ಈ ಕೆಲವು ಆಹಾರ ಪದಾರ್ಥಗಳನ್ನು ಮೊಟ್ಟೆಯೊಂದಿಗೆ ಸೇವಿಸುವ ತಪ್ಪು ಎಂದಿಗೂ ಮಾಡಬೇಡಿ!

| Updated By: shruti hegde

Updated on: Nov 26, 2021 | 1:17 PM

ಕೆಲವು ಬಾರಿ ವಿಲಕ್ಷಣ ಆಹಾರ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ಹಾಗಾಗಿ ನೀವು ಮೊಟ್ಟೆಯೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ಎಂದಿಗೂ ಮಿಶ್ರಣ ಮಾಡಬೇಡಿ ಸೇವಿಸಬೇಡಿ.

ಈ ಕೆಲವು ಆಹಾರ ಪದಾರ್ಥಗಳನ್ನು ಮೊಟ್ಟೆಯೊಂದಿಗೆ ಸೇವಿಸುವ ತಪ್ಪು ಎಂದಿಗೂ ಮಾಡಬೇಡಿ!
ಸಂಗ್ರಹ ಚಿತ್ರ
Follow us on

ನೀವು ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಸರಿಯಾದ ಆಹಾರವನ್ನು ಸರಿಯಾದ ಸಮಯದಕ್ಕೆ ಸೇವಿಸುವುದು ಬಹಳ ಮುಖ್ಯ. ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಬಾರಿ ಆಹಾರ ಸಂಯೋಜನೆಗಳು ಸರಿಯಾಗಿರುವುದಿಲ್ಲ. ಅಂತಹ ಆಹಾರಗಳು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಎಂದೂ ನಿಮ್ಮ ಅರೋಗ್ಯದ ಬಗ್ಗೆ ಕಾಳಜಿ ಇರಲಿ. ಜೊತೆಗೆ ನೀವು ಮೊಟ್ಟೆಯೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ಎಂದಿಗೂ ಮಿಶ್ರಣ ಮಾಡಬೇಡಿ ಸೇವಿಸಬೇಡಿ.

ಮೊಟ್ಟೆಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತವೆ. ಅವು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಾಂಶಗಳಿಂದ ತುಂಬಿವೆ. ಮೊಟ್ಟೆ ಸೇವನೆಯಲ್ಲಿ ಜನರಿಗೆ ವಿವಿಧ ಆಯ್ಕೆಗಳಿವೆ. ಆದರೆ ಕೆಲವು ಬಾರಿ ವಿಲಕ್ಷಣ ಆಹಾರ ಸಂಯೋಜನೆಗಳು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ.

ಮೊಟ್ಟೆಯೊಂದಿಗೆ ನೀವು ಮಿಶ್ರಣ ಮಾಡಬಾರದ ಆಹಾರ ಪದಾರ್ಥಗಳು
ಬೇಕನ್
ಬಹಳಷ್ಟು ಜನರು ಬೇಕನ್ ಮತ್ತು ಮೊಟ್ಟೆಯನ್ನು ಏಕಕಾಲದಲ್ಲಿ ಸೇವಿಸುತ್ತಾರೆ. ಆದರೆ ಈ ಸಂಯೋಜನೆಗಳು ನಿಮ್ಮ ಆಲಸ್ಯವನ್ನು ಹೆಚ್ಚಿಸುತ್ತವೆ. ಮೊಟ್ಟೆ ಮತ್ತು ಬೇಕನ್​ನಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕೊಬ್ಬಿನಾಂಶಗಳಿಂದ ಸಮೃದ್ಧವಾಗಿದ್ದರೂ, ಏಕಕಾಲದಲ್ಲಿ ಸೇವಿಸುವುದರಿಂದ ನಿಮ್ಮ ಶಕ್ತಿಯ ಮಟ್ಟ ಕುಗ್ಗುವಿಕೆಗೆ ಕಾರಣವಾಗುತ್ತದೆ.

ಸಕ್ಕರೆ
ಮೊಟ್ಟೆ ಮತ್ತು ಸಕ್ಕರೆ ಎರಡೂ ಆಹಾರ ಪದಾರ್ಥಗಳಲ್ಲಿರುವ ಅಮೈನೋ ಆಮ್ಲವು ರಕ್ತದಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಸಾಧ್ಯತೆಗಳಿರುವುದರಿಂದ ಈ ಎರಡು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.

ಸೋಯಾ ಹಾಲು
ಸೋಯಾ ಹಾಲು ಮತ್ತು ಮೊಟ್ಟೆಗಳ ಸಂಯೋಜನೆಯು ದೇಹವು ಪ್ರೋಟೀನ್ ಹೀರಿಕೊಳ್ಳಲು ಅಡೆತಡೆ ಉಂಟು ಮಾಡುತ್ತವೆ. ಆದ್ದರಿಂದ ಈ ಆಹಾರ ಸಂಯೋಜನೆಯನ್ನು ಆದಷ್ಟು ತಪ್ಪಿಸಿ.

ಚಹಾ
ಚಹಾ ಮತ್ತು ಮೊಟ್ಟೆಯನ್ನು ಎಂದಿಗೂ ಏಕಕಾಲದಲ್ಲಿ ಸೇವಿಸಬಾರದು. ಇದು ಮಲಬದ್ದತೆಗೆ ಕಾರಣವಾಗುತ್ತದೆ. ದೇಹದಲ್ಲಿ ಶಕ್ತಿಯ ಮಟ್ಟವನ್ನು ಕುಗ್ಗಿಸುತ್ತದೆ. ಹಾಗಾಗಿ ಈ ಸಂಯೋಜನೆಯನ್ನು ಆದಷ್ಟು ತಪ್ಪಿಸಿ.

ಬಾಳೆ ಹಣ್ಣು
ಬಾಳೆಹಣ್ಣನ್ನು ಸೇವಿಸಿದ ನಂತರ ಮೊಟ್ಟೆಯನ್ನು ತಿನ್ನುವ ಅಭ್ಯಾಸವಿದ್ದರೆ ಅದನ್ನು ತಪ್ಪಿಸಿ. ಬಾಳೆಹಣ್ಣು ಮತ್ತು ಮೊಟ್ಟೆಯ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ನೀವು ನಿಮ್ಮ ಆರೋಗ್ಯದ ಬಗ್ಗೆ ಎಂದಿಗೂ ಕಾಳಜಿ ಮಾಡಬೇಕು. ಆರೋಗ್ಯದಲ್ಲಿ ಏನೇ  ಏರು-ಪೇರು ಕಂಡು ಬಂದರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ನಿಮ್ಮ ನಿರ್ಲಕ್ಷ್ಯದಿಂದ ಮುಂದೊಂದು ದಿನ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾದ ಸಂದರ್ಭ ಎದುರಾಗಬಹುದು. ಹಾಗಾಗಿ ನಿಮ್ಮ ಆರೋಗ್ಯ ಸುರಕ್ಷತೆ ನಿಮ್ಮ ಕೈಯಲ್ಲಿದೆ ಎಂಬುದು ನೆನಪಿನಲ್ಲಿರಲಿ.

ಇದನ್ನೂ ಓದಿ:

Child Health: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ನಿರ್ಲಕ್ಷ್ಯಿಸಬೇಡಿ; ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಆಗಿರಬಹುದು ಎಚ್ಚರ!

Health Tips: ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ಸರಳ ಸಲಹೆಗಳು