Home Remedies: ಗಂಟುನೋವಿಗೆ ಈ ಸೊಪ್ಪು ರಾಮಬಾಣ!

 ವಯಸ್ಸಾದಂತೆ ಬೆನ್ನು, ಸೊಂಟ ನೋವು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಇಂತಹ ವಾತ ದೋಷಗಳನ್ನು ಪ್ರಾಥಮಿಕವಾಗಿ ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳುವ ಉತ್ತಮ ವಿಧಾನವೆಂದರೆ ನುಕ್ಕೆಸೊಪ್ಪು ಅಥವಾ ಲಕ್ಕಿ ಸೊಪ್ಪಿನ ಬಳಕೆ. ಇದು ಯಾವ ರೀತಿಯಲ್ಲಿ ನೋವನ್ನು ನಿವಾರಣೆ ಮಾಡುತ್ತದೆ? ಉಪಯೋಗಿಸುವುದು ಹೇಗೆ? ಇಲ್ಲಿದೆ ಮಾಹಿತಿ.

Home Remedies: ಗಂಟುನೋವಿಗೆ ಈ ಸೊಪ್ಪು ರಾಮಬಾಣ!
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 03, 2024 | 3:39 PM

ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬುದು ಆಯುರ್ವೇದಿಕ ಔಷಧಶಾಸ್ತ್ರದ ಪರಿಕಲ್ಪನೆ. ಈ ತ್ರಿದೋಷವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಇದನ್ನು ಪರಿಹರಿಸಿಕೊಳ್ಳಲು ಇರುವ ಮಾರ್ಗಗಳನ್ನು ಸರಿಯಾಗಿ ಪಾಲಿಸಿದಲ್ಲಿ ಇದರಿಂದ ಮುಕ್ತಿ ಪಡೆಯಬಹುದು. ಸಾಮಾನ್ಯವಾಗಿ ವಯಸ್ಸಾದಂತೆ ಬೆನ್ನು, ಸೊಂಟ ನೋವು ಹೀಗೆ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಇಂತಹ ವಾತ ದೋಷಗಳನ್ನು ಪ್ರಾಥಮಿಕವಾಗಿ ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳುವ ಉತ್ತಮ ವಿಧಾನವೆಂದರೆ ನುಕ್ಕೆಸೊಪ್ಪು ಅಥವಾ ಲಕ್ಕಿ ಸೊಪ್ಪಿನ ಬಳಕೆ. ಇದು ಯಾವ ರೀತಿಯಲ್ಲಿ ನೋವನ್ನು ನಿವಾರಣೆ ಮಾಡುತ್ತದೆ? ಉಪಯೋಗಿಸುವುದು ಹೇಗೆ? ಇಲ್ಲಿದೆ ಮಾಹಿತಿ.

ನೀವು ಬಿಳಿ ನುಕ್ಕೆಸೊಪ್ಪು ಅಥವಾ ಲಕ್ಕಿ ಸೊಪ್ಪಿನ ಬಗ್ಗೆ ಕೇಳಿರಬಹುದು. ಇದು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ತೋಟದ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದಲೂ ಆರೋಗ್ಯ ಪ್ರಯೋಜನಗಳಿವೆಯೇ ಎಂಬ ಪ್ರಶ್ನೆ ಮೂಡಬಹುದು. ಖಂಡಿತವಾಗಿಯೂ ಇದರಿಂದ ಅನೇಕ ರೀತಿಯ ಪ್ರಯೋಜನಗಳಿವೆ.

ಇದನ್ನೂ ಓದಿ: ಬೆಳಗಿನ ವಾಕಿಂಗ್ ನಂತರ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?

ಉಪಯೋಗಿಸುವುದು ಹೇಗೆ?

ಡಾ। ಸೌಮ್ಯಶ್ರೀ ಶರ್ಮ ಅವರು ಹೇಳುವ ಪ್ರಕಾರ, ಬಿಳಿ ನುಕ್ಕೆಸೊಪ್ಪುನ್ನು ಅರೆದು ನುಣ್ಣಗೆ ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಂಡು ಸ್ವಲ್ಪ ಬಿಸಿ ಮಾಡಿ ಕಾಲಿಗೆ ಅಥವಾ ನೋವಿದ್ದಲ್ಲಿ ಹಚ್ಚಿದರೆ ನೋವು ಶಮನವಾಗುತ್ತದೆ. ಅದಲ್ಲದೆ ಎಣ್ಣೆಗೆ ಹಾಕಿ ಸ್ವಲ್ಪ ಕುದಿಸಿ ಇಟ್ಟುಕೊಂಡು, ಆ ತೈಲವನ್ನು ಪ್ರತಿನಿತ್ಯ ಹಚ್ಚಿಕೊಳ್ಳುವುದರಿಂದ ಕುತ್ತಿಗೆ, ಬೆನ್ನು, ಸೊಂಟ ನೋವನ್ನು ಮನೆಯಲ್ಲಿಯೇ ಪ್ರಥಮ ಹಂತದಲ್ಲಿ ಗುಣಪಡಿಸಬಹುದಾಗಿದೆ.

ಇತರ ಪ್ರಯೋಜನಗಳು?

ಈ ಸೊಪ್ಪನ್ನು ಒಣಗಿಸಿ ಕೈಯಲ್ಲಿ ತಿಕ್ಕಿ ಪುಡಿ ಮಾಡಿ, ಆ ಪುಡಿಯಿಂದ ನಸ್ಯ ಮಾಡಿದರೆ ನೆಗಡಿ ಗುಣವಾಗುತ್ತದೆ. ಲಕ್ಕಿ ಸೊಪ್ಪಿನ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ನಿಯಮಿತವಾಗಿ ಸೇವಿಸಿದರೆ ಕಫ ಅಥವಾ ಜ್ವರ ಇದ್ದಲ್ಲಿ ಕಡಿಮೆಯಾಗುತ್ತದೆ. (ಇದನ್ನು ಬಳಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ)

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:37 pm, Mon, 3 June 24

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ