Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ

| Updated By: ನಯನಾ ರಾಜೀವ್

Updated on: Jul 07, 2022 | 3:14 PM

ಪ್ರವಾಸವೆಂದಾಕ್ಷಣ ಸುತ್ತಾಟ, ಆಯಾಸ ಇದುವೇ ಕಣ್ಣಮುಂದೆ ಬರುತ್ತದೆ, ಇವೆಲ್ಲವನ್ನೂ ಬದಿಗಿಟ್ಟು ಪ್ರವಾಸಕ್ಕೆ ತೆರಳಿದಾಗಲೂ ಫಿಟ್ ಆಗಿರುವುದು ಹೇಗೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

Trip:ಪ್ರವಾಸದಲ್ಲಿರುವಾಗಲೂ ಫಿಟ್ ಆಗಿರಲು ಮಾರ್ಗಗಳು ಇಲ್ಲಿವೆ
Travel
Follow us on

ಪ್ರವಾಸವೆಂದಾಕ್ಷಣ ಸುತ್ತಾಟ, ಆಯಾಸ ಇದುವೇ ಕಣ್ಣಮುಂದೆ ಬರುತ್ತದೆ, ಇವೆಲ್ಲವನ್ನೂ ಬದಿಗಿಟ್ಟು ಪ್ರವಾಸಕ್ಕೆ ತೆರಳಿದಾಗಲೂ ಫಿಟ್ ಆಗಿರುವುದು ಹೇಗೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಕಚೇರಿಯ ಒತ್ತಡಗಳಿಂದ ದೂರವಾಗಲು ನೀವು ಟ್ರಿಪ್​ಗೆ ಹೋದಾಗ ಮತ್ತಷ್ಟು ಆಯಾಸ, ಒತ್ತಡ ಉಂಟಾದರೆ ಪ್ರಯೋಜನವೇನಿದೆ.

ಹಾಗಾಗಿ ಜಿಮ್ ಇಲ್ಲದೆಯೇ ನೀವು ಫಿಟ್ ಆಗಿರಬಹುದಾದ ಮಾರ್ಗಗಳೇನು ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಬೆಳಗ್ಗೆಯ ತಿಂಡಿಯನ್ನು ಬಿಡಲೇಬೇಡಿ
ಯಾವುದೇ ಕಾರಣಕ್ಕೂ ಬೆಳಗ್ಗೆಯ ತಿಂಡಿಯನ್ನು ಮಾತ್ರ ಬಿಡಬೇಡಿ, ಬೆಳಗ್ಗೆ ತಿಂಡಿ ತಿನ್ನುವುದರಿಂದ ಇಡೀ ದಿನವು ನೀವು ಚೈತನ್ಯದಿಂದ ಇರಬಹುದು. ಹಾಗೆಯೇ ಸಾಕಷ್ಟು ಸ್ಥಳಗಳನ್ನು ಕೂಡ ವೀಕ್ಷಿಸಬಹುದು. ನಿಮಗೆ ನಿದ್ರೆ ತರಬಲ್ಲ ಯಾವ ಆಹಾರಗಳನ್ನು ಕೂಡ ಸೇವನೆ ಮಾಡಬೇಡಿ. ನಟ್ಸ್​ ಹಾಗೂ ಹಣ್ಣುಗಳು ನಿಮ್ಮ ದೇಹದಲ್ಲಿ ಮೆಟಾಬಾಲಿಸಂ ಹೆಚ್ಚಿಸುತ್ತದೆ.

ಸದಾ ಹೈಡ್ರೇಟ್​ ಆಗಿರಿ: ಟ್ರಾವೆಲ್ ಮಾಡುವಾಗ ಸಾಮಾನ್ಯವಾಗಿ ಜನರು ಕಡಿಮೆ ನೀರು ಕುಡಿಯುತ್ತಾರೆ, ನೀವು ಹೆಚ್ಚು ಉಷ್ಣ ಪ್ರದೇಶಗಳಿಗೆ ತೆರಳುತ್ತಿದ್ದರೆ ಅತಿ ಹೆಚ್ಚು ನೀರು ಕುಡಿಯುವುದು ಉತ್ತಮ.

ಪ್ರೋಟೀನ್ ಬಾರ್ಸ್​ ತಿನ್ನಿ: ನೀವು ಟ್ರಾವೆಲ್ ಮಾಡುವಾಗ ಅತಿ ಹೆಚ್ಚು ಆಹಾರ ಸೇವನೆ ಮಾಡುವ ಬದಲು ಪ್ರೋಟೀನ್ ಬಾರ್​ಗಳನ್ನು ತಿನ್ನಿ, ಇದರಿಂದ ಶಕ್ತಿಯೂ ಬರುತ್ತದೆ, ಪದೇ ಪದೇ ಟಾಯ್ಲೆಟ್​ಗೆ ಹೋಗಬೇಕಾಗಿಯೂ ಬರುವುದಿಲ್ಲ.

ಜಿಮ್​ಗಳಿವೇಯೇ ಗಮನಿಸಿ: ಸಂಜೆಯ ಸಮಯದಲ್ಲಿ ನಿಮಗೆ ಸಮಯವಿದೆ ಎಂದಾದರೆ ಹೋಟೆಲ್ ಅಥವಾ ರೆಸಾರ್ಟ್​ನಲ್ಲಿರುವ ಜಿಮ್​ಗೆ ಹೋಗಿ ಕೆಲ ಸಮಯಗಳ ಕಾಲ ವರ್ಕೌಟ್ ಮಾಡಿ.

ವಾಕಿಂಗ್​ಗೆ ಹೋಗಿ: ನೀವೆ ಎಲ್ಲೇ ಇದ್ದರೂ ಟ್ಯಾಕ್ಸಿಗಳಲ್ಲಿ ಟ್ರಾವೆಲ್ ಮಾಡುವ ಬದಲು ಹತ್ತಿರದ ಸ್ಥಳಗಳಿಗೆ ನಡೆದುಕೊಂಡೇ ಹೋಗಿ. ಹತ್ತಿದ ಪಾರ್ಕ್​ಗಳಿಗೆ ಭೇಟಿ ನೀಡಿ ಹತ್ತು ನಿಮಿಷಗಳ ಕಾಲ ಅಲ್ಲಿ ವಾಕ್ ಮಾಡಿ, ನಿಮ್ಮ ಇಡೀ ದಿನವು ಆರಾಮದಾಯಕವಾಗಿ ಕಳೆಯುತ್ತೀರಿ.