Health Tips: ಸಾಕ್ಸ್ ಧರಿಸದೆ ಶೂಗಳನ್ನು ಧರಿಸುತ್ತಿದ್ದೀರಾ? ಈ ವಿಷಯಗಳು ತಿಳಿದಿರಲಿ
ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದರಿಂದ ಪಾದಗಳಲ್ಲಿ ದುರ್ವಾಸನೆ ಬರುವುದಲ್ಲದೆ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪಾದಗಳು ದೇಹದ ಬೆವರುವ ಭಾಗಗಳಲ್ಲಿ ಒಂದಾಗಿದೆ. ಅದರಲ್ಲಿಯೂ ಬೂಟುಗಳನ್ನು ದಿನಪೂರ್ತಿ ಧರಿಸುವುದರಿಂದ ಮತ್ತಷ್ಟು ಬೆವರಬಹುದು. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಮತ್ತು ವಾಸನೆ ಬರದಂತೆ ತಡೆಯಲು, ಜೊತೆಗೆ ಕಾಲುಗಳು ಒಣಗಿರಲು ಸಾಕ್ಸ್ ಉತ್ತಮ. ಇದೆಲ್ಲದರ ಜೊತೆಗೆ ಸಾಕ್ಸ್ ಪಾದಗಳಲ್ಲಿ ಪದೇ ಪದೇ ಬೆವರುವುದನ್ನು ತಡೆಯುತ್ತವೆ. ಹಾಗಾದರೆ ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದರಿಂದ ಆಗುವ ಅನಾನುಕೂಲಗಳು ಯಾವುವು? ಸಾಕ್ಸ್ ನಮ್ಮ ಪಾದಗಳ ಆರೋಗ್ಯವನ್ನು ಯಾವ ರೀತಿಯಲ್ಲಿ ಕಾಪಾಡುತ್ತವೆ? ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಬಹಳಷ್ಟು ಜನರು ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುತ್ತಿದ್ದಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಅಭ್ಯಾಸವು ಯುವಕರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದರಿಂದ ಪಾದಗಳಲ್ಲಿ ದುರ್ವಾಸನೆ ಬರುವುದಲ್ಲದೆ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಪಾದಗಳು ದೇಹದ ಬೆವರುವ ಭಾಗಗಳಲ್ಲಿ ಒಂದಾಗಿದೆ. ಅದರಲ್ಲಿಯೂ ಬೂಟುಗಳನ್ನು ದಿನಪೂರ್ತಿ ಧರಿಸುವುದರಿಂದ ಮತ್ತಷ್ಟು ಬೆವರಬಹುದು. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಮತ್ತು ವಾಸನೆ ಬರದಂತೆ ತಡೆಯಲು, ಜೊತೆಗೆ ಕಾಲುಗಳು ಒಣಗಿರಲು ಸಾಕ್ಸ್ ಉತ್ತಮ. ಇದೆಲ್ಲದರ ಜೊತೆಗೆ ಇದು ಪಾದಗಳಲ್ಲಿ ಪದೇ ಪದೇ ಬೆವರುವುದನ್ನು ತಡೆಯುತ್ತವೆ. ಹಾಗಾದರೆ ಸಾಕ್ಸ್ ಇಲ್ಲದೆ ಶೂಗಳನ್ನು ಧರಿಸುವುದರಿಂದ ಆಗುವ ಅನಾನುಕೂಲಗಳು ಯಾವುವು? ಸಾಕ್ಸ್ ನಮ್ಮ ಪಾದಗಳ ಆರೋಗ್ಯವನ್ನು ಯಾವ ರೀತಿಯಲ್ಲಿ ಕಾಪಾಡುತ್ತವೆ? ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೇಸಿಗೆಗೆ ಮಾತ್ರವಲ್ಲ ಚಳಿಗಾಲಕ್ಕೂ ಒಳ್ಳೆಯದು;
ಸಾಕ್ಸ್ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದು ನಿಮ್ಮನ್ನು ಅನೇಕ ರೀತಿಯ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಅಲ್ಲದೆ, ಇವುಗಳನ್ನು ಧರಿಸುವುದರಿಂದ ಯಾವುದೇ ರೀತಿಯ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕುಗಳು ಉಂಟಾಗುವುದಿಲ್ಲ. ಸಾಕ್ಸ್ ಬೇಸಿಗೆಯಲ್ಲಿ ಬೆವರದಿರುವಂತೆ ತಡೆಯುವುದು ಮಾತ್ರವಲ್ಲದೆ ಚಳಿಗಾಲಕ್ಕೂ ಒಳ್ಳೆಯದು. ಏಕೆಂದರೆ ಆ ಸಮಯದಲ್ಲಿ ಸಾಕ್ಸ್ ಧರಿಸುವುದರಿಂದ ಶೀತದಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಇವು ನಿಮ್ಮ ಪಾದಗಳನ್ನು ಬೆಚ್ಚಗಿಡುತ್ತವೆ.
ಅಲರ್ಜಿ ಸಮಸ್ಯೆ ಉಂಟಾಗಬಹುದು
ಸಾಕ್ಸ್ ಧರಿಸದೆ ಶೂಗಳನ್ನು ಧರಿಸುವವರಿಗೆ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕೆಲವರು ತುಂಬಾ ಸೂಕ್ಷ್ಮ ಚರ್ಮವನ್ನು ಹೊಂದಿರುತ್ತಾರೆ. ಹಾಗಾಗಿ ಅಂತವರು, ಸಾಕ್ಸ್ ಧರಿಸದೆ ಶೂಗಳನ್ನು ಧರಿಸಬೇಡಿ. ಇಲ್ಲವಾದಲ್ಲಿ ಹಲವರಿಗೆ ಕಾಲು ಬೆವರು ಬಂದು ಪಾದಗಳಲ್ಲಿ ಅನೇಕ ರೀತಿಯ ತೊಂದರೆಯನ್ನು ಅನುಭವಿಸುತ್ತಾರೆ. ಬೆವರು, ಬೂಟುಗಳೊಳಗಿನ ತೇವಾಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ವಿವಿಧ ರೀತಿಯ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಕೆಲವರಿಗೆ ಸಾಕ್ಸ್ ಇಲ್ಲದೆ ಬೂಟುಗಳನ್ನು ಧರಿಸುವುದರಿಂದ ಪಾದಗಳ ಮೇಲೆ ಗುಳ್ಳೆಗಳು ಉಂಟಾಗಬಹುದು. ಈ ರೀತಿಯ ಸಮಸ್ಯೆ ಕಾಡದಿರಲು ಶೂಗಳನ್ನು ಧರಿಸುವವರು ಸಾಕ್ಸ್ ಧರಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ