Navratri 2022: ನವರಾತ್ರಿಯಲ್ಲಿ ಉಪವಾಸ ಮಾಡುವ ಮುನ್ನ ಮಧುಮೇಹಿಗಳಿಗೆ ಈ ಸಂಗತಿಗಳು ತಿಳಿದಿರಲಿ
ಮಧುಮೇಹ( Diabetes) ದ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಆದರೆ ನವರಾತ್ರಿಯ ಈ ಶುಭ ಸಂದರ್ಭದಲ್ಲಿ, ಮಧುಮೇಹಿಗಳು ಮತ್ತು ಉಪವಾಸ ಮಾಡಲು ಬಯಸುವವರಿಗಾಗಿ ಕೆಲವು ಸಲಹೆಗಳು ಇಲ್ಲಿವೆ.
ಮಧುಮೇಹ( Diabetes) ದ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಆದರೆ ನವರಾತ್ರಿಯ ಈ ಶುಭ ಸಂದರ್ಭದಲ್ಲಿ, ಮಧುಮೇಹಿಗಳು ಮತ್ತು ಉಪವಾಸ ಮಾಡಲು ಬಯಸುವವರಿಗಾಗಿ ಕೆಲವು ಸಲಹೆಗಳು ಇಲ್ಲಿವೆ. ಮಧುಮೇಹಿಗಳು ನವರಾತ್ರಿಯಲ್ಲಿ ಉಪವಾಸ ಮಾಡಬಹುದೇ?, ಎಂತಹ ಆಹಾರವನ್ನು ಸೇವಿಸಬಹುದು ಮಾಹಿತಿ ಇಲ್ಲಿದೆ.
ವ್ಯಕ್ತಿಯ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆಯಿದ್ದರೆ ಅಥವಾ ಇನ್ಸುಲಿನ್ ಕಡಿಮೆ ಪ್ರಮಾಣದಲ್ಲಿ ತಲುಪಿದಾಗ, ಆ ವ್ಯಕ್ತಿಯ ರಕ್ತದಲ್ಲಿ ಗ್ಲೂಕೋಸ್ ಅಂದರೆ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಇದನ್ನು ಮಧುಮೇಹ ಎಂದು ಕರೆಯಲಾಗುತ್ತದೆ.
ಅಂತಹ ಜನರು ದೀರ್ಘಕಾಲ ಹಸಿವಿನಿಂದ ಬಳಲುತ್ತಿರುತ್ತಾರೆ ಮತ್ತು ಅವರ ಸಕ್ಕರೆಯ ಮಟ್ಟವು ಕಡಿಮೆಯಾಗುತ್ತದೆ. ಈ ಸ್ಥಿತಿಯನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ.
ಈ ಸಮಯದಲ್ಲಿ, ರೋಗಿಯ ಕೈಗಳು ಮತ್ತು ಪಾದಗಳು ನಡುಗಲು ಪ್ರಾರಂಭಿಸುತ್ತವೆ ಮತ್ತು ದೇಹದಲ್ಲಿ ದೌರ್ಬಲ್ಯವನ್ನು ಅನುಭವಿಸಲಾಗುತ್ತದೆ, ಹೃದಯ ಬಡಿತ ಹೆಚ್ಚಾಗುತ್ತದೆ.
ಮಧುಮೇಹಿಗಳು ಉಪವಾಸ ಮಾಡಬಹುದೇ? ಮಧುಮೇಹ ಹಾಗೂ ರಕ್ತದೊತ್ತಡದ ಕಾಯಿಲೆ ಇದ್ದರೆ ಉಪವಾಸದ ಸಮಯದಲ್ಲಿ ಉಪ್ಪು ಇರುವಂತಹ ಆಹಾರವನ್ನು ಸೇವಿಸಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ಇದರ ನಡುವೆ ಮಾರುಕಟ್ಟೆಯಲ್ಲಿ ಸಿಗುವ ಡ್ರೈಫ್ರೂಟ್ಸ್ಗಳನ್ನು ತಿನ್ನಬಹುದು. ಬಾದಾಮಿ, ವಾಲ್ ನಟ್ ಗಳನ್ನು ಹುರಿದು ತಿನ್ನಬಹುದು. ದಿನವಿಡೀ ದೇಹವನ್ನು ತೇವಾಂಶದಿಂದ ಇಡಲು ಮರೆಯಬೇಡಿ.
ಇದಕ್ಕಾಗಿ ಕಾಲಕಾಲಕ್ಕೆ ಮಜ್ಜಿಗೆ, ನಿಂಬೆರಸ, ತೆಂಗಿನ ನೀರು ಕುಡಿಯುತ್ತಿರಿ. ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಕಾಲಕಾಲಕ್ಕೆ ನಿಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಮರೆಯದಿರಿ.
ಒಂದೊಮ್ಮೆ ನಿಮ್ಮ ವೈದ್ಯರು ಉಪವಾಸ ಮಾಡದಂತೆ ಸಲಹೆ ನೀಡಿದರೆ, ಖಂಡಿತವಾಗಿಯೂ ನೀವು ಉಪವಾಸ ಮಾಡಬೇಡಿ. ಅದು ನಿಮಗೆ ಮಾರಕವಾಗಬಹುದು.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ