Rules For Yoga Practice: ಯೋಗಾಭ್ಯಾಸದ ಸಮಯದಲ್ಲಿ ಈ 4 ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹೆಚ್ಚಿನ ಜನರು ಯೋಗದ ಪ್ರಯೋಜನಗಳನ್ನು ತಿಳಿದು, ಅಭ್ಯಾಸ ಮಾಡಲು ಪ್ರತಿದಿನ ಸಮಯ ನಿಗದಿಪಡಿಸಿಕೊಂಡಿರುತ್ತಾರೆ. ಆದರೆ ಅನೇಕ ಬಾರಿ ಯೋಗದ ಸಮಯದಲ್ಲಿ, ಕೆಲವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ನಾನಾ ತೊಂದರೆಯನ್ನು ಉಂಟುಮಾಡುತ್ತದೆ.

Rules For Yoga Practice: ಯೋಗಾಭ್ಯಾಸದ ಸಮಯದಲ್ಲಿ ಈ 4 ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 19, 2021 | 7:17 AM

ಯೋಗಾಭ್ಯಾಸವು ದೇಹವನ್ನು ಆರೋಗ್ಯವಾಗಿಡಲು ಉತ್ತಮ ಮಾರ್ಗವಾಗಿದೆ. ಯೋಗವು ದೈಹಿಕವಾಗಿ ಸದೃಢಗೊಳಿಸುವುದಲ್ಲದೆ ಮಾನಸಿಕವಾಗಿ ನಿರಾಳವಾಗಿಸುತ್ತದೆ. ಯೋಗವನ್ನು(Yoga) ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ, ಸ್ನಾಯುಗಳು ಬಲವಾಗಿರುತ್ತವೆ. ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ, ಜೀವನಶೈಲಿ ಸಂಬಂಧಿತ ರೋಗಗಳಾದ ಅಧಿಕ ಬಿಪಿ, ರಕ್ತದಲ್ಲಿನ ಸಕ್ಕರೆ ಮಟ್ಟ ಇತ್ಯಾದಿಗಳನ್ನು ತಡೆಯಲು ಯೋಗ ಸಹಾಯಕವಾಗಿದೆ.

ಹೆಚ್ಚಿನ ಜನರು ಯೋಗದ ಪ್ರಯೋಜನಗಳನ್ನು ತಿಳಿದು, ಅಭ್ಯಾಸ ಮಾಡಲು ಪ್ರತಿದಿನ ಸಮಯ ನಿಗದಿಪಡಿಸಿಕೊಂಡಿರುತ್ತಾರೆ. ಆದರೆ ಅನೇಕ ಬಾರಿ ಯೋಗದ ಸಮಯದಲ್ಲಿ, ಕೆಲವರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ನಾನಾ ತೊಂದರೆಯನ್ನು ಉಂಟುಮಾಡುತ್ತದೆ. ಹೀಗಾಗಿ ಇವುಗಳ ಬಗ್ಗೆ ತಿಳಿಯುವುದು ಸೂಕ್ತ.

ಯೋಗಾಭ್ಯಾಸದ ಸಮಯದಲ್ಲಿ ಈ ನಾಲ್ಕು ತಪ್ಪುಗಳನ್ನು ಮಾಡಬೇಡಿ

ದೇಹದ ಮೇಲೆ ಒತ್ತಡ ಹೇರಬೇಡಿ  ಹೊಸದಾಗಿ ಯೋಗಾಭ್ಯಾಸವನ್ನು ಆರಂಭಿಸಿದ್ದರೆ, ನಿಮ್ಮ ದೇಹದ ಮೇಲೆ ಎಂದಿಗೂ ಒತ್ತಡ ಹೇರಬೇಡಿ. ಏಕೆಂದರೆ ಆರಂಭದಲ್ಲಿ ಸ್ನಾಯುಗಳಲ್ಲಿ ಬಿಗಿತವಿರುತ್ತದೆ. ಆದರೆ ಅನೇಕ ಜನರು ಹೊಸ ಉತ್ಸಾಹದ ಅನ್ವೇಷಣೆಯಲ್ಲಿ ಸಾಕಷ್ಟು ಶ್ರಮವಹಿಸುತ್ತಾರೆ. ಮರುದಿನ ಸ್ನಾಯು ನೋವು ಇತ್ಯಾದಿ ಎಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆರಂಭಿಕ ದಿನಗಳಲ್ಲಿ, ಸಾಧ್ಯವಾದಷ್ಟು ಸರಳ ಅಭ್ಯಾಸ ಮಾಡಿ. ಕ್ರಮೇಣ, ದೇಹದಲ್ಲಿ ನಮ್ಯತೆ ಬರಲಾರಂಭಿಸಿದರೆ, ಯೋಗಾಭ್ಯಾಸವೂ ಸುಲಭವಾಗುತ್ತದೆ.

ಏಕಾಂಗಿಯಾಗಿ ಅಭ್ಯಾಸ ಮಾಡಬೇಡಿ ಬೋಧಕರಿಂದ ಕಲಿತ ನಂತರವೇ ಯೋಗ ಮಾಡಬೇಕು. ಪುಸ್ತಕಗಳನ್ನು ಓದುವುದರಿಂದ ಅಥವಾ ವೀಡಿಯೊಗಳನ್ನು ನೋಡಿ ಯೋಗ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಷ್ಟು ಸಮಂಜಸವಲ್ಲ.  ಏಕೆಂದರೆ ಕೆಲವು ರೋಗಗಳಿಂದಾಗಿ ನಾನಾ ಯೋಗ ಭಂಗಿಗಳನ್ನು ಮಾಡಲು ಜನರಿಗೆ ನಿಷೇಧಿಸಲಾಗಿರುತ್ತದೆ. ನಿಮಗೆ ಇದರ ಬಗ್ಗೆ ಅರಿವಿಲ್ಲದಿದ್ದರೆ, ಆ ಯೋಗ ಭಂಗಿಯಿಂದ ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡುವ ಬದಲು, ನಿಮ್ಮ ಸಮಸ್ಯೆ ಹೆಚ್ಚಾಗಬಹುದು. ಇದಲ್ಲದೇ, ಯೋಗವನ್ನು ತಪ್ಪಾಗಿ ಮಾಡಿದರೆ, ಸ್ನಾಯುಗಳಲ್ಲಿ ಒತ್ತಡ ಉಂಟಾಗಬಹುದು ಅಥವಾ ಚಡಪಡಿಕೆ ಉಂಟಾಗಬಹುದು. ಆದ್ದರಿಂದ ತರಬೇತಿ ಪಡೆದ ನಂತರವೇ ಇದನ್ನು ಅಭ್ಯಾಸ ಮಾಡಿ.

ಹೆಚ್ಚು ನೀರು ಕುಡಿಯಬೇಡಿ ಯೋಗಾಭ್ಯಾಸದ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಡಿ. ಏಕೆಂದರೆ ನೀವು ಯೋಗ ಮಾಡುವಾಗ ನಿಮ್ಮ ದೇಹದ ಶಾಖದ ಮಟ್ಟವು ಕ್ರಮೇಣ ಹೆಚ್ಚಾಗುತ್ತದೆ. ನೀರನ್ನು ಕುಡಿಯುವುದರಿಂದ, ಶಾಖವು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ ಮತ್ತು ಶೀತ, ಕೆಮ್ಮು, ಅಸ್ವಸ್ಥತೆ, ಅಲರ್ಜಿ ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಒಂದಕ್ಕಿಂತ ಹೆಚ್ಚು ಅಥವಾ ಎರಡು ಸಿಪ್​ ನೀರನ್ನು ಕುಡಿಯಬೇಡಿ.

ತಕ್ಷಣ ಸ್ನಾನ ಮಾಡಬೇಡಿ ಯೋಗಾಭ್ಯಾಸ ಮಾಡಿದ ನಂತರ ಅಥವಾ ಯಾವುದೇ ರೀತಿಯ ವ್ಯಾಯಾಮ ಮಾಡಿದ ತಕ್ಷಣ ಸ್ನಾನ ಮಾಡಬಾರದು. ಸ್ವಲ್ಪ ಹೊತ್ತು ಕುಳಿತು, ದೇಹ ತಣ್ಣಗಾಗಲು ಬಿಡಿ.  ನಂತರ ಸ್ನಾನ ಮಾಡಿ.

ಇದನ್ನೂ ಓದಿ: Health Benefits: ಕಟಿ ಚಕ್ರಾಸನ ಮಾಡುವುದು ಹೇಗೆ? ಹೊಟ್ಟೆಯಲ್ಲಿನ ಕೊಬ್ಬು ಕರಗಿಸಲು 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ

Skin Care: ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಈ 5 ಯೋಗಾಸನಗಳನ್ನು ಅಭ್ಯಾಸ ಮಾಡಿ

(never do these four mistakes in yoga practice time)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ