AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿ ದಿವ್ಯ ಯೌವನಾಮೃತ ವಟಿ ಔಷಧ ಯಾರಿಗೆ ಉಪಯುಕ್ತ? ಇದರ ಪ್ರಯೋಜನ, ಬಳಕೆ ಇತ್ಯಾದಿ ವಿವರ

Patanjali Divya Yovnamrit Vati: ಪತಂಜಲಿ ಆಯುರ್ವೇದದ ದಿವ್ಯ ಯೌವನಾಮೃತ ವಟಿ ಒಂದು ಆಯುರ್ವೇದ ಫಾರ್ಮುಲಾ ಆಗಿದೆ. ಪತಂಜಲಿಯು ಇದನ್ನು ಪೌಷ್ಟಿಕ ಔಷಧ ಎಂದು ಹೇಳಿಕೊಳ್ಳುತ್ತದೆ. ಇದು ಜಾಯಿಕಾಯಿ, ಕೇಸರಿ, ಶತಾವರಿ, ಮುಸ್ಲಿ, ಸ್ವರ್ಣಭಸಮ, ಕೌಂಚ ಬೀಜ ಮತ್ತು ಅಕರ್ಕರಗಳ ಸಂಯೋಜನೆ ಒಳಗೊಂಡಿದೆ. ವೃದ್ಧರು, ಅಶಕ್ತರಿಗೆ ಪುಷ್ಟಿ ಕೊಡುವ ಔಷಧ ಎಂದು ಇದನ್ನು ಪರಿಗಣಿಸಲಾಗಿದೆ.

ಪತಂಜಲಿ ದಿವ್ಯ ಯೌವನಾಮೃತ ವಟಿ ಔಷಧ ಯಾರಿಗೆ ಉಪಯುಕ್ತ? ಇದರ ಪ್ರಯೋಜನ, ಬಳಕೆ ಇತ್ಯಾದಿ ವಿವರ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 08, 2026 | 6:53 PM

Share

ಇಂದಿನ ವೇಗದ ಮತ್ತು ಬ್ಯುಸಿ ಲೈಫು ಮತ್ತು ಕೆಲಸದ ಒತ್ತಡವು ಜನರನ್ನು ವಿವಿಧ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಕೆಲಸದ ಒತ್ತಡವು ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಜನರು ಆಲೋಪತಿಯಂತಹ ವಿವಿಧ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಪತಂಜಲಿಯ ಯೋವನಾಮೃತ ವಟೀ ಅನ್ನು ಈ ಚಿಕಿತ್ಸೆಗೆ ಉತ್ತಮ ಔಷಧ ಎನಿಸಿದೆ. ಪತಂಜಲಿ ಆಯುರ್ವೇದದ ದಿವ್ಯ ಯೌವನಾಮೃತ ವಟೀ (Patanjali Divya Yovnamrit Vati) ಒಂದು ಆಯುರ್ವೇದ ಸೂತ್ರದಲ್ಲಿ ತಯಾರಿಸಿರುವ ಸಂಯೋಜನೆಯಾಗಿದೆ. ಈ ಔಷಧಿಯು ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುತ್ತದೆ ಎಂದು ಪತಂಜಲಿ ಹೇಳಿಕೊಂಡಿದೆ.

ಪತಂಜಲಿಯ ಪ್ರಕಾರ, ಈ ಔಷಧಿಯನ್ನು ನಿರ್ದಿಷ್ಟವಾಗಿ ದೌರ್ಬಲ್ಯ, ವಯಸ್ಸಾಗುವಿಕೆ, ಮಾನಸಿಕ ಆಯಾಸ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುತ್ತದೆ. ಈ ಔಷಧಿಯನ್ನು ಆಯುರ್ವೇದ ಗಿಡಮೂಲಿಕೆಗಳಾದ ಜಾಯಿಕಾಯಿ, ಕೇಸರಿ, ಶತಾವರಿ, ಮುಸ್ಲಿ, ಸ್ವರ್ಣಭಸ್ಮ, ಕೌಂಚ ಬೀಜಗಳು ಮತ್ತು ಅಕರ್ಕಾರಗಳಿಂದ ರೂಪಿಸಲಾಗಿದೆ. ಈ ಗಿಡಮೂಲಿಕೆಗಳು ದೇಹವನ್ನು ಬಲಪಡಿಸುತ್ತವೆ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡುವ ಮೂಲಕ ಮನಸ್ಸನ್ನು ಶಾಂತಗೊಳಿಸುತ್ತವೆ.

ವೃದ್ಧರಿಗೆ ಬಹಳ ಪ್ರಯೋಜನಕಾರಿ ಈ ಔಷಧಿ

ಪತಂಜಲಿ ದಿವ್ಯ ಯೌವನಾಮೃತ ವಟೀ ಔಷಧವು ವಯಸ್ಸಾದವರಿಗೆ ಮತ್ತು ನಿಶಕ್ತರಿಗೆ ವಿಶೇಷವಾಗಿ ಬಲವರ್ಧನೆ ಮಾಡುತ್ತದೆ. ಈ ಔಷಧವು ಆಯುರ್ವೇದದ ಸೂತ್ರದ ಪ್ರಕಾರ ಸಿದ್ಧವಾಗಿದೆಯಾದರೂ, ಅದರ ಸೇವನೆಯಿಂದ ಆಗುವ ಪರಿಣಾಮದ ಮಟ್ಟವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂಬುದನ್ನು ನೀವು ಗಮನಿಸಬೇಕು. ಈ ಔಷಧವು ಯಾವುದೇ ಅಡ್ಡಪರಿಣಾಮ ಉಂಟು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಪತಂಜಲಿ ದಿವ್ಯ ದಂತಮಂಜನ್ ಟೂತ್ ಪೇಸ್ಟ್; ಹಲ್ಲಿನ ಸಮಸ್ಯೆಗಳನ್ನು ನಿವಾರಿಸುವ ಆಯುರ್ವೇದ ಉತ್ಪನ್ನ

ಯೌವನಾಮೃತ ವಟೀ ಹೇಗೆ ಸೇವಿಸುವುದು?

ಬೆಳಿಗ್ಗೆ ಮತ್ತು ಸಂಜೆ ಊಟದ ನಂತರ ಅಥವಾ ಹಾಲಿನೊಂದಿಗೆ ಇದರ 12 ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ನಿಗದಿತ ಡೋಸೇಜ್ ಅನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳಲು ಮರೆಯದಿರಿ. ಸ್ವಯಂ-ಔಷಧಿ ನಿರ್ಧಾರ ಮಾಡದೇ ವೈದ್ಯರು ಅಥವಾ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ನಿಮಗೆ ಈಗಾಗಲೇ ಬೇರೆ ಯಾವುದೇ ಮೆಡಿಕಲ್ ಕಂಡಿಷನ್ ಇದ್ದರೆ, ಅಥವಾ ಅಲರ್ಜಿ ಇದ್ದರೆ ತಜ್ಞರ ಸಲಹೆ ಪಡೆದೇ ಔಷಧ ಸೇವಿಸಬೇಕು. ನೀವು ಬೇರೆ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಬೇಡಿ. ಅದರ ಜೊತೆಗೆ ಯೌವನಾಮೃತ ವಟೀಯನ್ನೂ ಸೇವಿಸುವುದರಲ್ಲಿ ಹಾನಿ ಇರುವುದಿಲ್ಲ. ಆದರೂ ಒಮ್ಮೆ ತಜ್ಞರ ಸಲಹೆ ಪಡೆದುಕೊಂಡು ಮುಂದುವರಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ