Health Tips: ಚಹಾದ ಜೊತೆಗೆ ರಸ್ಕ್ ತಿನ್ನುತ್ತೀರಾ? ಈ ಸಮಸ್ಯೆ ತಪ್ಪಿದ್ದಲ್ಲ

ಚಹಾದೊಂದಿಗೆ ರಸ್ಕ್ ಗಳನ್ನು ಆನಂದಿಸುವುದು ನಮ್ಮಲ್ಲಿಯ ಸಾಮಾನ್ಯ ಅಭ್ಯಾಸ. ಅನೇಕರು ದಿನನಿತ್ಯ ಬೆಳಿಗ್ಗೆ ಚಹಾದೊಂದಿಗೆ ರಸ್ಕ್, ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದೇ ತಿಂಡಿ ಸಂಜೆಯೂ ಅನುಕರಣೆಯಾಗುತ್ತದೆ. ಹಲವರು ಇದನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸುತ್ತಾರೆ. ಆದರೆ ರಸ್ಕ್ ಗಳು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ದಿನನಿತ್ಯ ತಿಂದರೆ ಏನಾಗುತ್ತದೆ? ತಜ್ಞರು ಹೇಳುವ ಪ್ರಕಾರ, ರಸ್ಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ರೀತಿಯ ಅಂಶಗಳನ್ನು ಹೊಂದಿವೆ. ಸರಳವಾಗಿ ಹೇಳುವುದಾದರೆ ಇದು ಒಂದು ರೀತಿಯಲ್ಲಿ, ನಿಧಾನವಾಗಿ ದೇಹಕ್ಕೆ ಸೇರಿಕೊಳ್ಳುವ ವಿಷದಂತೆ ಜೊತೆಗೆ ಇದು ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು.

Health Tips: ಚಹಾದ ಜೊತೆಗೆ ರಸ್ಕ್ ತಿನ್ನುತ್ತೀರಾ? ಈ ಸಮಸ್ಯೆ ತಪ್ಪಿದ್ದಲ್ಲ
Rusk With Tea
Updated By: ಅಕ್ಷತಾ ವರ್ಕಾಡಿ

Updated on: Oct 26, 2024 | 6:43 PM

ಬಿಸಿ ಬಿಸಿ ಚಹಾದೊಂದಿಗೆ ರಸ್ಕ್ ಗಳನ್ನು ಆನಂದಿಸುವುದು ನಮ್ಮಲ್ಲಿಯ ಸಾಮಾನ್ಯ ಅಭ್ಯಾಸ. ಅನೇಕರು ದಿನನಿತ್ಯ ಬೆಳಿಗ್ಗೆ ಚಹಾದೊಂದಿಗೆ ರಸ್ಕ್, ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದೇ ತಿಂಡಿ ಸಂಜೆಯೂ ಅನುಕರಣೆಯಾಗುತ್ತದೆ. ಹಲವರು ಇದನ್ನು ಆರೋಗ್ಯಕರ ತಿಂಡಿ ಎಂದು ಪರಿಗಣಿಸುತ್ತಾರೆ. ಆದರೆ ರಸ್ಕ್ ಗಳು ನಮ್ಮ ಆರೋಗ್ಯಕ್ಕೆ ನಿಜವಾಗಿಯೂ ಪ್ರಯೋಜನಕಾರಿಯೇ? ದಿನನಿತ್ಯ ತಿಂದರೆ ಏನಾಗುತ್ತದೆ? ತಜ್ಞರು ಹೇಳುವ ಪ್ರಕಾರ, ರಸ್ಕ್ ಗಳು ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ರೀತಿಯ ಅಂಶಗಳನ್ನು ಹೊಂದಿವೆ. ಸರಳವಾಗಿ ಹೇಳುವುದಾದರೆ ಇದು ಒಂದು ರೀತಿಯಲ್ಲಿ, ನಿಧಾನವಾಗಿ ದೇಹಕ್ಕೆ ಸೇರಿಕೊಳ್ಳುವ ವಿಷದಂತೆ ಜೊತೆಗೆ ಇದು ನಿಮ್ಮ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು.

ಆಹಾರ ತಜ್ಞೆ ರಿಚಾ ಗಂಗನಿ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಹೇಳುವ ಪ್ರಕಾರ ರಸ್ಕ್ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು. ಇದು ಒಂದು ರೀತಿಯ ಹಿಟ್ಟು, ಸಕ್ಕರೆ ಮತ್ತು ಅಗ್ಗದ ಎಣ್ಣೆಗಳ ಮಿಶ್ರಣವಾಗಿದೆ (ತಾಳೆ ಎಣ್ಣೆಯಂತಹವು). ಇದು ಸಾಕಷ್ಟು ಟ್ರಾನ್ಸ್ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಹಾಗಾಗಿ ಇದು ಹೃದಯದ ಆರೋಗ್ಯ ಮತ್ತು ದೇಹದ ತೂಕಕ್ಕೆ ಅಪಾಯಕಾರಿ. ಇದಲ್ಲದೆ ಗ್ಲುಟೆನ್, ಇನ್ನಿತರ ವಿವಿಧ ಆಹಾರ ಪದಾರ್ಥಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಂಗಡಿಗಳಲ್ಲಿ ಲಭ್ಯವಿರುವ ರಸ್ಕ್ ಗಳು ಹೆಚ್ಚಾಗಿ ಹಳೆಯ ಬ್ರೆಡ್ ನಿಂದ ತಯಾರಿಸಲಾಗುತ್ತದೆ. ಇದು ಕೂಡ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರಸ್ಕ್ ತಯಾರಿಕೆಯಲ್ಲಿ ಬಳಸುವ ಎಣ್ಣೆಗಳು ತುಂಬಾ ಅಗ್ಗವಾಗಿರುವುದಲ್ಲದೆ ಕಡಿಮೆ ಗುಣಮಟ್ಟದ್ದಾಗಿದೆ. ಹಾಗಾಗಿ ಇವು ಹೃದ್ರೋಗಗಳಿಗೆ ಕಾರಣವಾಗಬಹುದು.

ರಸ್ಕ್  ಏಕೆ ಅನಾರೋಗ್ಯಕರ?

ಇದರಲ್ಲಿ ಟ್ರಾನ್ಸ್ ಕೊಬ್ಬುಗಳಿವೆ. ಇವು ದೇಹದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಟ್ರಾನ್ಸ್ ಕೊಬ್ಬಿನ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗಗಳ ಅಪಾಯವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಇದಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಮತ್ತು ಮೈದಾ ಹಿಟ್ಟನ್ನು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಒಂದೇ ಸಲ ಏರಿಕೆಯಾಗುತ್ತದೆ. ಅದಲ್ಲದೆ ಇವುಗಳನ್ನು ಮತ್ತೆ ಮತ್ತೆ ಬೇಯಿಸುವುದರಿಂದ ಅವುಗಳ ಪೌಷ್ಠಿಕಾಂಶದ ಮೌಲ್ಯವೂ ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಬೇಡಿ; ಪ್ರಯೋಜನಕ್ಕಿಂತ ಸಮಸ್ಯೆಗಳೇ ಹೆಚ್ಚು

ಆರೋಗ್ಯಕರ ಆಯ್ಕೆಗಳು ಯಾವುವು?

ಚಹಾದೊಂದಿಗೆ ರಸ್ಕ್ ಸೇವನೆ ಮಾಡುವ ಬದಲು ನೀವು ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಚಹಾದೊಂದಿಗೆ ಹುರಿದ ಮಖಾನಾ, ಹುರಿದ ದಾಲ್ ಅಥವಾ ಶೇಂಗಾ ಬೀಜಗಳನ್ನು ತಿನ್ನಬಹುದು. ಇವು ಪೌಷ್ಟಿಕ ಆಹಾರ ಮಾತ್ರವಲ್ಲ, ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತವೆ. ಈ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಅವು ನಿಮಗೆ ಶಕ್ತಿಯನ್ನು ಒದಗಿಸುತ್ತವೆ. ಇದನ್ನು ನೀವು ರಸ್ಕ್ ಗಳಿಂದ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಷ್ಟು ರಸ್ಕ್ ನಂತಹ ಆಹಾರಗಳಿಂದ ದೂರವಿರಿ ಉತ್ತಮ ಆಹಾರಗಳನ್ನು ತಜ್ಞರ ಸಲಹೆ ಪಡೆದು ಸೇವನೆ ಮಾಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ