Mumbai: ಮೋಸ ಮಾಡಿ ಹಣ ಲೂಟಿ, ಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತ್ನಿ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಗ್ರಾಹಕ ನ್ಯಾಯಾಲಯ
ಪತಿ ತನಗೆ ಮೋಸ ಮಾಡಿ ಬ್ಯಾಂಕ್ನಿಂದ ಹಣ ದೋಚಿದ್ದಾರೆ ಎಂದು ಮಹಿಳೆಯೊಬ್ಬರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಪತಿ ತನಗೆ ಮೋಸ ಮಾಡಿ ಬ್ಯಾಂಕ್ನಿಂದ ಹಣ ದೋಚಿದ್ದಾರೆ ಎಂದು ಮಹಿಳೆಯೊಬ್ಬರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಇದು ಗ್ರಾಹಕ ವ್ಯಾಜ್ಯವಲ್ಲ ಆನ್ಲೈನ್ ವಂಚನೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ. ಎಚ್ಡಿಎಫ್ಸಿ ಬ್ಯಾಂಕ್ ವಿರುದ್ಧದ ಸಲ್ಲಿಸಲಾಗಿದ್ದ ಸೇವೆಯಲ್ಲಿನ ಕೊರತೆ ದೂರನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯ ವಜಾಗೊಳಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆನ್ಲೈನ್ ಟ್ರ್ಯಾನ್ಸಾಕ್ಷನ್ನಲ್ಲಿ ಬ್ಯಾಂಕ್ ಯಾವ್ದೇ ಕಾರಣಕ್ಕೂ ಮಧ್ಯಪ್ರವೇಶಿಸುವುದಿಲ್ಲ. ಆನ್ಲೈನ್ ವಟಿವಾಟಿನಲ್ಲಾದ ಮೋಸದಲ್ಲಿ ಬ್ಯಾಂಕ್ ಭಾಗಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಹಾಗಾಗಿ ಬ್ಯಾಂಕ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಮುಂಬೈ ನಿವಾಸಿಯಾಗಿರುವ ನಿವಿಯಾ ತನ್ನ ಪತಿಯಿಂದ ವಂಚನೆಗೊಳಗಾಗಿದ್ದೇನೆ ಎಂದು ದೂರು ನೀಡಿದ್ದರು. ಪತಿ ನನಗೆ ಮೋಸ ಮಾಡಿ 5.11 ಲಕ್ಷಕ್ಕೂ ಅಧಿಕ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾರೆ.
ಮತ್ತಷ್ಟು ಓದಿ: Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ
ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ. ಸೇವೆಯಲ್ಲಿನ ಲೋಪದಿಂದಾಗಿಯೇ ನನ್ನ ಅಕೌಂಟ್ನಲ್ಲಿರುವ ಹಣವನ್ನು ಸುಲಭವಾಗಿ ಡ್ರಾ ಮಾಡಿದ್ದಾರೆ ಎಂದು ದೂರಿದ್ದರು.
ಇದೀಗ ನ್ಯಾಯಾಲಯವು ಇದರಲ್ಲಿ ಬ್ಯಾಂಕ್ ತಪ್ಪು ಇಲ್ಲ, ಎಂದು ಹೇಳಿದ್ದು, ಈ ಸಮಸ್ಯೆ ನಮ್ಮ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ