Potato Juice: ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಈ 7 ಆರೋಗ್ಯ ಸಮಸ್ಯೆಗಳು ದೂರವಾಗುತ್ತೆ, ಚರ್ಮಕ್ಕೂ ಉತ್ತಮ

ಅಯ್ಯೋ ಆಲೂಗಡ್ಡೆ ಜ್ಯೂಸ್ ಕಡೀಬೇಕಾ ಎಂದು ಮೂಗುಮುರಿಯಬೇಡಿ, ನಾಲಿಗೆಗೆ ರುಚಿಗಿಂತ ಕೆಲವೊಮ್ಮೆ ದೇಹದ ಆರೋಗ್ಯ ಮುಖ್ಯವಾಗುತ್ತದೆ.

Potato Juice: ಆಲೂಗಡ್ಡೆ ಜ್ಯೂಸ್ ಕುಡಿಯುವುದರಿಂದ ಈ 7 ಆರೋಗ್ಯ ಸಮಸ್ಯೆಗಳು ದೂರವಾಗುತ್ತೆ, ಚರ್ಮಕ್ಕೂ ಉತ್ತಮ
ಆಲೂಗಡ್ಡೆ ಜ್ಯೂಸ್

Updated on: Mar 10, 2023 | 12:55 PM

ಅಯ್ಯೋ ಆಲೂಗಡ್ಡೆ ಜ್ಯೂಸ್ ಕಡೀಬೇಕಾ ಎಂದು ಮೂಗುಮುರಿಯಬೇಡಿ, ನಾಲಿಗೆಗೆ ರುಚಿಗಿಂತ ಕೆಲವೊಮ್ಮೆ ದೇಹದ ಆರೋಗ್ಯ ಮುಖ್ಯವಾಗುತ್ತದೆ. ನೀವು ಈ 7 ಆರೋಗ್ಯ ಸಮಸ್ಯೆಗಳು ನಿಮಗೆ ಬಾರದಂತೆ ತಡೆಯಲು ಆಲೂಗಡ್ಡೆ ಜ್ಯೂಸ್ ಕುಡಿಯಲೇಬೇಕು. ನೀವು ಮಾಡುವ ಅಡುಗೆಯಲ್ಲಿ ಟೊಮೆಟೋವನ್ನು ಹೇಗೆ ಬಳಕೆ ಮಾಡುತ್ತೀರೋ ಅದಕ್ಕಿಂತ ತುಸು ಹೆಚ್ಚಾಗಿಯೇ ಆಲೂಗಡ್ಡೆ ಬಳಕೆ ಮಾಡುತ್ತೀರಿ. ಕ್ಯಾರೆಟ್​, ಬೀಟ್ರೋಟ್​, ಬೀನ್ಸ್​, ಸೊಪ್ಪಿನ ಪದಾರ್ಥಗಳಲ್ಲಿ ಆಲೂವನ್ನು ಸೇರಿಸಿದರೆ ರುಚಿ ಇಮ್ಮಡಿಯಾಗುತ್ತದೆ.

ಆಲೂಗಡ್ಡೆಯಲ್ಲಿ ಅನೇಕ ಆರೋಗ್ಯಕಾರಿ ಲಾಭಗಳು ಅಡಗಿವೆ.

ಆಲೂಗಡ್ಡೆ ರಸವನ್ನು ಕುಡಿಯುವುದು ಮತ್ತು ಮುಖಕ್ಕೆ ಹಚ್ಚುವುದರಿಂದ ಆಗುವ ಪ್ರಯೋಜನಗಳು

1. ಮುಖದಲ್ಲಿರುವ ಕಪ್ಪು ಕಲೆಗಳನ್ನು ತಿಳಿಗೊಳಿಸುತ್ತದೆ
ಅಧ್ಯಯನಗಳ ಪ್ರಕಾರ, ಹಸಿ ಆಲೂಗೆಡ್ಡೆ ರಸವನ್ನು ಮುಖದ ಮೇಲೆ ಹಚ್ಚುವುದರಿಂದ ಕಪ್ಪು ಕಲೆಗಳು, ಕಣ್ಣುಗಳ ಕೆಳಗಿರುವ ಬ್ಲ್ಯಾಕ್​ಸ್ಪಾಟ್​ಗಳನ್ನು ತಿಳಿಗೊಳಿಸುತ್ತದೆ. ಹಸಿ ಆಲೂಗಡ್ಡೆ ರಸದಲ್ಲಿ ಸ್ವಲ್ಪ ಹತ್ತಿಯನ್ನು ನೆನೆಸಿ, ಅದನ್ನು ಕಣ್ಣಿನ ಕೆಳಗೆ ಹಚ್ಚಿ. ನೀವು ಬಯಸಿದರೆ, ನೀವು ಸಿಪ್ಪೆಯನ್ನು ಸಹ ಕಣ್ಣಿಗೆ. ಇದು ಚರ್ಮಕ್ಕೆ ಹೊಳಪು ನೀಡುವುದಷ್ಟೇ ಅಲ್ಲದೆ ಚರ್ಮ ಬಿಗಿಯಾಗಿರಲು ಸಹಾಯ ಮಾಡುತ್ತದೆ.

2. ಸೋರಿಯಾಸಿಸ್ ಕಡಿಮೆ ಮಾಡುತ್ತದೆ
ಹಸಿ ಆಲೂಗೆಡ್ಡೆಯ ರಸವನ್ನು ಬಾಧಿತ ಪ್ರದೇಶಗಳ ಮೇಲೆ 10-15 ದಿನಗಳವರೆಗೆ ಹಚ್ಚುವುದರಿಂದ ಮಕ್ಕಳು ಮತ್ತು ವಯಸ್ಕರು ಈ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.

3. ಸಂಧಿವಾತ ನೋವು ನಿವಾರಣೆ: ಕೀಲು ನೋವಿನ ಸಾಮಾನ್ಯ ಕಾರಣವೆಂದರೆ ಹೆಚ್ಚಿನ ಯೂರಿಕ್ ಆಸಿಡ್ ಮಟ್ಟ, ತಜ್ಞರ ಪ್ರಕಾರ, ತಾಜಾ ಆಲೂಗೆಡ್ಡೆ ರಸವನ್ನು ಸೇವಿಸುವುದರಿಂದ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕಿಡ್ನಿಯನ್ನು ಆರೋಗ್ಯವಾಗಿಡಲು ಇದು ಸಹಕಾರಿಯಾಗಿದೆ.

4. ನೋವು ಮತ್ತು ಉರಿಯೂತದಿಂದ ಪರಿಹಾರ: ಆಲೂಗಡ್ಡೆ ರಸವು ಕೀಲುಗಳಲ್ಲಿರುವ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸಂಧಿವಾತದ ನೋವನ್ನೂ ಕಡಿಮೆ ಮಾಡುತ್ತದೆ.

5. ಕಬ್ಬಿಣ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲ: ಆಲೂಗಡ್ಡೆಯು ವಿಟಮಿನ್ ಸಿ ಮತ್ತು ಕಬ್ಬಿಣದ ಉತ್ತಮ ಮೂಲವಾಗಿದೆ. ಒಂದು ಮಧ್ಯಮ ಆಲೂಗೆಡ್ಡೆಯು ವಿಟಮಿನ್ ಸಿ ಯ RDA ಯ 50 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹೊಂದಿರುತ್ತದೆ. ಇದು ಚಯಾಪಚಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಕಬ್ಬಿಣಾಂಶವನ್ನು ಹೊಂದಿರುತ್ತದೆ.

6. ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಬಹುದು
ಆಲೂಗೆಡ್ಡೆ ರಸವನ್ನು ನಿಯಮಿತವಾಗಿ ಬಳಸುವುದರಿಂದ ತಲೆಹೊಟ್ಟು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ.

7. ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ: ಆಲೂಗಡ್ಡೆ ರಸವು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ