Orange Benefits: ಕಿತ್ತಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಗಳಿವೆ ತಿಳಿಯಿರಿ
ಸಿಹಿ ಮತ್ತು ಹುಳಿ ಇರುವ ಕಿತ್ತಳೆ ರಸವನ್ನು ಎಲ್ಲರೂ ತಿನ್ನಲು ಮತ್ತು ಕುಡಿಯಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳು ಅಡಗಿರುತ್ತವೆ.
ಸಿಹಿ ಮತ್ತು ಹುಳಿ ಇರುವ ಕಿತ್ತಳೆ ರಸವನ್ನು ಎಲ್ಲರೂ ತಿನ್ನಲು ಮತ್ತು ಕುಡಿಯಲು ಇಷ್ಟಪಡುತ್ತಾರೆ. ಈ ಸೀಸನ್ ನಲ್ಲಿ ಹೆಚ್ಚಾಗಿ ಸಿಗುವ ಕಿತ್ತಳೆ ಹಣ್ಣುಗಳು, ರುಚಿಕರವಾಗಿರುವುದರ ಜೊತೆಗೆ ಹಲವು ಪೋಷಕಾಂಶಗಳು ಅಡಗಿರುತ್ತವೆ.
ಕಿತ್ತಳೆ ಮತ್ತು ಅದರ ರಸ ಎರಡೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಿತ್ತಳೆ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ. ಕಿತ್ತಳೆ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ.
ಆರೋಗ್ಯಕರ ಚರ್ಮ, ಬಲವಾದ ಕೂದಲು ಮತ್ತು ದೃಷ್ಟಿಗೆ ಇದು ತುಂಬಾ ಉಪಯುಕ್ತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಕಿತ್ತಳೆ ಹಣ್ಣು ರಾಮಬಾಣ ಎನ್ನುತ್ತಾರೆ ಆರೋಗ್ಯ ತಜ್ಞರು. ಈಗ ಕಿತ್ತಳೆ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ವಿಟಮಿನ್ ಸಿ ಯ ಉತ್ತಮ ಮೂಲ: ವಿಟಮಿನ್ ಸಿ ಕಿತ್ತಳೆಯಲ್ಲಿ 70 ಪ್ರತಿಶತದವರೆಗೆ ಇರುತ್ತದೆ. ಒಂದು ಕಿತ್ತಳೆ ಇಡೀ ದಿನ ನಮ್ಮ ದೇಹಕ್ಕೆ ವಿಟಮಿನ್ ಸಿ ಪೂರೈಸುತ್ತದೆ. ವಿಟಮಿನ್-ಸಿ ದೇಹದಲ್ಲಿ ಕಬ್ಬಿಣವನ್ನು ಸಂಗ್ರಹಿಸಲು, ಉತ್ತಮ ರೋಗನಿರೋಧಕ ಶಕ್ತಿಗೆ ಅವಶ್ಯಕವಾಗಿದೆ.
ಕರುಳಿನ ಆರೋಗ್ಯಕ್ಕೆ ಒಳ್ಳೆಯದು: ಕಿತ್ತಳೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಿ ಕರುಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ನಮ್ಮ ದೇಹವು ಸರಿಯಾದ ಪ್ರಮಾಣದ ಫೈಬರ್ ಅನ್ನು ಪಡೆದರೆ, ಅದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಮಧುಮೇಹದ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಇದಲ್ಲದೆ, ಕಿತ್ತಳೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಗರ್ಭಿಣಿಯರಿಗೆ ರಾಮಬಾಣ: ನಮ್ಮ ದೇಹವು ಡಿಎನ್ಎ ಮತ್ತು ಇತರ ಆನುವಂಶಿಕ ವಸ್ತುಗಳನ್ನು ತಯಾರಿಸಲು ಕೆಲಸ ಮಾಡುತ್ತದೆ. ಇದಕ್ಕೆ ಬಿ ವಿಟಮಿನ್ ಫೋಲೇಟ್ ಅಗತ್ಯವಿದೆ. ಇದೇ ಕಾರಣಕ್ಕೆ ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಕಿತ್ತಳೆ ಹಣ್ಣು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಮಕ್ಕಳ ಮೆದುಳು ಸರಿಯಾಗಿ ಬೆಳೆಯುತ್ತದೆ.
ಔಷಧಕ್ಕಿಂತ ಹೆಚ್ಚು: ಒಂದು ಕಿತ್ತಳೆ ಹಣ್ಣಿನಲ್ಲಿ 170ಕ್ಕೂ ಹೆಚ್ಚು ಫೈಟೊಕೆಮಿಕಲ್‌ಗಳು, 60 ಫ್ಲೇವನಾಯ್ಡ್‌ಗಳಿವೆ. ಇವುಗಳು ಇತರ ಯಾವುದೇ ಉತ್ಕರ್ಷಣ ನಿರೋಧಕ ಆಹಾರ ಅಥವಾ ಔಷಧಿಗಳಿಗಿಂತ ಹೆಚ್ಚು. ಕಿತ್ತಳೆ ಕ್ಯಾನ್ಸರ್, ಸಂಧಿವಾತ, ಮಧುಮೇಹ ಮತ್ತು ಆಲ್ಝೈಮರ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ