Pet Health: ಸಾಕು ಪ್ರಾಣಿಗಳು ನಿಮ್ಮ ಒತ್ತಡ ಗ್ರಹಿಸಬಲ್ಲವು; ಅಧ್ಯಯನದಿಂದ ಬಹಿರಂಗ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 02, 2024 | 2:28 PM

ನೀವು ಸಾಕು ಪ್ರಾಣಿಗಳ ಪ್ರೀಯರಾಗಿದ್ದರೆ ನಿಮ್ಮ ಮನೆಯಲ್ಲಿಯೂ ನಾಯಿ, ಬೆಕ್ಕು ಅಥವಾ ಬಗೆ ಬಗೆಯ ಪಕ್ಷಿಗಳು ಇದ್ದರೆ, ನಿಮ್ಮ ಮಾನಸಿಕ ಸ್ಥಿತಿ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನೀವು ಪ್ರೀತಿಯಿಂದ ಸಾಕಿರುವ ಪ್ರಾಣಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಅಲ್ಲದೆ ಇದು ಇತ್ತೀಚಿನ ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ತಿಳಿದು ಬಂದಿರುವ ಪ್ರಕಾರ ನೀವು ಒತ್ತಡದಲ್ಲಿದ್ದಾಗ ನಿಮ್ಮ ಸಾಕು ಪ್ರಾಣಿಗಳು ಅದನ್ನು ಗ್ರಹಿಸಬಹುದು ಎಂದು ಹೇಳುತ್ತದೆ.

Pet Health: ಸಾಕು ಪ್ರಾಣಿಗಳು ನಿಮ್ಮ ಒತ್ತಡ ಗ್ರಹಿಸಬಲ್ಲವು; ಅಧ್ಯಯನದಿಂದ ಬಹಿರಂಗ
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ಒತ್ತಡ ಜೀವನಶೈಲಿಯಿಂದಾಗಿ ಅನೇಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಆದರೆ ನೀವು ಸಾಕು ಪ್ರಾಣಿಗಳ ಪ್ರೀಯರಾಗಿದ್ದರೆ ನಿಮ್ಮ ಮನೆಯಲ್ಲಿಯೂ ನಾಯಿ, ಬೆಕ್ಕು ಅಥವಾ ಬಗೆ ಬಗೆಯ ಪಕ್ಷಿಗಳು ಇದ್ದರೆ, ನಿಮ್ಮ ಮಾನಸಿಕ ಸ್ಥಿತಿ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ನೀವು ಪ್ರೀತಿಯಿಂದ ಸಾಕಿರುವ ಪ್ರಾಣಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಅಲ್ಲದೆ ಇದು ಇತ್ತೀಚಿನ ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ತಿಳಿದು ಬಂದಿರುವ ಪ್ರಕಾರ ನೀವು ಒತ್ತಡದಲ್ಲಿದ್ದಾಗ ನಿಮ್ಮ ಸಾಕು ಪ್ರಾಣಿಗಳು ಅದನ್ನು ಗ್ರಹಿಸಬಹುದು ಎಂದು ಹೇಳುತ್ತದೆ. ಬ್ರಿಸ್ಟಲ್ ವಿಶ್ವವಿದ್ಯಾಲಯ, ಕಾರ್ಡಿಫ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಚಾರಿಟಿ ಮೆಡಿಕಲ್ ಡಿಟೆಕ್ಷನ್ ಡಾಗ್ಸ್ ನಡೆಸಿದ ಜಂಟಿ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಅಧ್ಯಯನ ಹೇಳುವುದೇನು?

ಈ ಅಧ್ಯಯನವನ್ನು ನಡೆಸಲು ವಿಜ್ಞಾನಿಗಳು 18 ಜೋಡಿ ನಾಯಿಗಳು ಮತ್ತು ಅವುಗಳ ಮಾಲಕರನ್ನು ಆಯ್ಕೆ ಮಾಡಿಕೊಂಡಿತ್ತು. ಸಾಕು ಪ್ರಾಣಿಗಳನ್ನು ಸ್ವಲ್ಪ ಸಮಯ ಸಾಕಿದವರೊಂದಿಗೆ ಬಿಡದೆಯೇ ಅವರನ್ನು ಪ್ರತ್ಯೇಕವಾಗಿ ಇರಿಸಿ, ಅಲ್ಲಿ ಅವುಗಳಿಗೆ ಆಟ ಆಡಲು ಅಗತ್ಯವಿರುವ ಸಲಕರಣೆಗಳನ್ನು ಒದಗಿಸಲಾಗಿತ್ತು. ಇದರಿಂದ ಪ್ರಾಣಿಗಳು ಒತ್ತಡ ಮುಕ್ತರಾಗಿ ಆಟವಾಡುತ್ತಿತ್ತು. ಇತ್ತ ಸಂಶೋಧಕರು ನಾಯಿಯ ಮಾಲಕರಿಗೆ ಒತ್ತಡ ನೀಡಿದ್ದರು. ಬಳಿಕ ಅವರ ಬೆವರಿನ ಬಟ್ಟೆ ಮತ್ತು ಅವರು ಊಟ, ತಿಂಡಿ ಮಾಡಿದಂತಹ ಪಾತ್ರೆಗಳನ್ನು ಅವರ ನಾಯಿಗಳ ಮುಂದೆ ಇಡಲಾಗಿತ್ತು. ಅವು, ಮಾಲಕರ ಬಟ್ಟೆಯಿಂದ ಬಂದ ಬೆವರಿನ ವಾಸನೆಯಿಂದ ಮತ್ತು ಅವರು ಬಳಸಿದ ಪಾತ್ರೆಗಳ ಮೂಲಕ ತಮ್ಮ ಮಾಲಕರ ಆತಂಕವನ್ನು ಗ್ರಹಿಸಿದವು. ಜೊತೆಗೆ ಅಲ್ಲಿಯವರೆಗೆ ಇದ್ದ ಶಾಂತತೆ ನಾಯಿಗಳಲ್ಲಿ ಕಣ್ಮರೆಯಾಯಿತು.

ಇದನ್ನೂ ಓದಿ; ಮೆಣಸಿನಕಾಯಿ ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳೇನು?

ಯಾವ ರೀತಿ ಪರಿಣಾಮ ಬೀರುತ್ತದೆ?

ಹಾಗಾಗಿ, ವಿಜ್ಞಾನಿಗಳು ಹೇಳುವ ಪ್ರಕಾರ ನಾಯಿಗಳು ಮಾನವ ನಡವಳಿಕೆಯಲ್ಲಿ ಆಗುವ ಚಿಕ್ಕ ಬದಲಾವಣೆಯನ್ನು ಕೂಡ ಗ್ರಹಿಸಬಲ್ಲವು. ಇದು ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬಳಿಕ ಅವು ಶಾಂತವಾಗುತ್ತವೆ. ಯಾವುದಕ್ಕೂ ಹೆಚ್ಚಿನ ಆಸಕ್ತಿ ತೋರಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ನಾಯಿಗಳು ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಸಾಯುವ ಪರಿಸ್ಥಿತಿಯಲ್ಲಿರುವಾಗ ಮಾಲಕರು ನೊಂದುಕೊಳ್ಳುತ್ತಾರೆ. ಅದೇ ರೀತಿ ಸಾಕು ಪ್ರಾಣಿಗಳು ಕೂಡ ನಿಮ್ಮ ಆತಂಕ ಮತ್ತು ಒತ್ತಡಕ್ಕೆ ಮಿಡಿಯುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ