Orange Peel: ಕಿತ್ತಳೆ ಸಿಪ್ಪೆ ಎಸೆಯಬೇಡಿ, ಇದು ಹೃದ್ರೋಗ ಕಡಿಮೆ ಮಾಡುತ್ತೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 22, 2024 | 4:48 PM

ನಾವು ಹಣ್ಣು ಅಥವಾ ತರಕಾರಿಗಳನ್ನು ತಿನ್ನುವಾಗ, ಕೆಲವೊಮ್ಮೆ ಸಿಪ್ಪೆ ತೆಗೆಯುತ್ತೇವೆ. ಆದರೆ ಹೃದ್ರೋಗಿಗಳು ಇದನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಇನ್ನು ಕಿತ್ತಳೆ ಸಿಪ್ಪೆಗಳು ಕೂಡ ಒಳಗಿನ ರಸಭರಿತ ತಿರುಳಿಗಿಂತ ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದ್ದು ಪ್ರೊವಿಟಮಿನ್ ಎ, ಫೋಲೇಟ್ ಮತ್ತು ವಿವಿಧ ಖನಿಜಗಳ ಉತ್ತಮ ಮೂಲವಾಗಿದೆ.

Orange Peel: ಕಿತ್ತಳೆ ಸಿಪ್ಪೆ ಎಸೆಯಬೇಡಿ, ಇದು ಹೃದ್ರೋಗ ಕಡಿಮೆ ಮಾಡುತ್ತೆ
ಸಾಂದರ್ಭಿಕ ಚಿತ್ರ
Follow us on

ಜೀವನಶೈಲಿಯಲ್ಲಿ ಮಾಡಿಕೊಂಡ ಅನೇಕ ಬದಲಾವಣೆ ಮತ್ತು ಆಹಾರ ಪದ್ಧತಿಯಿಂದಾಗಿ ಹೃದ್ರೋಗದ ಅಪಾಯವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಟ್ರೈಮೆಥೈಲಾಮೈನ್ ಎನ್-ಆಕ್ಸೈಡ್ (ಟಿಎಂಎಒ) ಎಂಬ ರಾಸಾಯನಿಕವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಿತ್ತಳೆ ಸಿಪ್ಪೆಗಳು ಈ ಟಿಎಂಎಒ ವಿರುದ್ಧ ಹೊರಡುವ ಶಕ್ತಿಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ನಿಮಗೆ ಈ ವಿಷಯ ಅತ್ಯಂತ ಕುತೂಹಲಕಾರಿ ಎನಿಸಬಹುದು ಆದರೆ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ಇಂತಹ ಒಂದು ಶಕ್ತಿ ಇದೆ. ಅಲ್ಲದೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಇದು ಒಂದು ಮಾರ್ಗವಾಗಿದೆ.

ನಾವು ಹಣ್ಣು ಅಥವಾ ತರಕಾರಿಗಳನ್ನು ತಿನ್ನುವಾಗ, ಕೆಲವೊಮ್ಮೆ ಸಿಪ್ಪೆ ತೆಗೆಯುತ್ತೇವೆ. ಆದರೆ ಹೃದ್ರೋಗಿಗಳು ಇದನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಇನ್ನು ಕಿತ್ತಳೆ ಸಿಪ್ಪೆಗಳು ಕೂಡ ಒಳಗಿನ ರಸಭರಿತ ತಿರುಳಿಗಿಂತ ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದ್ದು ಪ್ರೊವಿಟಮಿನ್ ಎ, ಫೋಲೇಟ್ ಮತ್ತು ವಿವಿಧ ಖನಿಜಗಳ ಉತ್ತಮ ಮೂಲವಾಗಿದೆ.

ಬೇರೆ ಪ್ರಯೋಜನಗಳೇನು?

ಇರಾನಿನ ಸಂಶೋಧಕರು ನಡೆಸಿದ ಸಂಶೋಧನಾ ಅಧ್ಯಯನದ ಪ್ರಕಾರ, ಕಿತ್ತಳೆ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಕ್ಯಾನ್ಸರ್ ವಿರೋಧಿಗಳಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ನಿಮ್ಮ ಚರ್ಮವನ್ನು ಹಾನಿಯಿಂದ ರಕ್ಷಿಸುವುದರೊಂದಿಗೆ ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ. ಕಿತ್ತಳೆ ಸಿಪ್ಪೆಯಲ್ಲಿರುವ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೊತೆಗೆ ಇದರಲ್ಲಿರುವ ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಈ ಧಾನ್ಯ ಸೌಂದರ್ಯದೊಂದಿಗೆ ಆರೋಗ್ಯವನ್ನು ಹೆಚ್ಚಿಸುತ್ತೆ!

ಕಿತ್ತಳೆ ಸಿಪ್ಪೆಗಳನ್ನು ಈ ರೀತಿ ಸೇವಿಸಿ

ಇದನ್ನು ಬಿಸಿ ನೀರಿನಲ್ಲಿ ಕುದಿಸಿ್ದರೆ ಪರಿಮಳ ಭರಿತ ಸಿಟ್ರಸ್ ಚಹಾವನ್ನು ತಯಾರಿಸಬಹುದು. ಕಾಕ್ಟೈಲ್ ಅಥವಾ ಮಾಕ್ಟೇಲ್ಗೆ ಗಳಿಗೂ ಸೇರಿಸಬಹುದು. ಇದೆಲ್ಲದರ ಬದಲು ಈ ಸಿಪ್ಪೆಗಳನ್ನು ಸಕ್ಕರೆ ಪಾಕದಲ್ಲಿ ಮೃದುವಾಗುವವರೆಗೆ ಕುದಿಸಿ. ಅವುಗಳನ್ನು ಕತ್ತರಿಸಿ ಸಿಹಿತಿಂಡಿ ಮಾಡುವಾಗ ಸೇರಿಸಿಕೊಳ್ಳಬಹುದು ಅಥವಾ ಕೇಕ್ ಗಳನ್ನು ಅಲಂಕರಿಸಲು ಇವುಗಳನ್ನು ಬಳಸಿಕೊಳ್ಳಬಹುದು. ಇನ್ನು ತೆಳುವಾಗಿ ಕತ್ತರಿಸಿಕೊಂಡರೆ ಸಲಾಡ್ ಮತ್ತು ಸ್ಮೂಥಿಗಳಲ್ಲಿ ಸೇರಿಸಿಕೊಳ್ಳಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: