Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ‌ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ

ಅರ್ನ್ ಮನಿ ಆ್ಯಪ್ ಕಳುಹಿಸಿ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿ ಪ್ರತಿಷ್ಠಿತ ಮನೆತನದ ಮಹಿಳೆಯೊಬ್ಬರಿಗೆ ವಂಚಿಸಿದ ಘಟನೆ ಗದಗ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ

Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ‌ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ
ಗದಗ ನಗರ ಪೊಲೀಸ್​ ಠಾಣೆ
Follow us
TV9 Web
| Updated By: ಆಯೇಷಾ ಬಾನು

Updated on:Jan 11, 2023 | 8:35 AM

ಗದಗ (Gadag) ಜಿಲ್ಲೆಯಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ನಡೆದಿದೆ. ಹೌದು ಬ್ಲಿಂಕಿಟ್ ಎಂಬ ಅರ್ನ್ ಮನಿ ಆ್ಯಪ್ ಕಳುಹಿಸಿ ಅದನ್ನು ಪ್ಲೇ ಮಾಡುತ್ತಾ ಹೋದರೆ ಹಣ ದ್ವಿಗುಣವಾಗುತ್ತದೆ ಎಂದು ಪ್ರತಿಷ್ಠಿತ ಮನೆತನದ ಮಹಿಳೆಯೊಬ್ಬರಿಗೆ ನಂಬಿಸಿ 10 ಲಕ್ಷ ರೂಪಾಯಿಗೂ ಹೆಚ್ಚು ಹಣ ವಂಚಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗದಗ ತಾಲೂಕಿನ ಹುಲಕೋಟಿ ಗ್ರಾಮದ ವಿದ್ಯಾ ಎಂಬ ಪ್ರತಿಷ್ಠಿತ ಮನೆತನದ ಮಹಿಳೆಗೆ ಅಕ್ಟೋಬರ್ 3ರಂದು +63991427160 ಮತ್ತು +639498074279 ಈ ನಂಬರಿನಿಂದ ಅರ್ನ್ ಮನಿ ಆ್ಯಪ್ ಕಳುಹಿಸಿ ಪ್ಲೇ ಮಾಡುತ್ತಾ ಹೋದರೆ ಹಣ ದ್ವಿಗುಣವಾಗುತ್ತದೆ ಅಂತ ಹೇಳಿ ಮೊದಲಿಗೆ ಎರಡು ಸಾವಿರ ಹಣ ಹಾಕಿ ಆಸೆ ಹುಟ್ಟಿಸಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ದಾರುಣ ಘಟನೆ: ಬೀದಿ ನಾಯಿಗಳ ದಾಳಿಗೆ ಅಮಾಯಕ ಭಿಕ್ಷುಕಿ ಸಾವು

ನಂತರ ಅಕೌಂಟ್ ಫ್ರೀಜ್ ಆಗಿದೆ ಅದು ಓಪನ್ ಆಗಲು ಯುಪಿಐಡಿ ನಂಬರ್​ಗಳನ್ನು ಕಳುಹಿಸಿ ಹಂತ-ಹಂತವಾಗಿ ಒಟ್ಟು 10,57,950ರೂ.ಗಳನ್ನು ಹಾಕಿಸಿಕೊಂಡಿದ್ದಾರೆ. ಮತ್ತೆ ರಾಕೇಶ್ ಸಿಂಗ್- 9647251753 ಹಾಗೂ ವಿಪಿನ್ ಗುಪ್ತಾಗೆ 9733184532 ನಂಬರನಿಂದ ಕರೆ ಮಾಡಿ ನಟರಾಜ್ ಪೆನ್ಸಿಲ್ ಕಂಪನಿಯಿಂದ ಮನೆಯಿಂದಲೇ ಹಣ ಗಳಿಸಬಹುದು ಅಂತ ಹೇಳಿ 2,35,000ಗಳನ್ನು ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕೊಟಕ್ ಮಹೀಂದ್ರಾ ಬ್ಯಾಂಕ್​ನಲ್ಲಿ ಫೇಕ್ ಅಕೌಂಟ್ ತೆರೆದು ಬೇರೆದವರಿಗೆ ವಂಚನೆ ಮಾಡಿದ್ದಾರೆ. ಈ ಕುರಿತು ಗದಗ ಸಿಇಎನ್ ಠಾಣೆಯಲ್ಲಿ it act 2008 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಗಳು-ಅಳಿಯನನ್ನು ನೋಡಿಕೊಂಡು ಹೋಗಲು ಬಂದವ ಮನೆ ಮಾಲಕಿಯ ಐಶ್ವರ್ಯಕ್ಕೆ ಮರುಳಾದ; ಮುಂದೇನಾಯ್ತು ನೋಡಿ

ಗದಗ ಜಿಲ್ಲೆಯಲ್ಲಿ ಇತ್ತಿಚೀಗೆ ಈ ರೀತಿ ಮೋಸ ಹೋಗುವ ಪ್ರಕರಣ ಹೆಚ್ಚಾಗುತ್ತಿವೆ. ಜನರು ಆನ್ ಲೈನ್, ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಮೋಸದ ಜಾಲಕ್ಕೆ ಬಲೆ ಬಿಳಬಾರದು. ಜನರು ಎಚ್ಚರಿಕೆಯಿಂದ ಇರಬೇಕು ಅಂತ ಗದಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 10:53 pm, Tue, 10 January 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ