Ooty: ‘ಡೇರ್’​ಗಾಗಿ 40 ಐರನ್ ಟ್ಯಾಬ್ಲೆಟ್ ನುಂಗಿದ ವಿದ್ಯಾರ್ಥಿನಿ ಸಾವು!

ಘಟನೆಯ ಕುರಿತು ಪೊಲೀಸರು (Police) ತನಿಖೆ ನಡೆಸಿದಾಗ ಮೃತ 8 ನೇ ತರಗತಿಯ ವಿದ್ಯಾರ್ಥಿನಿ ಸುಮಾರು 45 ಮಾತ್ರೆಗಳನ್ನು ಸೇವಿಸಿದ್ದಾರೆ, ಇತರರು 10-20 ಮಾತ್ರೆಗಳನ್ನು ನುಂಗಿದ್ದಾರೆ ಎಂದು ತಿಳಿಸಿದರು.

Ooty: 'ಡೇರ್'​ಗಾಗಿ 40 ಐರನ್ ಟ್ಯಾಬ್ಲೆಟ್ ನುಂಗಿದ ವಿದ್ಯಾರ್ಥಿನಿ ಸಾವು!
Ooty Student
Follow us
ನಯನಾ ಎಸ್​ಪಿ
|

Updated on: Mar 10, 2023 | 4:30 PM

ಉದಗಮಂಗಳ: ಊಟಿ (Ooty) ಶಾಲೆಯ ವಿದ್ಯಾರ್ಥಿನಿಯಾದ 13 ವರ್ಷದ ಬಾಲಕಿ ಸೋಮವಾರ ಅತಿಯಾದ ಕಬ್ಬಿಣ (Iron)ಮತ್ತು ಫೋಲಿಕ್ ಆಸಿಡ್ (Folic Acid) ಮಾತ್ರೆಗಳನ್ನು ಸೇವಿಸಿದ ಕಾರಣ ಗುರುವಾರ (ಮಾರ್ಚ್ 9) ಸಾವನ್ನಪ್ಪಿದ್ದಾಳೆ. ಆಕೆಯನ್ನು ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಪ್ಲಿಮೆಂಟ್‌ನ ಅತಿಯಾದ ಸೇವನೆಯಿಂದ ಉಂಟಾದ ಲಿವರ್ ವೈಫಲ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪೊಲೀಸರು (Police) ತನಿಖೆ ನಡೆಸಿದಾಗ ಮೃತ 8 ನೇ ತರಗತಿಯ ವಿದ್ಯಾರ್ಥಿನಿ ಸುಮಾರು 45 ಮಾತ್ರೆಗಳನ್ನು ಸೇವಿಸಿದ್ದಾರೆ, ಇತರರು 10-20 ಮಾತ್ರೆಗಳನ್ನು ನುಂಗಿದ್ದಾರೆ ಎಂದು ತಿಳಿಸಿದರು.

ಪೌಷ್ಠಿಕಾಂಶ ಯೋಜನೆಯ ಅಂಗವಾಗಿ ಸರ್ಕಾರಿ ಆರೋಗ್ಯ ಇಲಾಖೆ ವಿದ್ಯಾರ್ಥಿಗಳು ಪ್ರತಿದಿನ ಒಂದು ಮಾತ್ರೆ ಸೇವಿಸಬೇಕೆಂದು, ಎರಡು ತಿಂಗಳ ಕಾಲ 50 ಮಾತ್ರೆಗಳ ಬ್ಯಾಚ್ ನೀಡಲಾಗಿತ್ತು. ನೀಡಿದ ಕಬ್ಬಿಣಾಂಶ ಮತ್ತು ಪೌಷ್ಟಿಕಾಂಶದ ಮಾತ್ರೆಗಳನ್ನು ಯಾರು ಹೆಚ್ಚು ತಿನ್ನಬಹುದು ಎಂದು ಮಾರ್ಚ್ 6 ರಂದು 8 ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರು ‘ಡೇರ್’ ಆಟ ಆಡಿದರು. ಹಲವಾರು ಮಾತ್ರೆಗಳನ್ನು ಸೇವಿಸಿದ ನಂತರ ವಿದ್ಯಾರ್ಥಿಗಳು ತರಗತಿಯಲ್ಲಿ ಅಸ್ವಸ್ಥಗೊಂಡರು. ಈ ವಿದ್ಯಾರ್ಥಿಗಳನ್ನು ಕೊಯಮತ್ತೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ಜೈನಬಾ ಫಾತಿಮಾ (13) ಎಂಬ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇನ್ನುಳಿದ ಮೂವರು ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಲಿವರ್ ತೀವ್ರವಾಗಿ ಹಾನಿಗೊಳಗಾದ ಒಬ್ಬ ವಿದ್ಯಾರ್ಥಿನಿ ಐಸಿಯು ಘಟಕದಲ್ಲಿದ್ದಾರೆ.

ಇಂಡಿಯನ್ ಎಕ್ಸ್’ಪ್ರೆಸ್ ವರದಿಯ ಪ್ರಕಾರ ಆಕೆಯನ್ನು ಚೆನ್ನೈಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಸೇಲಂ ಬಳಿ ಬಂದಾಗ ಆಕೆಯ ಸ್ಥಿತಿಗಂಭೀರವಾಗಿತ್ತು. ಆಕೆಯನ್ನು ಸೇಲಂ ಜಿಎಚ್‌ ಆಸ್ಪತ್ರೆಯಲ್ಲಿ ಆಗಮನದ ವೇಳೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು ಎಂದು CMCH ಡೀನ್ ಡಾ ಎ.ನಿರ್ಮಲಾ ಹೇಳಿದ್ದಾರೆ.

“ಇಬ್ಬರು ಹುಡುಗಿಯರ ಸ್ಥಿತಿ ಸ್ಥಿರವಾಗಿದೆ, ಆದರೆ ಇನ್ನೂ ಒಬ್ಬ ಹುಡುಗಿಗೆ ಲಿವರ್ ಹಾನಿಯಾಗಿದೆ” ಎಂದು ವೈದ್ಯರು ಹೇಳಿದರು. ಆರೋಗ್ಯ ಸೇವೆಗಳ ಉಪ ನಿರ್ದೇಶಕ ಪಿ ಬಾಲುಸಾಮಿ ಮಾತನಾಡಿ, ಸಂತ್ರಸ್ತೆ ಸುಮಾರು 45 ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ತಿಳಿಸಿದರು.

ಇದನ್ನು ಓದಿ: ಮೋಸ ಮಾಡಿ ಹಣ ಲೂಟಿ, ಪತಿ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ಪತ್ನಿ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಗ್ರಾಹಕ ನ್ಯಾಯಾಲಯ

ಮುನ್ಸಿಪಲ್ ಶಾಲೆಯ ಮುಖ್ಯೋಪಾಧ್ಯಾಯ ಮೊಹಮ್ಮದ್ ಅಮೀನ್ ಮತ್ತು ಮಾತ್ರೆ ವಿತರಣೆಯ ಮೇಲ್ವಿಚಾರಕ ಕಲೈವಾಣಿ ಮತ್ತು ಶಾಲೆಯ ಶಿಕ್ಷಕಿಯನ್ನು ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತುಗೊಳಿಸಿದ್ದಾರೆ.

ಘಟನೆ ನಡೆದ ದಿನ ಶಿಕ್ಷಕಿ ಕಲೈವಾಣಿ ಶಾಲೆಗೆ ಬಾರದೇ ಇದ್ದ ಕಾರಣ ಅವರ ಮೇಜಿನ ಮೇಲಿದ್ದ ಮಾತ್ರೆಗಳನ್ನು ತೆಗೆದುಕೊಂಡು ವಿದ್ಯಾರ್ಥಿಗಳು ತಿಂದಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಒಟ್ಟು 249 ವಿದ್ಯಾರ್ಥಿಗಳಿದ್ದಾರೆ.

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್