ತಿದ್ದು, ಕಡಿಮೆ ವಯಸ್ಸಿನ ಮಹಿಳೆಯರಲ್ಲಿಯೇ ಹೆಚ್ಚಾಗಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಆಂಕಾಲಜಿಸ್ಟ್‌ಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರೋಗ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಮಹಿಳೆಯರು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂಬ ಮನವಿಯನ್ನೂ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನ್ ಕೆ.ಆರ್. ಮಾಡಿದ್ದಾರೆ.

ಸ್ಥೂಲತೆ, ಇನ್ಸುಲಿನ್ ಪ್ರತಿರೋಧ, ಮಧುಮೇಹ, ನಿರಂತರ ಒತ್ತಡ, ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು, ತಂಬಾಕು ಸೇವನೆ ಹಾಗೂ ತಡವಾಗಿ ಗರ್ಭಧಾರಣೆ ಮೊದಲಾದ ಜೀವನಶೈಲಿ ಸಂಬಂಧಿತ ಅಂಶಗಳು ಕ್ಯಾನ್ಸರ್​​ಗೆ ಪ್ರಮುಖ ಕಾರಣಗಳಾಗಿ ಹೊರಹೊಮ್ಮುತ್ತಿವೆ. ದೇಹದ ಕೊಬ್ಬಿನ ಪ್ರಮಾಣ, ಸಂತಾನೋತ್ಪತ್ತಿ ಚಿಕಿತ್ಸೆಗಳು ಮತ್ತು ತಡಗರ್ಭಧಾರಣೆಯಿಂದ ಉಂಟಾಗುವ ದೀರ್ಘಕಾಲದ ಇಸ್ಟ್ರೋಜನ್ ಪ್ರಭಾವವು ಸ್ತನ ಮತ್ತು ಎಂಡೋಮೆಟ್ರಿಯಲ್ ಕ್ಯಾನ್ಸರ್‌ಗಳಂತಹ ಹಾರ್ಮೋನ್ ಕ್ಯಾನ್ಸರ್‌ಗಳಿಗೆ ಹೆಚ್ಚು ಕಾರಣವಾಗ್ತಿದೆ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ರೋಗಕ್ಕೆ ಯಾವ ಅಂಶಗಳು ಕಾರಣವಾಗುತ್ತೆ ಗೊತ್ತಾ?

ಇತ್ತೀಚೆಗೆ ಕಡಿಮೆ ವಯಸ್ಸಿನಲ್ಲಿಯೇ ಕ್ಯಾನ್ಸರ್​​ ಪ್ರಕರಣಗಳು ಕಾಣಸಿಗುತ್ತಿದ್ದು, 30 ಮತ್ತು 40ರ ವಯಸ್ಸಿನ ಮಹಿಳೆಯರಲ್ಲಿ ಆರಂಭಿಕ ಹಂತದ ಸ್ತನ ಮತ್ತು ವಿರಳ ಎಂಡೋಮೆಟ್ರಿಯಲ್ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ತಮಗೆ ವಯಸ್ಸು ಕಡಿಮೆ. ಹೀಗಾಗಿ ಕ್ಯಾನ್ಸರ್​​ ಬರಲ್ಲ ಎಂಬ ಭಾವನೆಯಲ್ಲಿ ಕೆಲ ಮಹಿಳೆಯರು ಇರುತ್ತಾರೆ. ಅಸಾಮಾನ್ಯ ರಕ್ತಸ್ರಾವ, ಸ್ತನದಿಂದ ದ್ರವ ಹೊರಬರುವುದು, ಸಣ್ಣ ಗಡ್ಡೆಗಳು, ಕಾರಣವಿಲ್ಲದ ತೂಕ ಇಳಿಕೆ, ದೀರ್ಘಕಾಲದ ದಣಿವಿನಂತಹ ಸೂಕ್ಷ್ಮ ಲಕ್ಷಣಗಳನ್ನು ಹಾರ್ಮೋನಲ್ ಸಮಸ್ಯೆ ಅಥವಾ ಜೀವನಶೈಲಿ ಒತ್ತಡವೆಂದು ನಿರ್ಲಕ್ಷಿಸಲಾಗುತ್ತದೆ. ಕ್ಯಾನ್ಸರ್ 50 ವರ್ಷಗಳ ನಂತರ ಮಾತ್ರವೇ ಬರುತ್ತದೆ ಎಂಬ ಭಾವನೆ ಈಗ ಅನ್ವಯಿಸುವುದಿಲ್ಲ ಎಂದು ಫೋರ್ಟಿಸ್ ಆಸ್ಪತ್ರೆಗಳ ಮೆಡಿಕಲ್ ಆಂಕಾಲಜಿ ಮತ್ತು ಹೆಮಾಟೋ-ಆಂಕಾಲಜಿ ವಿಭಾಗದ ಪ್ರಿನ್ಸಿಪಲ್ ನಿರ್ದೇಶಕರಾದ ಡಾ. ನೀತಿ ರೈಝಾದಾ ತಿಳಿಸಿದ್ದಾರೆ. ನಗರ ಪ್ರದೇಶಗಳ ಯುವಜನರಲ್ಲಿ ಆರಂಭಿಕ ಹಂತದ ಥೈರಾಯ್ಡ್ ಮತ್ತು ಕಿಡ್ನಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಅವರು ಎಚ್ಚರಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?
ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ!
ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಮೋದಿ ವಾಗ್ದಾಳಿ
ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಮೋದಿ ವಾಗ್ದಾಳಿ
ನೋಡನೋಡುತ್ತಲೇ ಬೈಕ್ ಮೇಲೆ ಪಲ್ಟಿಯಾಯ್ತು ಹುಲ್ಲು ತುಂಬಿದ ಟ್ರಾಕ್ಟರ್
ನೋಡನೋಡುತ್ತಲೇ ಬೈಕ್ ಮೇಲೆ ಪಲ್ಟಿಯಾಯ್ತು ಹುಲ್ಲು ತುಂಬಿದ ಟ್ರಾಕ್ಟರ್
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ಶ್ರುತಿ ಹರಿಹರನ್
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ದಲಿತ ಎನ್ನೋ ಕಾರಣಕ್ಕೆ ಎಳೆದಾಡಿ ಸ್ವಾಮೀಜಿ ಮೇಲೆ ಹಲ್ಲೆ
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?
ಉಡುಪಿಯಲ್ಲೊಂದು ಅಪರೂಪದ ಘಟನೆ: ಗ್ಯಾಸ್ OTP ವ್ಯಕ್ತಿ ಜೀವ ಉಳಿಸಿದ್ಹೇಗೆ?