Women Health: ಪಿಸಿಒಎಸ್ ಸಮಸ್ಯೆ ಇರುವವರು ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ

| Updated By: shruti hegde

Updated on: Sep 19, 2021 | 11:46 AM

ಆರೋಗ್ಯಕರ ಜೀವನಶೈಲಿಯೊಂದಿಗೆ ನಿಮ್ಮ ದೇಹದ ತೂಕವನ್ನು ಹೇಗೆ ಇಳಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಇದರ ಜತೆಗೆ ಪೋಷಕಾಂಶಯುಕ್ತ ಆಹಾರವನ್ನೇ ಸೇವಿಸಿಬೇಕು.

Women Health: ಪಿಸಿಒಎಸ್ ಸಮಸ್ಯೆ ಇರುವವರು ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಹರ್ಮೋನುಗಳ ಅಸ್ವಸ್ಥತೆಯಾಗಿದೆ. ಇದು ಮಹಿಳೆಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಅದಾಗ್ಯೂ ಈ ಸಮಸ್ಯೆಗೆ ಯಾವುದೇ ಚಿಕಿತ್ಸೆಯೂ ಸಹ ಇಲ್ಲ. ಆರೋಗ್ಯಕರ ಜೀವನ ಶೈಲಿಯ ಜತೆಗೆ ದೇಹದ ತೂಕ ನಿಯಂತ್ರಿಸುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.

ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳಿಂದಾಗಿ ಚಯಾಪಚಯ ಕ್ರಿಯೆಗೆ ಸಮಸ್ಯೆ ಉಂಟಾಗುತ್ತದೆ. ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಪಿಸಿಒಎಸ್​ ಸಮಸ್ಯೆ ಇನ್ನೂ ಹೆಚ್ಚಾಗಬಹುದು. ಆರೋಗ್ಯಕರ ಜೀವನಶೈಲಿಯೊಂದಿಗೆ ನಿಮ್ಮ ದೇಹದ ತೂಕವನ್ನು ಹೇಗೆ ಇಳಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಇದರ ಜತೆಗೆ ಪೋಷಕಾಂಶಯುಕ್ತ ಆಹಾರವನ್ನೇ ಸೇವಿಸಿಬೇಕು.

ಫೈಬರ್ ಅಂಶ
ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ತಮ್ಮ ಆಹಾರದಲ್ಲಿ ಫೈಬರ್​ಅನ್ನು ಸೇವಿಸಿ. ಫೈಬರ್ ಹೊಂದಿರುವ ಆಹಾರಗಳು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹಾರ್ಮೋನುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ಆಹಾರದಲ್ಲಿ ಫೈಬರ್ ಭರಿತ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಇರಲಿ.

ಆಹಾರದಲ್ಲಿ ಪ್ರೊಟೀನ್ ಸೇವಿಸಿ
ಪ್ರೊಟೀನ್ ಎಲ್ಲಾ ಪೋಷಕಾಂಶಗಳಲ್ಲಿ ಪ್ರಮುಖವಾದದು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆರೋಗ್ಯಕರ ತೂಕ ನಿಯಂತ್ರಣಕ್ಕೆ ಪ್ರೋಟೀನ್ ಸಹಾಯಕವಾಗಿದೆ. ಇದಲ್ಲದೇ, ಸ್ನಾಯುಗಳನ್ನು ಬಲಪಡಿಸುತ್ತದೆ. ಜತೆಗೆ ಆಹಾರದಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಇರಿವುದು ಒಳ್ಳೆಯದು.

ಕೆಲಸ ಮಾಡಿ
ದೈಹಿಕವಾಗಿ ಆರೋಗ್ಯವಾಗಿರಲು ಪ್ರತಿನಿತ್ಯ ವ್ಯಾಯಾಮ ಮಾಡಿ. ಕೆಲವು ತಾಲೀಮುಗಳನ್ನು ಮಾಡುವುದರಿಂದ ದೆಹದ ತೂಕ ಕಡಿಮೆಯಾಗುವುದರ ಜತೆಗೆ ಪಿಸಿಒಎಸ್ ಸಮಸ್ಯೆ ನಿಯಂತ್ರಣಕ್ಕೆ ತರಬಹುದು.

ಕಡಿಮೆ ಡೈರಿ ಉತ್ಮನ್ನಗಳನ್ನು ಸೇವಿಸಿ
ಪಿಸಿಒಎಸ್ ಸಮಸ್ಯೆ ಹೊಂದಿರುವವರು ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪದಂತಹ ಆಹಾರವನ್ನು ನಿಯಂತ್ರಣದಲ್ಲಿಡುವುದು ಉತ್ತಮ. ಇದು ನಿಮ್ಮ ದೇಹದ ತೂಕವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜತೆಗೆ ತೂಕ ಹೆಚ್ಚಳದಿಂದ ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿರಬಹುದು.

ಇದನ್ನೂ ಓದಿ:

Health Tips: ಅರಿಶಿಣ ಹಾಲು ಸೇವಿಸಿದರೆ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ತಿಳಿದಿದೆಯೇ?

Health Tips: ಥೈರಾಯ್ಡ್​ ಸಮಸ್ಯೆ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ

(PCOS patients can control weight check in Kannada)

Published On - 11:43 am, Sun, 19 September 21