AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diabetes: ಹಾಲು ಕುಡಿಯುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು!

ಪ್ರತಿನಿತ್ಯ ನಾವು ಒಂದಲ್ಲಾ ಒಂದು ರೀತಿಯಲ್ಲಿ ಹಾಲಿನ ಬಳಕೆ ಮಾಡುತ್ತಲೇ ಇರುತ್ತೇವೆ. ಕೆಲವರು ಕಾಫಿ, ಚಹಾಗಳಿಗೆ ಹಾಲನ್ನು ಬಳಸಿದರೆ ಇನ್ನೂ ಕೆಲಸವರು, ಬೂಸ್ಟ್​, ಹಾರ್ಲಿಕ್ಸ್​ ಸೇರಿದಂತೆ ಇತರೆ ಪಾನೀಯಗಳಲ್ಲಿ ಹಾಲು ಬಳಕೆ ಮಾಡುತ್ತಾರೆ.

Diabetes: ಹಾಲು ಕುಡಿಯುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು!
Milk
Follow us
TV9 Web
| Updated By: ನಯನಾ ರಾಜೀವ್

Updated on: Sep 22, 2022 | 12:41 PM

ಪ್ರತಿನಿತ್ಯ ನಾವು ಒಂದಲ್ಲಾ ಒಂದು ರೀತಿಯಲ್ಲಿ ಹಾಲಿನ ಬಳಕೆ ಮಾಡುತ್ತಲೇ ಇರುತ್ತೇವೆ. ಕೆಲವರು ಕಾಫಿ, ಚಹಾಗಳಿಗೆ ಹಾಲನ್ನು ಬಳಸಿದರೆ ಇನ್ನೂ ಕೆಲಸವರು, ಬೂಸ್ಟ್​, ಹಾರ್ಲಿಕ್ಸ್​ ಸೇರಿದಂತೆ ಇತರೆ ಪಾನೀಯಗಳಲ್ಲಿ ಹಾಲು ಬಳಕೆ ಮಾಡುತ್ತಾರೆ.

ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ರೋಗ ವೃದ್ಧರನ್ನು ಮಾತ್ರವಲ್ಲದೆ ಯುವಕರನ್ನೂ ಕಾಡುತ್ತಿದೆ.

ಈ ಅಪಾಯಕಾರಿ ರೋಗದಿಂದ ಪಾರಾಗಲು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ವಿಶೇಷವಾಗಿ ಆಹಾರದ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಆದರೆ ಬಹುತೇಕ ರೋಗಿಗಳಿಗೆ ತಮಗೆ ಈ ಕಾಯಿಲೆ ಇದೆ ಎಂಬುದೇ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಮಧುಮೇಹದ ಕುರಿತಾದ ಸಂಶೋಧನೆಯೊಂದರಲ್ಲಿ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

ಇವುಗಳ ಪ್ರಕಾರ ಪ್ರತಿದಿನ ಒಂದು ಲೋಟ ಹಾಲನ್ನು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಮಧುಮೇಹದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು ಎಂದು ಈ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಹೇಳುತ್ತಾರೆ.

ರಕ್ತದಲ್ಲಿನ ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯದ ಜೊತೆಗೆ ಹಾಲು ಅನೇಕ ಪೋಷಕಾಂಶಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ. ಮಧುಮೇಹದ ಆರಂಭಿಕ ಪತ್ತೆ ಬಹಳ ಮುಖ್ಯ. ಇಲ್ಲದಿದ್ದರೆ ಅದು ನಮ್ಮ ಕಣ್ಣು ಮತ್ತು ಹೃದಯಕ್ಕೆ ತುಂಬಾ ಅಪಾಯಕಾರಿಯಾಗುತ್ತದೆ.

ಅದರಲ್ಲೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತವೆ. ಕುರುಡುತನವೂ ಉಂಟಾಗಬಹುದು. ಇದು ಮಾರಣಾಂತಿಕ ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಇಂಟರ್‌ನ್ಯಾಷನಲ್‌ ಡಯಾಬಿಟಿಸ್‌ ಫೆಡರೇಷನ್‌ ಪ್ರಕಾರ ವಿಶ್ವಾದ್ಯಂತ ಸುಮಾರು 55 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಆಹಾರ. ಈ ಸಂದರ್ಭದಲ್ಲಿ ಹಾಲು, ಮೊಸರು, ಮಜ್ಜಿಗೆ ಮುಂತಾದ ಡೈರಿ ಉತ್ಪನ್ನಗಳು ಈ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಪ್ರತಿದಿನ ಒಂದು ಲೋಟ ಹಾಲು ಸೇವಿಸುವುದರಿಂದ ಮಧುಮೇಹದ ಅಪಾಯವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸಿದೆ. ಅದೇ ರೀತಿ, 200 ಗ್ರಾಂ ಹಾಲಿನ ಉತ್ಪನ್ನವು ಈ ರೋಗವನ್ನು ಶೇಕಡಾ 5 ರಷ್ಟು ಕಡಿಮೆ ಮಾಡುತ್ತದೆ ಎಂದು ಈ ಸಂಶೋಧನೆಯು ಬಹಿರಂಗಪಡಿಸಿದೆ.

ಡೈರಿ ಉತ್ಪನ್ನಗಳು ಪೋಷಕಾಂಶಗಳು, ಜೀವಸತ್ವಗಳು ಮತ್ತು ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸುವ ಅನೇಕ ಜೈವಿಕ ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ