AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health : ಅಸ್ತಮಾ, ಉಸಿರಾಟ, ದಂತಸಮಸ್ಯೆಗಳಿಗೆ ಸಿದ್ಧೌಷಧಿ ಈ ಲವಂಗದೆಣ್ಣೆ

Clove Essential Oil : ನ್ಯುಮೋನಿಯಾ ಮತ್ತು ಇನ್ಫ್ಲುಯೆನ್ಸಾದಂಥ ಉಸಿರಾಟದ ಸೋಂಕುಗಳನ್ನು ಉಂಟುಮಾಡುವ ವಿವಿಧ ಬ್ಯಾಕ್ಟೀರಿಯಾಗಳ ನಿವಾರಣೆಗೂ ಇದು ಉತ್ತಮ ಔಷಧಿ.

Health : ಅಸ್ತಮಾ, ಉಸಿರಾಟ, ದಂತಸಮಸ್ಯೆಗಳಿಗೆ ಸಿದ್ಧೌಷಧಿ ಈ ಲವಂಗದೆಣ್ಣೆ
ಸೌಜನ್ಯ : ಅಂತರ್ಜಾಲ
TV9 Web
| Updated By: ಶ್ರೀದೇವಿ ಕಳಸದ|

Updated on:Jun 07, 2022 | 2:33 PM

Share

Clove Essential Oil :  ಸಿಝಿಯಮ್ ಅರೋಮ್ಯಾಟಿಕಮ್ ಎಂದು ಕರೆಯಲ್ಪಡುವ ಲವಂಗ ಮರದ ಮೂಲ ಆಗ್ನೇಯ ಏಷ್ಯಾ. ಆದರೆ ಈವತ್ತು ಎಲ್ಲೆಡೆಯೂ ಇದನ್ನು ಬೆಳೆಯಬಹುದಾಗಿದೆ. ಹಾಗಾಗಿ ಇದರ ಲಭ್ಯತೆ ಈಗ ಸುಲಭ. ಈ ಎಣ್ಣೆಯನ್ನು ಲವಂಗದ ಗಿಡಗಳಿಂದ ತೆಗೆದ ಸಾರದಿಂದ ತಯಾರಿಸಲಾಗುತ್ತದೆ. ಅದಕ್ಕಾಗಿ ಲವಂಗದ ಮರದಿಂದ ಸಂಗ್ರಹಿಸಿದ ಒಣಹೂವಿನ ಮೊಗ್ಗುಗಳು, ಗಿಡದ ಕಾಂಡ ಮತ್ತು ಎಲೆಗಳನ್ನೂ ಎಣ್ಣೆ ತಯಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ಎಣ್ಣೆಯು ಬಣ್ಣರಹಿತವಾಗಿಯೂ ಲಭ್ಯ ಮತ್ತು ತಿಳಿಹಳದಿಗಳಲ್ಲಿಯೂ ಲಭ್ಯ. ಶತಮಾನಗಳಿಂದ ಲವಂಗವನ್ನು ಆಹಾರ ಮತ್ತು ಔಷಧಿ ರೂಪದಲ್ಲಿ ಬಳಸಿಕೊಂಡು ಬರುತ್ತಿದ್ದುದರಿಂದ ಇದು ಅತೀಮುಖ್ಯ ರೋಗನಿರೋಧಕವೂ ಹೌದು. ಪ್ರಾಚೀನ ವೈದ್ಯಕೀಯ ಮಾದರಿಗಳಲ್ಲಿಯೂ ಇದು ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಈಗಿಲ್ಲಿ ಲವಂಗದೆಣ್ಣೆಯ ಪ್ರಯೋಜನಗಳೇನು, ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.

ಲವಂಗ ತೈಲದ ಪ್ರಯೋಜಗಳು 

ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಪಡಿಸುವ ಗುಣ ಈ ತೈಲಕ್ಕಿದೆ. ಹಲ್ಲುನೋವು, ಸ್ನಾಯುಸೆಳೆತಕ್ಕೂ ಇದು ಒಳ್ಳೆಯ ಔಷಧಿ. ಜೀರ್ಣಕಾರಕವಾಗಿಯೂ ಇದು ಕೆಲಸ ಮಾಡುತ್ತದೆ. ಅಸ್ತಮಾ ಮತ್ತು ಉಸಿರಾಟದ ತೊಂದರೆ ನಿವಾರಿಸಲು ಸಹಾಯ ಮಾಡುತ್ತದೆ. ಲವಂಗದಲ್ಲಿರುವ ರಾಸಾಯನಿಕ ಅಂಶಗಳು ಮತ್ತು ಆರೋಗ್ಯ ಸಂಬಂಧಿ ಅದು ಹೇಗೆ ಪ್ರಯೋಜನಕಾರಿಯಾಗಬಲ್ಲದು ಎಂಬುದರ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

ಇದನ್ನೂ ಓದಿ
Image
World Food Safety Day : ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ
Image
Norovirus: ನೊರೊವೈರಸ್ ರೋಗದ ಲಕ್ಷಣಗಳೇನು? ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ಹೇಗೆ?
Image
ಮೈಸೂರು: ಕೇರಳದಲ್ಲಿ ನೊರೊ ವೈರಸ್ ಪತ್ತೆ, ಕರ್ನಾಟಕದಲ್ಲಿ ಕಟ್ಟೆಚ್ಚರ; ಬಾವಲಿ ಗ್ರಾಮದಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ
Image
ದೇಶಕ್ಕೀಗ ಒಮಿಕ್ರಾನ್​ ಆತಂಕ; ಕೊರೊನಾದ ಈ ಹೊಸ ತಳಿ ಹೆಚ್ಚಿನ ಆತಂಕ ಸೃಷ್ಟಿಸಲು ಕಾರಣವೇನು? ಇಲ್ಲಿದೆ ಮಾಹಿತಿ

ಇದನ್ನೂ ಓದಿ : Food: ಖಾಲಿ ಹೊಟ್ಟೆಯಲ್ಲಿದ್ದಾಗ ಈ ಆಹಾರಗಳನ್ನು ಸೇವಿಸಲೇಬೇಡಿ

2012 ರ ಸಂಶೋಧನೆಯ ಪ್ರಕಾರ, ಈ ಎಣ್ಣೆಗೆ ಸ್ಟ್ಯಾಫ್ ಬ್ಯಾಕ್ಟೀರಿಯಾದ ಕೋಶವನ್ನು ನಾಶಪಡಿಸುವ ಸಾಮರ್ಥ್ಯವಿದೆ. 2017ರ ಅಧ್ಯಯನದ ಪ್ರಕಾರ, ಸಾಕಷ್ಟು ಆರೋಗ್ಯತೈಲಗಳು ಸಂಪೂರ್ಣವಾಗಿ ರೋಗನಿರೋಧಕ ಶಕ್ತಿಯನ್ನು ಹೊಂದಿರಲಾರವು. ಆದರೆ ಲವಂಗದೆಣ್ಣೆ ಸಂಪೂರ್ಣ ಸೋಂಕನ್ನು ನಾಶಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಫಲಕಾರಿ. 2018ರ ಸಂಶೋಧನೆಯ, ನ್ಯುಮೋನಿಯಾ ಮತ್ತು ಇನ್ಫ್ಲುಯೆನ್ಸಾದಂಥ ಉಸಿರಾಟದ ಸೋಂಕುಗಳನ್ನು ಉಂಟುಮಾಡುವ ವಿವಿಧ ಬ್ಯಾಕ್ಟೀರಿಯಾಗಳ ನಿವಾರಣೆಗೂ ಇದು ಸಿದ್ದೌಷಧಿ ಎಂಬುದನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ : Clove water: ಲವಂಗ ನೀರನ್ನು ಪ್ರತಿದಿನ ಕುಡಿಯುವುದರಿಂದ ದೇಹಕ್ಕಾಗುವ ಪ್ರಯೋಜನಗಳೇನು ಗೊತ್ತಾ..! ಇಲ್ಲಿದೆ ಮಾಹಿತಿ

2012ರಲ್ಲಿ ನಡೆದ ಸಂಶೋಧನೆ, ದಂತಸಂಬಂಧಿ ಸಮಸ್ಯೆಗೂ ಇದು ಉತ್ತಮ ಔಷಧಿ. ಸೇಬಿನಂಥ ಆಮ್ಲೀಯ ಪಾನಿಯ ಅಥವಾ ಆಹಾರಗಳಿಂದ ಹಲ್ಲಿನ ಸವೆತ ಉಂಟಾಗಿ ದಂತಕುಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆಗ ಲವಂಗದೆಣ್ಣೆ ಲೇಪಿಸುತ್ತ ಬಂದರೆ ದಂತಕುಳಿಗಳಾಗುವುದನ್ನು ತಪ್ಪಿಸಬಹುದು ಎನ್ನುತ್ತದೆ.

2016ರ ಅಧ್ಯಯನದ ಪ್ರಕಾರ, ದಂತಕುಳಿ ತಡೆಗಟ್ಟುವಿಕೆಗೆ ಹತ್ತು ಪ್ರಾಕೃತಿಕ ಸಸ್ಯ ಉತ್ಪನ್ನಗಳನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಲವಂಗದೆಣ್ಣೆಯೇ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕುವಲ್ಲಿ ಪರಿಣಾಮಕಾರಿಯಾಗಿ ಕಂಡುಬಂದಿತು. ಇಷ್ಟೇ ಅಲ್ಲ 2008ರ ಅಧ್ಯಯನದಲ್ಲಿ ಲವಂಗ್ ಜೆಲ್​ ಕೂಡ ಯಶಸ್ವಿ ನೋವುನಿವಾರಕವೆಂದು ಸಾಬೀತಾಗಿದೆ.

Published On - 2:32 pm, Tue, 7 June 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!