ಮಗಳು-ಅಳಿಯನನ್ನು ನೋಡಿಕೊಂಡು ಹೋಗಲು ಬಂದವ ಮನೆ ಮಾಲಕಿಯ ಐಶ್ವರ್ಯಕ್ಕೆ ಮರುಳಾದ; ಮುಂದೇನಾಯ್ತು ನೋಡಿ
ಮಗಳ ನೋಡೊ ನೆಪದಲ್ಲಿ ಬಂದ ಆತ ಅಳಿಯ-ಮಗಳ ಮರ್ಯಾದೆ ಬೀದಿಗೆ ತರೋದರ ಜೊತೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ತಂದೆ ಅನ್ನಿಸಿಕೊಂಡ ಕದೀಮ ಮಾಡಿದ ಕೆಲಸ ಎಲ್ಲರ ಉಬ್ಬೇರಿಸುಬಂತದ್ದು.
ಬೆಂಗಳೂರು: ಹುಟ್ಟು ಗುಣ ಸುಟ್ರೂ ಹೊಗಲ್ಲ ಅನ್ನೊ ಮಾತು ಈ ಮಂದಿಗೆ ಹೇಳಿ ಮಾಡಿಸಿದ ಸಾಲು. ಹೊಟ್ಟೆ ಬಟ್ಟೆಗಾಗಿ ಊರು ಬಿಟ್ಟ ಮಗಳು-ಅಳಿಯನ ಜೀವನ ಚೆನ್ನಾಗಿರಲಿ ಅನ್ನೊದು ಬಿಟ್ಟು, ಇಲ್ಲಿ ತಂದೆ ಅನ್ನಿಸಿಕೊಂಡ ಕದೀಮ ಮಾಡಿದ ಕೆಲಸ ಎಲ್ಲರ ಉಬ್ಬೇರಿಸುಬಂತದ್ದು. ಮಗಳ ನೋಡೊ ನೆಪದಲ್ಲಿ ಬಂದ ಆತ ಅಳಿಯ-ಮಗಳ ಮರ್ಯಾದೆ ಬೀದಿಗೆ ತರೋದರ ಜೊತೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅರೆ ಇಷ್ಟಕ್ಕೂ ಆ ತಂದೆ ಮಾಡಿದ್ದಾದರೂ ಏನು ಅಂತಿರಾ. ಈ ಸ್ಟೋರಿ ಓದಿ
ಅದು ಇದೇ ತಿಂಗಳು (ಜ.5)ನೇ ತಾರೀಕು ನಗರದ ಕುಮಾರಸ್ವಾಮಿ ಲೇಔಟ್ನ 2ನೇ ಹಂತದ ಮನೆಯೊಂದಕ್ಕೆ ಎಂಟ್ರಿ ಕೊಟ್ಟ ಗ್ಯಾಂಗ್ ಮನೆಯಲ್ಲಿದ್ದ ವೃದ್ಧೆಯ ಕೈಕಾಲು ಕಟ್ಟಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿತ್ತು. ಇನ್ನು ಈ ವಿಚಾರ ಇಡಿ ಏರಿಯಾದ ಜನರನ್ನೇ ಒಂದು ಕ್ಷಣ ದಂಗು ಬಡಿಸಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕುಮಾರಸ್ವಾಮಿ ಲೇಔಟ್ ಪೊಲೀಸರು ಒರಿಸ್ಸಾಕ್ಕೆ ತೆರಳಿ ಆರೋಪಿಗಳ ಬಂಧಿಸುವುದರ ಜೊತೆ ಕಳುವಾದ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಆಭರಣಕ್ಕಾಗಿ 7 ತಿಂಗಳ ಗರ್ಭಿಣಿ ಸೊಸೆಗೆ ಬೆಂಕಿ ಹಚ್ಚಿದ ಅತ್ತೆ-ಮಾವ
ಇವರೇ ನೋಡಿ ಕದೀಮರು. ಜ್ಞಾನಾರ್ಜುನ್ ನಾತ್, ಶ್ರೀಕಾಂತ್ ದಾಸ್, ಸುಬಾಷ್ ಬಿಸ್ವಾಲ್, ಬಿಶ್ನು ಮೊಹನ್ ಕಟುವ, ಬಿಶ್ನು ಚರಣ್ ಬೆಹ್ರಾ, ಸುದಾನ್ಶು ಬೆಹ್ರಾ. ಮೂಲತಃ ಒರಿಸ್ಸಾದವರಾದ ಇವರ ಗ್ಯಾಂಗ್ ಲೀಡರ್ ಬಿಶ್ನೋ ಚರಣ್ ಬೆಹರಾ. ಕಳ್ಳತನವನ್ನೇ ಕಾಯಕ ಮಾಡಿಕೊಂಡು ದೆಹಲಿ, ಮುಂಬೈನಲ್ಲಿ ಸದ್ದು ಮಾಡಿದ್ದ ಇವರು ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಕೈ ಹಾಕಿ ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ. ಅಸಲಿಗೆ ಬೆಂಗಳೂರಿನ ಗಾಳಿ ಗಂಧ ಗೊತ್ತಿಲ್ಲದ ಇವರಿಗೆ ಒಂಟಿ ವೃದ್ಧೆ ಮನೆ ಬಗ್ಗೆ ಗೊತ್ತಾಗಿದ್ದಾರೂ ಹೇಗೆ ಅನ್ನೊ ವಿಚಾರಕ್ಕೆ ಉತ್ತರ, ಆ ವೃದ್ಧೆ ಮನೆಯಲ್ಲಿ ಕೆಲಸಕ್ಕಿದ್ದ ಆ ದಂಪತಿಗಳು.
ಅಸಲಿಗೆ ನಿಜಕ್ಕೂ ಈ ಕಳ್ಳತನಕ್ಕೂ ಆ ದಂಪತಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಪ್ರಕರಣದ ಪ್ರಮುಖ ಆರೋಪಿ, ಮನೆ ಕೆಲಸಕ್ಕಿದ್ದ ಮಹಿಳೆಯ ತಂದೆ ಬಿಶ್ಣು ಚರಣ್ ಬೆಹ್ರಾ. ಹೌದು, ಹೀಗೆ ಕಳೆದ ಐದಾರೂ ತಿಂಗಳ ಹಿಂದೆ ಒರಿಸ್ಸಾ ಮೂಲದ ದಂಪತಿ ಕುಮಾರಸ್ವಾಮಿ ಲೇಔಟ್ ನಿವಾಸಿಯಾದ 57 ವರ್ಷದ ವೃದ್ಧೆ ಶ್ರೀಲಕ್ಷ್ಮಿ ಮನೆಗೆ ಕೆಲಸಕ್ಕೆ ಸೇರಿದ್ದರು. ಗಂಡ ಸೆಕ್ಯೂರಿಟಿ ಗಾರ್ಡ್ಯಾಗಿದ್ದರೇ, ಹೆಂಡತಿ ಶ್ರೀಲಕ್ಷ್ಮಿಯವರ ಮನೆಯಲ್ಲಿ ಮನೆಗೆಲಸ ಮಾಡುತಿದ್ದರು. ಇನ್ನು ಶ್ರೀಲಕ್ಷ್ಮಿಗೆ ಇಬ್ಬರು ಮಕ್ಕಳಿದ್ದು ಮಗಳು ವೈದ್ಯೆ, ಮಗ ಉದ್ಯಮಿಯಾಗಿದ್ದಾನೆ.
ಇದನ್ನೂ ಓದಿ: 37 ವರ್ಷ ಆದ್ರೂ ಮದ್ವೆ ಆಗಿಲ್ಲ, ನಿಂಗೆ ಯಾರೂ ಹುಡುಗಿ ಕೊಡಲ್ಲಾಂತ ಕಿಚಾಯಿಸಿದವನ ಕೊಲೆ
ಆದರೆ ಇತ್ತೀಚೆಗೆ ಒರಿಸ್ಸಾದಿಂದ ಮಗಳ ನೋಡಲು ಬಂದ ಬಿಶ್ಣೋ ಆಕೆ ಕೆಲಸ ಮಾಡುತಿದ್ದ ಮನೆಯ ಐಶ್ವರ್ಯ ಕಂಡಿದ್ದನು. ಬಳಿಕ ಆ ಮನೆ ಟಾರ್ಗೆಟ್ ಮಾಡಿದ್ದು, ಮಗಳು ಮತ್ತು ಅಳಿಯ ಸಲುವಾಗಿ ಸಂಚು ರೂಪಿಸಿಕೊಂಡು ಸುಮ್ಮನಿದ್ದ. ಹೀಗೆ ಸಮ್ಮನಿದ್ದವ ಒಂದಿವಸ ಸಂಚು ಕಾರ್ಯಗತಗೊಳಿಸಿದನು. ಮಗಳು ಮತ್ತು ಅಳಿಯ ರಾಮಮೂರ್ತಿ ನಗರದ ಮತ್ತೊಂದು ಮನೆಗೆ ಕೆಲಸಕ್ಕೆ ಸೇರುತಿದ್ದಂತೆ ಪಾಟಾಲಂ ಕರೆದುಕೊಂಡು ಕೊರಿಯರ್ ನೆಪದಲ್ಲಿ ವೃದ್ಧೆಯ ಮನೆ ಬಾಗಿಲು ತಟ್ಟಿದ.
ವೃದ್ಧೆ ಬಾಗಿಲು ತೆರೆಯುತಿದ್ದಂತೆ ಗ್ಯಾಂಗ್ ಒಳಗೆ ಎಂಟ್ರಿಕೊಟ್ಟಿದ್ದರು. ನಂತರ ವೃದ್ಧೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ ನಗದು ದೊಚಿ ಪರಾರಿಯಾಗಿದರು. ಇನ್ನು ಆರೋಪಿಗಳು ಬಳಸಿದ ಭಾಷೆ ಹಾಗೂ ಟೆಕ್ನಿಕಲ್ ಮಾಹಿತಿ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಒರಿಸ್ಸಾದಲ್ಲಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ.
ಅಸಲಿಗೆ ಈ ಕಳ್ಳತನದ ಕೃತ್ಯ ಕೆಲಸಕ್ಕಿದ್ದ ದಂಪತಿಗಳಿಗೆ ಗೊತ್ತಾಗದ ರೀತಿ ನಡೆದಿದ್ದು, ಅಪ್ಪನ ಕಳ್ಳತನ ಕೃತ್ಯಕ್ಕೆ ಮಗಳು ಮತ್ತು ಅಳಿಯನ ಮಾನ ಬೀದಿಗೆ ಬಂದಿದೆ. ಇನ್ನು ಬಂಧಿತ ಆರೋಪಿಗಳು ಈ ಹಿಂದೆ ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದು ಗೊತ್ತಾಗಿದೆ. ಅದೇನೆ ಇದ್ದರು, ಪಾಪಿಗೆ ಸಮುದ್ರಕ್ಕೆ ಹೊದರು ಮೊಣಕಾಲುದ್ದ ನೀರು ಅನ್ನೊ ಹಾಗೆ ದೆಹಲಿ, ಮುಂಬೈ ಬಿಟ್ಟು ಬೆಂಗಳೂರಿಗೆ ಎಂಟ್ರಿ ಕೊಟ್ಟ ಕದೀಮರು ಕೃತ್ಯ ಎಸಗಿದ 48 ಗಂಟೆಯಲ್ಲೇ ಲಾಕ್ ಆಗಿದ್ದಾರೆ.
ವರದಿ-ಜಗದೀಶ ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ