ರಿಲಯನ್ಸ್​​​ ಸ್ಮಾರ್ಟ್​​​ ಪಾಯಿಂಟ್‌ನಲ್ಲಿ ಬಲವಂತವಾಗಿ ಕ್ಯಾರಿ ಬ್ಯಾಗ್​​​ ಖರೀದಿಸುವಂತೆ ಮಾಡಿದ್ದಕ್ಕೆ ಗ್ರಾಹಕ ನ್ಯಾಯಾಲಯಕ್ಕೆ ದೂರು; ಗ್ರಾಹಕನ ಪರ ತೀರ್ಪು

ಜುಲೈನಲ್ಲಿ ರವಿಕುಮಾರ್ ಅವರು ನಗರದ ಶಾಂತಿನಗರ ಪ್ರದೇಶದಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ರಿಲಯನ್ಸ್ ಸ್ಮಾರ್ಟ್ ಪಾಯಿಂಟ್‌ನ ಮ್ಯಾನೇಜರ್ ಮತ್ತು ರಿಟೇಲ್ ಚೈನ್ ವಿರುದ್ಧ ದೂರು ದಾಖಲಿಸಿದ್ದರು.

ರಿಲಯನ್ಸ್​​​ ಸ್ಮಾರ್ಟ್​​​ ಪಾಯಿಂಟ್‌ನಲ್ಲಿ ಬಲವಂತವಾಗಿ ಕ್ಯಾರಿ ಬ್ಯಾಗ್​​​ ಖರೀದಿಸುವಂತೆ ಮಾಡಿದ್ದಕ್ಕೆ  ಗ್ರಾಹಕ ನ್ಯಾಯಾಲಯಕ್ಕೆ ದೂರು; ಗ್ರಾಹಕನ ಪರ ತೀರ್ಪು
ಸಾಂದರ್ಭಿಕ ಚಿತ್ರ
TV9kannada Web Team

| Edited By: Rashmi Kallakatta

Nov 23, 2022 | 1:00 PM

ಬೆಂಗಳೂರು: ರಿಟೇಲ್ ಸ್ಟೋರ್ ತನ್ನಲ್ಲಿ ಕ್ಯಾರಿ ಬ್ಯಾಗ್ (carry bag) ಖರೀದಿ ಮಾಡುವಂತೆ ಬಲವಂತ ಮಾಡಿತು ಎಂದು ಆರೋಪಿಸಿ ಬೆಂಗಳೂರಿನ ವಕೀಲರೊಬ್ಬರು ರಿಲಯನ್ಸ್ ರಿಟೇಲ್ ಲಿಮಿಟೆಡ್(Reliance Retail Limited) ವಿರುದ್ಧ ದೂರು ದಾಖಲಿಸಿದ್ದು, ಅದರಲ್ಲಿ ಗೆಲುವು ಪಡೆದಿದ್ದಾರೆ. ರಿಲಯನ್ಸ್ ರಿಟೇಲ್ ಲಿಮಿಟೆಡ್‌ ವಿರುದ್ಧ ಈ ವ್ಯಕ್ತಿ ದೂರು ನೀಡಿದ್ದು ಕ್ಯಾರಿ ಬ್ಯಾಗ್‌ಗೆ ಖರ್ಚು ಮಾಡಿದ ಹಣ, ₹5000 ಹೆಚ್ಚುವರಿ ಪರಿಹಾರ ಮತ್ತು ₹2000 ನ್ಯಾಯಾಲಯದ ವೆಚ್ಚಕ್ಕೆ ಮರುಪಾವತಿಸುವಂತೆ ನಗರದ ಗ್ರಾಹಕ ನ್ಯಾಯಾಲಯವು ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿದೆ. ವರದಿಯ ಪ್ರಕಾರ ರವಿಕಿರಣ್ ಎಂಬ ವಕೀಲರು ತಮ್ಮ ಪತ್ನಿಯೊಂದಿಗೆ ನಗರದ ನಂದಿ ಲೇಔಟ್‌ನಲ್ಲಿರುವ ರಿಲಯನ್ಸ್ ಸ್ಮಾರ್ಟ್ ಪಾಯಿಂಟ್‌ಗೆ (Reliance Smart Point) ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ತೆರಳಿದ್ದರು. ಸುಮಾರು ₹ 2000 ಖರ್ಚು ಮಾಡಿ ಶಾಪಿಂಗ್ ಮಾಡಿದ ನಂತರ, ಬಿಲ್ಲಿಂಗ್ ಕೌಂಟರ್‌ನಲ್ಲಿದ್ದ ವ್ಯಕ್ತಿ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ₹ 24.9 ಪಾವತಿಸುವುದು ಕಡ್ಡಾಯವಾಗಿದೆ ಎಂದು ವಾದಿಸಿದರು. ರವಿಕಿರಣ್ ನಿರಾಕರಿಸಿದರೂ ಸಿಬ್ಬಂದಿ ಒಪ್ಪಲಿಲ್ಲ. ಆದಾಗ್ಯೂ, ರವಿಕಿರಣ್ ಕ್ಯಾರಿ ಬ್ಯಾಗ್‌ಗಾಗಿ ಹೆಚ್ಚುವರಿ ಹಣವನ್ನು ಪಾವತಿಸಿದರು. ಆನಂತರ ಪ್ರಸ್ತುತ ಸ್ಟೋರ್ ವಿರುದ್ಧ ದೂರು ನೀಡಿದರು.

ಜುಲೈನಲ್ಲಿ ರವಿಕುಮಾರ್ ಅವರು ನಗರದ ಶಾಂತಿನಗರ ಪ್ರದೇಶದಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ರಿಲಯನ್ಸ್ ಸ್ಮಾರ್ಟ್ ಪಾಯಿಂಟ್‌ನ ಮ್ಯಾನೇಜರ್ ಮತ್ತು ರಿಟೇಲ್ ಚೈನ್ ವಿರುದ್ಧ ದೂರು ದಾಖಲಿಸಿದ್ದರು. ನ್ಯಾಯಾಲಯವು ಕಂಪನಿಗೆ ನೋಟಿಸ್ ನೀಡಿದ್ದರೂ, ಅವರ ಪ್ರತಿನಿಧಿ ವಿಚಾರಣೆಗೆ ಹಾಜರಾಗಲಿಲ್ಲ.

ತಮ್ಮ ವಾದದಲ್ಲಿ, ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಸೇರಿದಂತೆ ಹಲವಾರು ಗ್ರಾಹಕ ವೇದಿಕೆಗಳ ಆದೇಶಗಳು ಕ್ಯಾರಿ ಬ್ಯಾಗ್‌ಗಳಿಗಾಗಿ ಹಣವನ್ನು ಸಂಗ್ರಹಿಸುವುದನ್ನು ಅನ್ಯಾಯ ಎಂದು ಪರಿಗಣಿಸಲಾಗಿದೆ ಎಂದು ರವಿ ಕುಮಾರ್ ಎತ್ತಿ ತೋರಿಸಿದರು.

ನಾಲ್ಕು ತಿಂಗಳ ವಿಚಾರಣೆ ನಂತರ, ಗ್ರಾಹಕ ನ್ಯಾಯಾಲಯ ಕ್ಯಾರಿ ಬ್ಯಾಗ್ ನ ರೂ. 24.9, ಪರಿಹಾರ ಮತ್ತು ನ್ಯಾಯಾಲಯದ ವೆಚ್ಚಗಳನ್ನು ಪಾವತಿಸುವಂತೆ ರಿಲಯನ್ಸ್ ರಿಟೇಲ್ ಲಿಮಿಟೆಡ್ ಗೆ ಆದೇಶಿಸಿ ತೀರ್ಪು ನೀಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada