Perfect Walking: ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಬೇಡಿ; ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚು

|

Updated on: Oct 26, 2024 | 5:14 PM

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನಡೆಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಸರಿಯಾದ ರೀತಿಯಲ್ಲಿ ವಾಕಿಂಗ್​ ಮಾಡಿದರೆ ಮಾತ್ರ ಅದರ ಪ್ರಯೋಜನ ಪಡೆಯಲು ಸಾಧ್ಯ. ಆದ್ದರಿಂದ ನಿಮ್ಮಂದೆ ವಾಕಿಂಗ್​ ಹೋಗುವ ಮೊದಲು ಈ ವಿಷ್ಯ ನೆನಪಿನಲ್ಲಿಟ್ಟುಕೊಳ್ಳಿ.

Perfect Walking: ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಬೇಡಿ; ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚು
Walking Technique
Follow us on

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರು ಫಿಟ್ ಆಗಿರಲು ವ್ಯಾಯಾಮ, ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗುವವ ಅಭ್ಯಾಸ ಬೆಳೆಸಿದ್ದಾರೆ. ಫಿಟ್‌ನೆಸ್‌ಗೆ ವಾಕಿಂಗ್ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಆದರೆ, ಸರಿಯಾದ ಭಂಗಿಯಲ್ಲಿ ನಡೆದರೆ ಮಾತ್ರ ನಡಿಗೆಯ ಪ್ರಯೋಜನ ಪಡೆಯಲು ಸಾಧ್ಯ. ಆದ್ದರಿಂದ, ನೀವು ವಾಕ್ ಮಾಡಲು ಹೋದಾಗ, ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ನೀವು ನಡಿಗೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಬಯಸಿದರೆ, ಮೊದಲು ನಿಮ್ಮ ದೇಹದ ಭಂಗಿಯನ್ನು ಸುಧಾರಿಸಿ. ಸರಿಯಾದ ದೇಹದ ಭಂಗಿಯನ್ನು ಕಾಪಾಡಿಕೊಳ್ಳುವುದರಿಂದ, ನಾವು ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತದೆ. ನಡೆಯುವಾಗ ನಿಮ್ಮ ದೇಹವನ್ನು ಎಂದಿಗೂ ಕೆಳಕ್ಕೆ ಬಗ್ಗಿಸಬೇಡಿ. ಇದು ಹಿಂಭಾಗದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಸಮತೋಲನವನ್ನು ದುರ್ಬಲಗೊಳಿಸುತ್ತದೆ.

ನಡೆಯುವಾಗ ಕೈ ಬೀಸದೇ ಇರುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇದರಿಂದಾಗಿ ಅವರಿಗೆ ವಾಕಿಂಗ್‌ನ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ. ವಾಸ್ತವವಾಗಿ, ನಡೆಯುವಾಗ ಕೈಗಳನ್ನು ಬೀಸುವುದು ಒಳ್ಳೆಯದು. ಇದು ನಡೆಯುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ದೇಹದ ಸಮತೋಲನವನ್ನು ಸಹ ಕಾಪಾಡುತ್ತದೆ.

ಸರಿಯಾದ ಪಾದರಕ್ಷೆಗಳ ಆಯ್ಕೆಯೂ ಸಹ ಮುಖ್ಯ. ನೀವು ಸರಿಯಾದ ಪಾದರಕ್ಷೆಗಳನ್ನು ಧರಿಸಿ ನಡೆಯದಿದ್ದರೆ, ಅದು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳೂ ಬರಬಹುದು. ಪಾದಗಳಲ್ಲಿ ಸಹ ಗುಳ್ಳೆಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಸಾಕ್ಸ್ ಧರಿಸದೆ ಶೂಗಳನ್ನು ಧರಿಸುತ್ತಿದ್ದೀರಾ? ಈ ವಿಷಯಗಳು ತಿಳಿದಿರಲಿ

ನಡೆಯುವಾಗ ದೇಹವನ್ನು ಯಾವಾಗಲೂ ತೇವಾಂಶದಿಂದಿರುವಂತೆ ನೋಡಿಕೊಳ್ಳಬೇಕು. ಇದು ಆಯಾಸ ಮತ್ತು ದೌರ್ಬಲ್ಯವನ್ನು ಉಂಟುಮಾಡುವುದಿಲ್ಲ. ಸಾಕಷ್ಟು ನೀರು ಕುಡಿಯದೇ ಇರುವುದು ಸ್ನಾಯುವಿನ ಆಯಾಸ ಮತ್ತು ಸೆಳೆತಕ್ಕೆ ಕಾರಣವಾಗಬಹುದು. ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

ಕೆಲವರು ನಡೆಯುವಾಗ ಕೆಳಮುಖವಾಗಿ ನೋಡುತ್ತಾರೆ. ಇದಲ್ಲದೇ ಕೆಲವರು ಮೊಬೈಲ್ ಫೋನ್ ಬಳಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಡಿಗೆಯಿಂದ ಬರುವ ಲಾಭವು ನಷ್ಟವಾಗಿ ಬದಲಾಗಬಹುದು. ಇದು ಬಿಗಿತದ ಜೊತೆಗೆ ಬೆನ್ನು ಮತ್ತು ದೇಹದ ನೋವನ್ನು ಉಂಟುಮಾಡಬಹುದು. ಆದ್ದರಿಂದ, ವಾಕಿಂಗ್​ ಮಾಡುವಾಗ ಅದರ ಮೇಲೆಯೇ ಸಂಪೂರ್ಣ ಗಮನವನ್ನು ಇರಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Sat, 26 October 24