ತೂಕ ಇಳಿಸಿಕೊಳ್ಳಲು ನೀವು ಈಗಷ್ಟೇ ಪ್ರಾರಂಭಿಸಿದ್ದರೇ ಅಥವಾ ನಿಮ್ಮ ತೂಕವನ್ನು ಒಂದೇ ರೀತಿ ಕಾಪಾಡಿಕೊಳ್ಳಲು ಬಯುಸುತ್ತಿರುವವರಿಗೆ ಸಹಾಯ ಮಾಡಲು ಕೆಲವು ಸುಲಭ ಮಾರ್ಗಗಳಿದ್ದು, ಮನೆಯಲ್ಲಿಯೇ ಇರುವ ಬೀಜಗಳನ್ನು ಬಳಸಿಕೊಳ್ಳುವ ಮೂಲಕ ಸುಲಭವಾಗಿ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇವು ಪ್ರೋಟೀನ್ನಿಂದ ತುಂಬಿರುವ ಅಗತ್ಯ ಪೋಷಕಾಂಶಗಳ ನಿಧಿಯಾಗಿದ್ದು ಕಡಿಮೆ ಪ್ರಮಾಣದ ಕ್ಯಾಲೋರಿಗಳೊಂದಿಗೆ ಹೆಚ್ಚಿನ ಪ್ರಮಾಣದ ಪೋಷಕಾಂಶಗಳನ್ನು ನೀಡುತ್ತವೆ. ಜೊತೆಗೆ ಬೀಜಗಳಲ್ಲಿ ಫೈಬರ್ ತುಂಬಿದ್ದು, ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಒಮೆಗಾ -3, ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್ ನಂತಹ ಇತರ ಪೋಷಕಾಂಶಗಳನ್ನು ಹೊಂದಿರುರುವುದರಿಂದ ನಿಮ್ಮ ಹಾರ್ಮೋನುಗಳು ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಸಹಜವಾಗಿ, ಬೀಜಗಳು ತಕ್ಷಣ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಮಾಂತ್ರಿಕ ಪದಾರ್ಥವಲ್ಲ. ಆದರೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಗಳನ್ನು ನಿಮ್ಮ ದಿನನಿತ್ಯದ ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.
ತೂಕ ಇಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಸೇರಿಸಬಹುದಾದ 5 ಅತ್ಯುತ್ತಮ ಬೀಜಗಳ ಪಟ್ಟಿ ಇಲ್ಲಿದೆ, ಈ ಬೀಜಗಳು ನೋಡಲು ಮಾತ್ರ ಸಣ್ಣ ಆದರೆ ಅದರಲ್ಲಿರುವ ಪೋಷಕಾಂಶಗಳು ಮಾತ್ರ ಹೇರಳ. ಇವು ನಿಮಗೆ ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಪೋಷಕಾಂಶಗಳಿಂದ ತುಂಬಿರುವ ಕುಂಬಳಕಾಯಿ ಬೀಜಗಳು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಬೀಜಗಳಲ್ಲಿರುವ ಮೆಗ್ನೀಶಿಯಮ್, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗಾಗಿ ನಿಮ್ಮ ತೂಕ ಇಳಿಸಿಕೊಳ್ಳುವ ಆಹಾರದ ಪಟ್ಟಿಯಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸಲು ಪ್ರಯತ್ನಿಸಿ.
ನಿಮ್ಮ ತೂಕ ಇಳಿಕೆಗೆ ಉತ್ತೇಜನ ನೀಡಲು, ಸಸ್ಯ ಆಧಾರಿತ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿರುವ ಎಳ್ಳಿನ ಬೀಜಗಳು ಯಾವುದೇ ತೂಕ ಇಳಿಕೆಯ ಆಹಾರಕ್ಕೆ ಪರಿಪೂರ್ಣ ಸೇರ್ಪಡೆಯಾಗಿದೆ. ಈ ಬೀಜಗಳು ಜೀರ್ಣಕಾರಿ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕರ ಹೃದಯ ಮತ್ತು ಮೆದುಳನ್ನು ಉತ್ತೇಜಿಸುತ್ತವೆ. ಈ ಸಣ್ಣ ಬೀಜಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ಸಮರ್ಥವಾಗಿವೆ. ಹಾಗಾದರೆ, ಇಂದಿನಿಂದಲೇ ನಿಮ್ಮ ಆಹಾರದಲ್ಲಿ ಎಳ್ಳಿನ ಬೀಜಗಳನ್ನು ಸೇರಿಸಿಕೊಳ್ಳಿ.
ಇದನ್ನೂ ಓದಿ:Weight Loss Tips: ಮಧ್ಯರಾತ್ರಿ ಹಸಿವು ತಡೆಯಲು ಏನು ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ
ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಹೆಣಗಾಡುತ್ತಿರುವವರಿಗೆ ಅಗಸೆ ಬೀಜ ಅತ್ಯುತ್ತಮ ಆಯ್ಕೆ. ಈ ಬೀಜಗಳಲ್ಲಿ ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉರಿಯೂತದ ಕಡಿಮೆ ಮಾಡುವ ಗುಣಲಕ್ಷಣಗಳೆಲ್ಲವೂ ಸಮೃದ್ಧವಾಗಿರುವುದರಿಂದ, ಇವೆಲ್ಲವೂ ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ತೂಕ ನಷ್ಟ ಮಾತ್ರವಲ್ಲ, ನಿಮ್ಮ ದೇಹಕ್ಕೆ ಒಗ್ಗದ ತಿಂಡಿಗಳಿಂದ ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಮತ್ತು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸೂರ್ಯಕಾಂತಿ ಬೀಜಗಳು ಪ್ರೋಟೀನ್ ತುಂಬಿರುವ ಪೋಷಕಾಂಶಗಳ ಸಣ್ಣ ಶಕ್ತಿಕೇಂದ್ರ. ಇದು ನಿಮ್ಮ ತೂಕ ಇಳಿಕೆಯ ಪ್ರಯಾಣಕ್ಕೆ ಪರಿಪೂರ್ಣ ಸೇರ್ಪಡೆಯಾಗಿದೆ. ಜೊತೆಗೆ ಈ ಬೀಜಗಳಲ್ಲಿ ನಾರಿನಂಶವೂ ಸಮೃದ್ಧವಾಗಿರುವುದರಿಂದ ಇದು ಆರೋಗ್ಯಕರ ಜೀರ್ಣಕ್ರಿಯೆಯ ಉತ್ತೇಜನಕ್ಕೆ ಸಹಕಾರಿಯಾಗಿದೆ. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಸಹಕಾರಿಯಾಗಲಿದೆ.
ನೀವು ತೂಕ ಇಳಿಕೆಗೆ ಹಲವಾರು ರೀತಿಯ ಉಪಾಯಗಳನ್ನು ಹುಡುಕುತ್ತಿದ್ದರೆ ಚಿಯಾ ಬೀಜಗಳು ಉತ್ತಮ ಆಯ್ಕೆ. ಆಧುನಿಕ ಆಹಾರ ಪದ್ಧತಿಯಲ್ಲಿಯೂ ಇದನ್ನು ಬಳಸಲಾಗುತ್ತಿದೆ. ಕೆಲವು ವರ್ಷಗಳಿಂದ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜನರು ಇದನ್ನು ಸೇವಿಸಲು ಆರಂಭಿಸಿದ್ದಾರೆ. ಜೊತೆಗೆ ಹಾರ್ವರ್ಡ್ ಟಿ.ಎಚ್.ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಧ್ಯಯನವು ಚಿಯಾ ಬೀಜಗಳು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟವನ್ನು ಬೆಂಬಲಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಚಿಯಾ ಬೀಜಗಳಲ್ಲಿರುವ ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಿದ್ದು, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ, ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನಿಮ್ಮ ಆಹಾರದಲ್ಲಿ ಚಿಯಾ ಬೀಜಗಳನ್ನು ಸೇರಿಸಿಕೊಳ್ಳಿ.
ಮುಂಜಾನೆ ಈ ಎಲ್ಲ ಬೀಜ, ತರಕಾರಿ, ಧಾನ್ಯಗಳನ್ನು ಸೇರಿಸಿಕೊಳ್ಳುವ ಮೂಲಕ ಸಲಾಡ್ ರೀತಿಯಲ್ಲಿ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ