ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ: ಕೆ.ಆರ್.ಮಾರ್ಕೆಟ್ ಫ್ಲೈಓವರ್ ಬೋಲ್ಟ್ ಸರಿಪಡಿಸಿದ ಏಜೆನ್ಸಿ
ಬಿಬಿಎಂಪಿ ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್ಗೆ ಅಳವಡಿಸಿದ್ದ ಬೋಲ್ಟ್ ಸರಿಪಡಿಸಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳೆಲ್ಲಾ ಗುಂಡಿಮಯ(Pothole) ಆಗಿ ವಾಹನ ಸವಾರರು ಪ್ರಾಣ ಭಯದಲ್ಲೇ ಸಂಚಾರ ನಡೆಸುವಂತಹ ಸ್ಥಿತಿ ಇದೆ. ಅದು ಸಾಲ್ದು ಅಂತಾ ಈಗ ಪ್ಲೈಓವರ್ಗಳು ಹೊಸ ಅವಾಂತರ ಸೃಷ್ಟಿಸಿವೆ. ಕೆ.ಆರ್.ಮಾರ್ಕೆಟ್ ಫ್ಲೈಓವರ್ನಲ್ಲಿ(KR Market Flyover) ಬೋಲ್ಟ್ಗಳು ಹೊರಬಂದಿದ್ದು ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಈಗ ಈ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ(BBMP) ಎಇಇ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಫೈಓವರ್ ರಸ್ತೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಏಜೆನ್ಸಿಗೆ ಸೂಚಿಸಿದ್ದು ಏಜೆನ್ಸಿ ಸಿಬ್ಬಂದಿ ಫ್ಲೈಓವರ್ಗೆ ಅಳವಡಿಸಿದ್ದ ಬೋಲ್ಟ್ ಸರಿಪಡಿಸಿದ್ದಾರೆ.
ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲೆ ಸುಮಾರು ನಾಲ್ಕು ಇಂಚು ತನಕ ಬೋಲ್ಟ್ಗಳು ಮೇಲೆದ್ದಿದ್ದವು. ನಿರ್ವಹಣೆ ಸರಿ ಇಲ್ಲದ ಕಾರಣ ಬೋಲ್ಟ್ಗಳು ಮೇಲೆ ಬಂದಿದ್ದು 8 ವಾಹನಗಳ ಚಕ್ರಗಳು ಪಂಕ್ಚರ್ ಆಗಿವೆ. ವಿಷಯ ತಿಳಿದ ಸ್ಥಳೀಯ ಪೋಲಿಸರು ನಿನ್ನೆ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿದ್ದರು. ಬೃಹತ್ ವಾಹನದ ಸಂಚಾರದಿಂದ ಮೇಲ್ಸೇತುವೆ ಮೇಲೆ ಜಾಯಿಂಟ್ಗಳ ಮಧ್ಯೆ ಬಿರುಕು ಮೂಡಿ ಪ್ಯಾನಲ್ಗಳ ನಡುವಿನ ಬೋಲ್ಟ್ಗಳು ಲೂಸ್ ಆಗಿದ್ದವು.
ಇದನ್ನೂ ಓದಿ: ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ
ಟಿವಿ9ನಲ್ಲಿ ಸುದ್ದಿ ಪ್ರಸಾರವಾಗ್ತಿದ್ದಂತೆ ಬಿಬಿಎಂಪಿ AEE ಚಂದ್ರಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಚಂದ್ರಪ್ಪ ನಾವು ಪ್ರತಿ ತಿಂಗಳು ಈ ಬೋಲ್ಟ್ಗಳನ್ನ ಟೈಟ್ ಮಾಡ್ತೇವೆ. ಇದಕ್ಕೆಂದೇ ಮೇಂಟೇನೆನ್ಸ್ ಏಜೆನ್ಸಿ ಇದೆ ಅಂದ್ರು. ಸದ್ಯ AEE ಚಂದ್ರಪ್ಪ ಸೂಚನೆ ವೇರೆಗೆ ಏಜೆನ್ಸಿ ಸಿಬ್ಬಂದಿ ಫ್ಲೈಓವರ್ಗೆ ಅಳವಡಿಸಿದ್ದ ಬೋಲ್ಟ್ ಸರಿಪಡಿಸಿದ್ದಾರೆ.
Published On - 12:24 pm, Wed, 23 November 22