Health: ನಿಮ್ಮ ‘ಓಟ’ ಸರಿಯಾದ ದಿಕ್ಕಿನಲ್ಲಿ ಸಾಗಿದೆಯೇ? ಪರೀಕ್ಷಿಸಿಕೊಳ್ಳಿ

| Updated By: ಶ್ರೀದೇವಿ ಕಳಸದ

Updated on: Jun 07, 2022 | 3:19 PM

Running : ವಾರ್ಮಪ್​ ಅಪ್​ ಇಲ್ಲದೆ ಓಟಕ್ಕೆ ತೊಡಗಿಕೊಂಡರೆ ದೀರ್ಘಾವಧಿಯಲ್ಲಿ ಓಡಲಾಗದು ಮತ್ತು ಇದು ಆರೋಗ್ಯಕ್ಕೂ ಮಾರಕ. ರಕ್ತದ ಒತ್ತಡ ಮತ್ತು ಹೃದಯಬಡಿತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀರು ಬಹುಮುಖ್ಯ ಅಂಶ.

Health: ನಿಮ್ಮ ‘ಓಟ’ ಸರಿಯಾದ ದಿಕ್ಕಿನಲ್ಲಿ ಸಾಗಿದೆಯೇ? ಪರೀಕ್ಷಿಸಿಕೊಳ್ಳಿ
ಸೌಜನ್ಯ : ಅಂತರ್ಜಾಲ
Follow us on

Running: ಕೊವಿಡ್​ ಸಂದರ್ಭದಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಓಡತೊಡಗಿದರು. ಅಂದರೆ ಓಡುವುದರಿಂದ ನಮ್ಮ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ಕಾರಣದಿಂದ. ಕಟ್ಟುನಿಟ್ಟಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆನ್ನುವ ಭರದಲ್ಲಿ ಸಾಕಷ್ಟು ಜನರು ಅಪ್ಲಿಕೇಷನ್​ ಗಳನ್ನು ಡೌನ್​ಲೋಡ್ ಮಾಡಿಕೊಳ್ಳುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತ ಹೋಯಿತು. ಓಟ ಎನ್ನುವುದು ನಮ್ಮ ಮನೋದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಶಾಂತಿ ಸಮಾಧಾನವನ್ನು ನೀಡುತ್ತದೆ. ಅದಕ್ಕಿಂತ ಹೆಚ್ಚಾಗಿ ಚಲನೆ ಅಥವಾ ಓಟ ಎನ್ನುವುದು ಮನುಷ್ಯ ಸಂಪರ್ಕಕ್ಕೆ ತೆರೆದುಕೊಳ್ಳಲು ಸಹಾಯ ಮಾಡುವುದರ ಮೂಲಕ ನಮ್ಮನ್ನು ನಾವು  ಪ್ರಜ್ಞಾವಸ್ಥೆಯಲ್ಲಿ ಇರಲು ಅನುಕೂಲ ಮಾಡಿಕೊಡುತ್ತದೆ ಎಂಬ ಅರಿವೂ ಈಗ ಎಲ್ಲರಲ್ಲಿಯೂ ಹುಟ್ಟುತ್ತಿದೆ. ಅದಕ್ಕಾಗಿ ಮಾರುಕಟ್ಟೆಯೂ ತಕ್ಕಂತೆ ಪೂರಕ ಸಾಮಗ್ರಿಗಳನ್ನು ಒದಗಿಸುವಲ್ಲಿ ನಿರತವಾಗಿದೆ. ರನ್ನಿಂಗ್ ಕೋಚ್​ಗಳೂ ಈಗ ಮಾರ್ಗದರ್ಶನದಲ್ಲಿ ನಿರತರಾಗಿದ್ದಾರೆ.

ಓಟವೆಂದರೆ ಇದ್ದ ಉಡುಪಿನಲ್ಲಿಯೇ ಓಡಲಾದೀತೆ? ಅದಕ್ಕೂ ಒಂದು ಶಿಸ್ತು ಬೇಕೇಬೇಕಲ್ಲವೆ? ಅದಕ್ಕೂ ಒಂದು ವೈಜ್ಞಾನಿಕ ಸೂತ್ರಗಳಿವೆಯಲ್ಲವೆ? ಇದೆಲ್ಲವನ್ನೂ ಅರಿತ ಫಿಟ್​ನೆಸ್ ಮಾರುಕಟ್ಟೆಯು ಫಿಟ್​ನೆಸ್ ಗಡಿಯಾರಗಳು, ಬೂಟು, ಉಡುಪು, ಆ್ಯಪ್​ಗಳು ಈ ಓಟಗಾರರ ಸಮುದಾಯವನ್ನು ತನ್ನತ್ತ ಹೆಚ್ಚು ಸೆಳೆದುಕೊಂಡಿದೆ. ಫಿಟ್​ನೆಸ್ ಗಡಿಯಾರದಲ್ಲಿ ನಮ್ಮ ಹೃದಯದ ಬಡಿತ, ವೇಗ, ನಿದ್ರೆ, ಉಸಿರಿನ ಏರಿಳಿತ ಎಲ್ಲವೂ ದಾಖಲಾಗುತ್ತದೆ. ಹಾಗಾಗಿ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಆರೋಗ್ಯ ಸಂಬಂಧಿ ಅಂಕಿ ಅಂಶಗಳನ್ನು ದಾಖಲಿಸುವಲ್ಲಿ ಇದು ಉತ್ತಮ ಸಾಧನವೆಂದೇ ಹೇಳಬಹುದಾಗಿದ್ದು ಇಂದು ಸಾಕಷ್ಟು ಜನರ ಮಣಿಕಟ್ಟು ನೋಡಿದಾಗಲೂ ಇದು ನಿಮ್ಮ ಅರಿವಿಗೆ ಬರುತ್ತದೆ.

ಓಡುವ ಮುನ್ನ

ಇದನ್ನೂ ಓದಿ
Norovirus: ಕೇರಳದ ಇಬ್ಬರು ಶಾಲಾ ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ
ದೇಶದಲ್ಲಿ ಕೊವಿಡ್ ಪ್ರಕರಣಗಳ ಏರಿಕೆ; ಕಳವಳ ವ್ಯಕ್ತಪಡಿಸಿ 5 ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ
ಮಹಾರಾಷ್ಟ್ರದಲ್ಲಿ ಕೊವಿಡ್ ನಿರ್ಬಂಧ, ಮಾಸ್ಕ್ ಕಡ್ಡಾಯ ಮತ್ತೆ ಜಾರಿ ಸಾಧ್ಯತೆ; ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ
Norovirus ಕೇರಳದ ವಯನಾಡಿನಲ್ಲಿ ನೊರೊವೈರಸ್ ಪತ್ತೆ: ಏನಿದರ ರೋಗಲಕ್ಷಣ, ತಡೆಗಟ್ಟುವ ಕ್ರಮಗಳೇನು?

ಇದ್ದಕ್ಕಿದ್ದಂತೆ ವೇಗದಲ್ಲಿ ಓಡುವುದು ಮತ್ತು ಮೈಲಿಗಟ್ಟಲೆ ಓಡುವುದು ಸಲ್ಲದು. ಆರಂಭದಲ್ಲಿ ಮಾರ್ಗದರ್ಶಕರ ಸಹಾಯದೊಂದಿಗೆ ಕೆಲವು ಲಘುವ್ಯಾಯಾಮಕ್ಕೆ ನಮ್ಮ ದೇಹವನ್ನು ಒಳಪಡಿಸಬೇಕು. ನಮ್ಮ ದೇಹ ಪ್ರತಿಯೊಂದು ಅಂಗಕ್ಕೂ ಸಮರ್ಪಕವಾಗಿ ರಕ್ತಸಂಚಲನೆಯಾಗುವ ವ್ಯಾಯಾಮವನ್ನು ಮಾಡಬೇಕು. ವಾರ್ಮಪ್​ ಅಪ್​ ಇಲ್ಲದೆ ಓಟಕ್ಕೆ ತೊಡಗಿಕೊಂಡರೆ ದೀರ್ಘಾವಧಿಯಲ್ಲಿ ಓಡಲಾಗದು ಮತ್ತು ಇದು ಆರೋಗ್ಯಕ್ಕೂ ಮಾರಕ. ವಾರ್ಮ್​ ಅಪ್​ ನಂತರ ಐದರಿಂದ ಹತ್ತು ನಿಮಿಷಗಳ ಕಾಲ ನಿಧಾನಗತಿಯಲ್ಲಿ ಜಾಗಿಂಗ್ ಮಾಡಬೇಕು. ನಂತರ ನಿಮ್ಮ ಓಟದ ವೇಗವನ್ನು ಹಂತಹಂತವಾಗಿ ಹೆಚ್ಚಿಸಿಕೊಳ್ಳುತ್ತ ಹೋಗಬೇಕು.

ಇದನ್ನೂ ಓದಿ : Health : ಅಸ್ತಮಾ, ಉಸಿರಾಟ, ದಂತಸಮಸ್ಯೆಗಳಿಗೆ ಸಿದ್ಧೌಷಧಿ ಈ ಲವಂಗದೆಣ್ಣೆ

ಇನ್ನು ಮಾರುಕಟ್ಟೆಯಲ್ಲಿ ತರಹೇವಾರಿ ಬೂಟುಗಳಿವೆ. ನಿಮ್ಮ ಪಾದಕ್ಕೆ ಅನುಕೂಲವಾಗುವಂತೆ ಯಾವ ಬೂಟುಗಳನ್ನು ಧರಿಸುವುದು ಸೂಕ್ತ ಎಂಬುದನ್ನೂ ತಜ್ಞರ ಬಳಿ ಕೇಳಬಹುದು. ಕೆಲವೊಮ್ಮೆ ಬೂಟುಗಳಿಲ್ಲದೆಯೂ ಮೃದುವಾದ ಹುಲ್ಲಿನ ಮೇಲೆ ಮತ್ತು ಬರೀನೆಲದಲ್ಲಿಯೂ ಓಡಲು ಪ್ರಯತ್ನಿಸಬಹುದಾಗಿದೆ. ತೊಡುವ ಉಡುಗೆಗಳೂ ಅಷ್ಟೇ ಆದಷ್ಟು ಸಡಿಲವಾಗಿರಲಿ. ನಿಮ್ಮ ಬೆವರನ್ನು ಹೀರುವಂಥ ಗುಣ ಅವುಗಳಿಗಿರಲಿ.

ಇನ್ನು ಆಹಾರ ಕ್ರಮಕ್ಕೆ ಸಂಬಂಧಿಸಿ ಬಹಳಷ್ಟು ಜನ, ನಾನು ಹೇಗಿದ್ದರೂ ಓಡುತ್ತೇನೆ ಏನು ಬೇಕಾದರೂ ತಿನ್ನಬಹುದು ಎಂಬ ತಪ್ಪು ತಿಳಿವಳಿಕೆಯಲ್ಲಿರುತ್ತಾರೆ. ಆದರೆ, ಸಮತೋಲನ ಆಹಾರ ಬಹಳ ಮುಖ್ಯ. ನಿಮ್ಮ ದೇಹಕ್ಕೆ ತಕ್ಕಂತೆ ಯಾವ ಪದಾರ್ಥಗಳು ಒಗ್ಗುತ್ತವೆ ಎಂಬುದನ್ನು ತಜ್ಞರ ಸಹಾಯದಿಂದ ಖಚಿತಪಡಿಸಿಕೊಂಡು ಆ ಪ್ರಕಾರ ಆಹಾರ ಕ್ರಮ ರೂಢಿಸಿಕೊಳ್ಳಿ.

ಇದನ್ನೂ ಓದಿ : Global Running Day 2022 : ನಿಮ್ಮ ಕಾಲುಗಳೇ ದೇಹದ ಇನ್ನೊಂದು ಹೃದಯ

ಇನ್ನು ಓಡುವಾಗ ಸಣ್ಣ ವಿರಾಮ, ನಿಧಾನ ನಡಿಗೆ, ನಿಧಾನ ಓಟ, ಅಗತ್ಯ ವಿಶ್ರಾಂತಿ ಅತ್ಯವಶ್ಯ. ಓಟ ನಿಮ್ಮನ್ನು ದಣಿವಿಗೆ ತಳ್ಳಬಾರದು. ನಿಮ್ಮಲ್ಲಿ ಉತ್ಸಾಹವನ್ನು ತುಂಬಬೇಕು. ಅದಕ್ಕಾಗಿ ಓಟದ 20 ನಿಮಿಷಗಳ ಮೊದಲು ಒಂದು ಲೋಟ ನಿಂಬೆ ಬೆರೆಸಿದ ನೀರನ್ನು ಕುಡಿಯಿರಿ. ಓಟದ ನಡುನಡುವೆ ನೀರು ಅಥವಾ ಎಲೆಕ್ಟ್ರೋಲೈಟ್​ ಪಾನೀಯವನ್ನು ಕುಡಿಯಿರಿ. ಎಂದೂ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸಬೇಡಿ. ರಕ್ತದ ಒತ್ತಡ ಮತ್ತು ಹೃದಯಬಡಿತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನೀರು ಬಹುಮುಖ್ಯ ಅಂಶ. ಆದ್ದರಿಂದ ಪ್ರತೀ ಐದರಿಂದ ಏಳು ನಿಮಿಷಗಳಿಗೊಮ್ಮೆ ವಾಕಿಂಗ್, ಜಾಗಿಂಗ್, ರನ್ನಿಂಗ್​ ಸಮಯದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ.