ಈ ರಕ್ತದ ಗುಂಪಿನ ಜನರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು

| Updated By: ವಿವೇಕ ಬಿರಾದಾರ

Updated on: Sep 09, 2022 | 7:00 AM

ಈ ರಕ್ತದ ಗುಂಪಿನ ಜನರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಅಧ್ಯಯನವೊಂದು ಹೇಳಿದೆ.

ಈ ರಕ್ತದ ಗುಂಪಿನ ಜನರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು
ಪ್ರಾತಿನಿಧಿಕ ಚಿತ್ರ
Follow us on

ಮಾನವ ದೇಹದಲ್ಲಿ ನಾಲ್ಕು ರೀತಿಯ ರಕ್ತದ ಗುಂಪುಗಳಿವೆ. ಅವು ಎ, ಬಿ, ಎಬಿ, ಓ. ಈ ನಾಲ್ಕು ರಕ್ತದ ಗುಂಪುಗಳು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತವೆ. ರಕ್ತದಲ್ಲಿನ ಪ್ರತಿಜನಕಗಳ ಸಂಖ್ಯೆಯ Rh ಅಂಶದ ಆಧಾರದ ಮೇಲೆ ಅವುಗಳನ್ನು ನಿರ್ಧರಿಸಲಾಗುತ್ತದೆ. ವ್ಯಕ್ತಿಯ ರಕ್ತದ ಪ್ರಕಾರವು ಧನಾತ್ಮಕ ಅಥವಾ ಋಣಾತ್ಮಕವಾಗಿರಬಹುದು. ಸರಳವಾಗಿ ಹೇಳಬೇಕೆಂದರೆ ಒಬ್ಬ ವ್ಯಕ್ತಿಯ ರಕ್ತ ಗುಂಪಿನಲ್ಲಿ Rh ಅಂಶವಿದ್ದರೆ ಅವನ ರಕ್ತದ ಗುಂಪು A ಪಾಸಿಟಿವ್​.

ಇತ್ತೀಚಿನ ಅಧ್ಯಯನದ ಪ್ರಕಾರ ಎ, ಬಿ, ಎಬಿ ರಕ್ತದ ಗುಂಪು ಹೊಂದಿರುವವರಿಗೆ ಹೃದಯಾಘಾತದ ಅಪಾಯ ಹೆಚ್ಚು. ಆರ್ಟೆರಿಯೊಸ್ಕ್ಲೆರೋಸಿಸ್, ಥ್ರಂಬೋಸಿಸ್, ನಾಳೀಯ ಜೀವಶಾಸ್ತ್ರದಲ್ಲಿ ಪ್ರಕಟವಾದ ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​​​(AHA) ಅಧ್ಯಯನವು A ಅಥವಾ B ರಕ್ತದ ಗುಂಪು ಹೊಂದಿರುವ ಜನರು O ರಕ್ತದ ಗುಂಪುಗಳಿಗಿಂತ 8 ಪಟ್ಟು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂದು ಹೇಳಿದೆ. ಅಧ್ಯಯನಕ್ಕೆ 4 ಲಕ್ಷ ಜನರನ್ನು ಬಳಸಿಕೊಳ್ಳಲಾಗಿದೆ.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕೂಡ ಈ ನಿಟ್ಟಿನಲ್ಲಿ ಅಧ್ಯಯನ ಮಾಡಿದೆ.  2017 ರಲ್ಲಿ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿದ ಮತ್ತೊಂದು ಅಧ್ಯಯನದಲ್ಲಿ, 13.6 ಲಕ್ಷಕ್ಕೂ ಹೆಚ್ಚು ಜನರನ್ನು ವಿಶ್ಲೇಷಿಸಲಾಗಿದೆ. ಅಧ್ಯಯನದ ಫಲಿತಾಂಶದಲ್ಲಿ ಪರಿಧಮನಿಯ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು O ಅಲ್ಲದ ರಕ್ತದ ಗುಂಪು ಹೊಂದಿರುವ ಜನರು 9 ಪ್ರತಿಶತದಷ್ಟು ಹೆಚ್ಚು ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಿದೆ.

O ಗುಂಪಿಗೆ ಹೋಲಿಸಿದರೆ B ರಕ್ತದ ಗುಂಪು ಹೊಂದಿರುವ ಜನರು 15 ಪ್ರತಿಶತದಷ್ಟು ಹೆಚ್ಚು ಹೃದಯಾಘತಕ್ಕೆ ಒಳಗಾಗುತ್ತಾರೆ. ಹಾಗೇ A ರಕ್ತದ ಗುಂಪು ಹೊಂದಿರುವ ಜನರು ಹೃದಯಾಘಾತದ ಅಪಾಯವನ್ನು ಹೊಂದಿರುತ್ತಾರೆ. A ರಕ್ತದ ಗುಂಪು ಹೊಂದಿರುವವರಲ್ಲಿ ಅಪಾಯವು 11 ಪ್ರತಿಶತದಷ್ಟು ಹೆಚ್ಚಾಗಿದೆ. O ನೆಗಟಿವ್​ ಹೊರತುಪಡಿಸಿ ಎಲ್ಲಾ ರಕ್ತದ ಗುಂಪು ಹೃದಯಾಘಾತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೊಂದಿವೆ.

ರಕ್ತ ಹೆಪ್ಪುಗಟ್ಟುವ ಪ್ರೊಟೀನ್, ವಾನ್ ವಿಲ್ಲೆಬ್ರಾಂಡ್ ಫ್ಯಾಕ್ಟರ್ (ವಿಡಬ್ಲ್ಯೂಎಫ್), o ಅಲ್ಲದ ರಕ್ತದ ಗುಂಪಿನಲ್ಲಿ ಹೆಚ್ಚು ಕಂಡುಬಂದಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಮತ್ತಷ್ಟು ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ