ಹಂಪಿ ಪ್ರವಾಸ ಹಿನ್ನೆಲೆ ಅಂಜನಾದ್ರಿ ಪರ್ವತಕ್ಕೆ ಮೈಸೂರಿನ ಯದುವೀರ್ ದಂಪತಿ ಭೇಟಿ
ಹಂಪಿಗೆ ಪ್ರವಾಸಕ್ಕೆ ಆಗಮಿಸಿದ ಹಿನ್ನಲೆ, ಅಂಜನಾದ್ರಿ ಬೆಟ್ಟ ಏರಿ ವಿಶೇಷ ಪೂಜೆ ಸಲ್ಲಿಸಿ ಯದುವೀರ್ ಕುಟುಂಬ ಹನುಮನ ದರ್ಶನ ಪಡೆದುಕೊಂಡರು.
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ (Anjanadri) ಪರ್ವತಕ್ಕೆ ಮೈಸೂರಿನ ಯದುವೀರ್ ದಂಪತಿ ಭೇಟಿ ನೀಡಿದರು. ಹಂಪಿಗೆ ಪ್ರವಾಸಕ್ಕೆ ಆಗಮಿಸಿದ ಹಿನ್ನಲೆ, ಅಂಜನಾದ್ರಿ ಬೆಟ್ಟ ಏರಿ ವಿಶೇಷ ಪೂಜೆ ಸಲ್ಲಿಸಿ ಯದುವೀರ್ ಕುಟುಂಬ ಹನುಮನ ದರ್ಶನ ಪಡೆದುಕೊಂಡರು. 575 ಮೆಟ್ಟಿಲೇರಿದ ಯದುವೀರ್ ದಂಪತಿ, ಹನುಮ ಹುಟ್ಟಿದ ಸ್ಥಳಕ್ಕೆ ಎರಡನೇ ಬಾರಿ ಬರುತ್ತಿದ್ದೇನೆ. ಎಲ್ಲರಿಗೂ ಒಳ್ಳೆದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಇದೊಂದು ಅದ್ಭುತ ಜಾಗ ಎಂದು ಹನುಮನ ದರ್ಶನ ಬಳಿಕ ಯದುವೀರ್ ಹೇಳಿದರು.
ದೀರ್ಘದಂಡ ನಮಸ್ಕಾರದ ಮೂಲಕ ಅಂಜನಾದ್ರಿ ಬೆಟ್ಟವೇರಿದ ಸ್ವಾಮೀಜಿ
ಈ ಹಿಂದೆ ಅಂಜನಾದ್ರಿ ಬೆಟ್ಟವನ್ನು ದೀರ್ಘ ದಂಡ ನಮಸ್ಕಾರದ ಮೂಲಕ ಅಮರಯ್ಯ ಸ್ವಾಮಿ ಹಿರೇಮಠ ಎಂಬ ಸ್ವಾಮೀಜಿ ಏರಿದ್ದರು. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪೂರ ಗ್ರಾಮದ ಅಮರಯ್ಯ ಸ್ವಾಮೀಜಿ ಕಳೆದ (ಜೂನ್ 20) ರಂದು ದಿರ್ಘದಂಡ ನಮಸ್ಕಾರದ ಮೂಲಕ ಅಂಜನಾದ್ರಿ ಬೆಟ್ಟ ಏರಲು ತೀರ್ಮಾನಸಿದ್ದರು. ಹೀಗಾಗಿ ಜೂನ್ 25 ರಂದು ಸ್ವಾಮೀಜಿ ಮೈಲಾಪೂರದಿಂದ ದೀರ್ಘ ದಂಡ ನಮಸ್ಕಾರದ ಮೂಲಕ ಅಂಜನಾದ್ರಿ ತಲುಪಿದ್ದರು. ಸ್ವಾಮಿಜಿ ಮಳೆ ಬೆಳೆಗಾಗಿ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಧೀರ್ಘದಂಡ ನಮಸ್ಕಾರದ ಮೂಲಕ ಏರಿದ್ದರು. ಭಕ್ತರೊಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗತ್ತ ಬೆಟ್ಟ ಏರಿಪೂಜೆ ಸಲ್ಲಿಸಿದ್ದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಸಿಎಂ ಜೊತೆ ಚರ್ಚೆ
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಸಿಎಂ ಜೊತೆ ಚರ್ಚೆ ಮಾಡಿದ್ದು, ಈಗಾಗಲೇ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ ನೀಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದರು. ಅನುದಾನ ಕೋಡಲೇ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದರು. ಅಂಜನಾದ್ರಿ ಬೆಟ್ಟದಲ್ಲಿ ಪಾರ್ಕಿಂಗ್, ರೋಪ್ ವೇ, ರಸ್ತೆ ನಿರ್ಮಾಣ ಮಾಡುತ್ತೇವೆ. ಪುಟಪಾತ್ ಕಾಮಗಾರಿ ಹಣ ಬಿಡುಗಡೆಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಎರಡು ತಿಂಗಳೊಳಗೆ ಎಲ್ಲಾ ಕಾಮಗಾರಿಗಳಿಗೂ ಅಡಿಗಲ್ಲು ಹಾಕಲು ಸಿಎಂ ಸೂಚಿಸಿದ್ದಾರೆ. ಜುಲೈ 15 ರೊಳಗೆ ಸಿಎಂ ಬೊಮ್ಮಾಯಿ ಸಹ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: Jothe Jotheyali Serial Song: 3 ಕೋಟಿ ಬಾರಿ ವೀಕ್ಷಣೆ ಕಂಡ ‘ಜೊತೆ ಜೊತೆಯಲಿ’ ಧಾರಾವಾಹಿ ಹಾಡು
Published On - 9:54 am, Mon, 27 June 22