
ಶಾಖ ವಿಪರೀತವಾಗಿ ಹೆಚ್ಚಾಗುತ್ತಿದ್ದು ಇದರಿಂದ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅದಕ್ಕೆ ಪೂರಕ ಎಂಬಂತೆ ಎಸಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ವರದಿಗಳು ಹೆಚ್ಚುತ್ತಿದೆ. ತಂಪಾದ ಗಾಳಿಯನ್ನು ಒದಗಿಸುವ ಎಸಿಗಳು ಸಹ ಬೆಂಕಿ ಉಗುಳುತ್ತಿದೆ. ಈ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ತಜ್ಞರು ಪ್ರತಿ ಎರಡು ಗಂಟೆಗಳಿಗೊಮ್ಮೆ ಎಸಿಯನ್ನು 5 ರಿಂದ 7 ನಿಮಿಷಗಳ ಕಾಲ ಸ್ವಿಚ್ ಆಫ್ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಎಸಿಗೂ ಸ್ವಲ್ಪ ವಿಶ್ರಾಂತಿ ಸಿಗುತ್ತದೆ ಜೊತೆಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಕಡಿಮೆಯಾಗುತ್ತವೆ ಎಂಬುದು ಅವರ ಉದ್ದೇಶ. ಆದರೆ ಇದೆಲ್ಲದರ ಹೊರತಾಗಿ ಅನೇಕ ಜನರು ಎಸಿ ಕೋಣೆಯಲ್ಲಿಯೇ (Air conditioned room) ಕುಳಿತು ಸಿಗರೇಟ್ ಸೇದುತ್ತಾರೆ, ಇದು ಇನ್ನೂ ಅಪಾಯಕಾರಿ ಎಂದು ಸಂಶೋಧನೆಗಳಿಂದ ಬಹಿರಂಗವಾಗಿದೆ.
ವಾಸ್ತವವಾಗಿ, ಒಂದು ಅಧ್ಯಯನದ ಪ್ರಕಾರ, ಬೇಸಿಗೆಯಲ್ಲಿ ಅದರಲ್ಲಿಯೂ ಎಸಿ ಕೋಣೆಯಲ್ಲಿ ಧೂಮಪಾನ ಮಾಡುವುದರಿಂದ ‘ಶಾಖ ಅಸಹಿಷ್ಣುತೆ’ ಅಥವಾ ದೇಹ ತಂಪಾಗಿಸುವ ಪ್ರಕ್ರಿಯೆ ದುರ್ಬಲಗೊಳ್ಳುತ್ತದೆ. ದೇಹವು ಶಾಖವನ್ನು ಬಿಡುಗಡೆ ಮಾಡಲು ಅಸಮರ್ಥವಾಗುತ್ತದೆ ಇದು ಹೃದಯ, ಮೆದುಳು, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಎಸಿ ಕೋಣೆ ಅಥವಾ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಧೂಮಪಾನ ಮಾಡಿದರೆ ಹೊಗೆ ಕೋಣೆಯಲ್ಲಿಯೇ ಉಳಿಯುತ್ತದೆ. ಇದು ನಿಮ್ಮ ಜೊತೆ ಕುಳಿತ ಎಲ್ಲರಿಗೂ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಅದರಲ್ಲಿಯೂ, ಬೇಸಿಗೆಯಲ್ಲಿ ಸಿಗರೇಟ್ ಸೇದುವುದರಿಂದ ಉಂಟಾಗುವ ಹಾನಿಯು ಅನೇಕ ಪಟ್ಟು ಹೆಚ್ಚಾಗುತ್ತದೆ. ಧೂಮಪಾನ ಮಾಡದವರಿಗೆ, ಅಂದರೆ ನಿಷ್ಕ್ರಿಯ ಧೂಮಪಾನಿಗಳಿಗೂ ಸಹ ಅಪಾಯ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ: ಗಂಟುನೋವಿಗೆ ಈ ಸೊಪ್ಪು ರಾಮಬಾಣ!
ಪ್ರತಿ ವರ್ಷ, ಸೆಕೆಂಡ್ ಹ್ಯಾಂಡ್ ಧೂಮಪಾನ ಅಥವಾ ನಿಷ್ಕ್ರಿಯ ಧೂಮಪಾನದಿಂದಾಗಿ ಸುಮಾರು 10 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಆದರೂ ಜನರು ಈ ಅಭ್ಯಾಸವನ್ನು ಬಿಡಲು ಒಪ್ಪುವುದಿಲ್ಲ. ಇನ್ನು ಅರಿಶಿನ, ಲವಂಗ, ಕರಿಮೆಣಸು, ಪುದೀನಾ ಮುಂತಾದವುಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ಧೂಮಪಾನವನ್ನು ತ್ಯಜಿಸಲು ಅಥವಾ ನಿಯಂತ್ರಣದಲ್ಲಿಡಲು ಸಹಕಾರಿಯಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: