Fish and Milk: ಹಾಲು ಮತ್ತು ಮೀನಿನ ಕಾಂಬಿನೇಷನ್ ಅಪಾಯಕಾರಿಯೇ? ತಜ್ಞರು ಹೇಳುವುದೇನು?

| Updated By: ನಯನಾ ರಾಜೀವ್

Updated on: Aug 22, 2022 | 9:55 AM

ಊಟವೆಂದ ಮೇಲೆ ಸಾಮಾನ್ಯವಾಗಿ ಅನ್ನ, ಕರಿ, ದಾಲ್, ಚಟ್ನಿ, ಸಾಂಬಾರ್ ಮತ್ತು ಮೊಸರನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಕೆಲವನ್ನು ಒಟ್ಟಿಗೆ ತೆಗೆದುಕೊಂಡರೆ ಆಹಾರದ ರುಚಿ ಹೆಚ್ಚುತ್ತದೆ.

Fish and Milk: ಹಾಲು ಮತ್ತು ಮೀನಿನ ಕಾಂಬಿನೇಷನ್ ಅಪಾಯಕಾರಿಯೇ? ತಜ್ಞರು ಹೇಳುವುದೇನು?
Fish and Milk
Follow us on

ಊಟವೆಂದ ಮೇಲೆ ಸಾಮಾನ್ಯವಾಗಿ ಅನ್ನ, ಕರಿ, ದಾಲ್, ಚಟ್ನಿ, ಸಾಂಬಾರ್ ಮತ್ತು ಮೊಸರನ್ನು ಒಳಗೊಂಡಿರುತ್ತದೆ. ಇವುಗಳಲ್ಲಿ ಕೆಲವನ್ನು ಒಟ್ಟಿಗೆ ತೆಗೆದುಕೊಂಡರೆ ಆಹಾರದ ರುಚಿ ಹೆಚ್ಚುತ್ತದೆ. ಆದರೆ ಕೆಲವು ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ಹೀಗೆ ಮಾಡುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಾಗುತ್ತವೆ. ಜೀರ್ಣ ವ್ಯವಸ್ಥೆ ಸರಿಯಾಗಿರದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಮೀನಿನೊಂದಿಗೆ ಹಾಲು ಅಥವಾ ಹಾಲಿನ ಇನ್ಯಾವುದೇ ರೀತಿಯ ಸಂಯೋಜನೆಯನ್ನು ನೀವು ಮಾಡಬಾರದು, ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇಲ್ಲ.

ಹಾಲು ಮತ್ತು ಮೀನಿನ ಸಂಯೋಜನೆಯು ತುಂಬಾ ಅಪಾಯಕಾರಿ. ಈ ಮಿಶ್ರಣವನ್ನು ಸೇವಿಸುವುದರಿಂದ ಚರ್ಮ ರೋಗಗಳು ಬರಬಹುದು. ಆಯುರ್ವೇದದಲ್ಲಿ ಮೀನು ಮತ್ತು ಹಾಲು ದೇಹದ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಹಾಲು ತಂಪಾಗಿಸುವ ಪರಿಣಾಮವನ್ನು ಹೊಂದಿದೆ, ಆದರೆ ಮೀನುಗಳು ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ, ಎರಡು ಕ್ರಿಯೆಯೂ ಒಟ್ಟಿಗೆ ಆದಾಗ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳುಂಟಾಗುತ್ತದೆ.

ಆದ್ದರಿಂದಲೇ ಆಯುರ್ವೇದ ಕೂಡ ಇವುಗಳನ್ನು ಯಾವುದೇ ಸಂದರ್ಭದಲ್ಲೂ ಒಟ್ಟಿಗೆ ತಿನ್ನಬಾರದು ಎಂದು ಹೇಳುತ್ತದೆ.
ಇವುಗಳನ್ನು ಸಂಯೋಜಿತವಾಗಿ ನೋಡುವುದಕ್ಕಿಂತ ಪ್ರತ್ಯೇಕವಾಗಿ ನೋಡುವುದರಿಂದ ಅಪಾರವಾದ ಪ್ರಯೋಜನಗಳಿವೆ. ಮಾಂಸಾಹಾರಿ ಆಹಾರಗಳಲ್ಲಿ ಮೀನು ವಿಶಿಷ್ಟವಾಗಿದೆ.

ಒಮೆಗಾ 3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಕಾರಣ ಮೀನುಗಳನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ತುಂಬಾ ಸಹಕಾರಿ. ಮೀನಿನಲ್ಲಿರುವ ಪ್ರೋಟೀನ್ ಮಾತ್ರವಲ್ಲದೇ ವಿಟಮಿನ್-ಡಿ ದೇಹಕ್ಕೆ ಉಪಯುಕ್ತವಾಗಿದೆ. ಸಾಮಾನ್ಯ ಚಯಾಪಚಯ ಕ್ರಿಯೆಗೆ ವಿಟಮಿನ್ ಡಿ ಅತ್ಯಗತ್ಯ. ವಿಟಮಿನ್ ಕೊರತೆಯಿಂದ ಬಳಲುತ್ತಿರುವವರು ಮೀನು ತಿನ್ನಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೆ, ಮೀನು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.

ಮತ್ತೊಂದೆಡೆ.. ಪ್ರಪಂಚದಲ್ಲಿ ಅತಿ ಹೆಚ್ಚು ಸೇವಿಸುವ ಆಹಾರ ಪದಾರ್ಥಗಳಲ್ಲಿ ಹಾಲು ಮೊದಲ ಸ್ಥಾನದಲ್ಲಿದೆ. ಮಾಂಸದಿಂದ ಸಿಗದ ಪೋಷಕಾಂಶಗಳನ್ನು ಹಾಲಿನಿಂದ ಪಡೆಯಬಹುದು. ಅದಕ್ಕಾಗಿಯೇ ಹಾಲನ್ನು ಸಂಪೂರ್ಣ ಆಹಾರ ಎಂದು ಕರೆಯಲಾಗುತ್ತದೆ.

ಹಾಲಿನಲ್ಲಿರುವ ಕ್ಯಾಲ್ಸಿಯಂ ಮಗುವಿನ ಬೆಳವಣಿಗೆಗೆ ಮಾತ್ರವಲ್ಲದೆ ಮೂಳೆಗಳು ಬಲವಾಗಿರಲು ಸಹಾಯ ಮಾಡುತ್ತದೆ. ಹಾಲಿನ ಹೊರತಾಗಿ, ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಸಹ ಉಪಯುಕ್ತವಾಗಿವೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ