ಪ್ರತಿಯೊಂದು ವ್ಯಕ್ತಿಯ ಬಾಲ್ಯದ ಸಮಯದಲ್ಲಿ ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದಾದರೊಂದು ಕೆಟ್ಟ ಅನುಭವಗಳು ಸಂಭವಿಸಿರುತ್ತದೆ. ಈ ಕೆಟ್ಟ ಘಟನೆಗಳು ಕಾಲ ಕ್ರಮೇಣ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಬಲವಾದ ಪ್ರಭಾವ ಬೀರುತ್ತವೆ.
ನಿಮ್ಮ ಬಾಲ್ಯದ ಕೆಲವೊಂದು ಕೆಟ್ಟ ಅನುಭವಗಳು, ಘಟನೆಗಳು ಆರೋಗ್ಯದ ಮೇಲೆ ದಿನಕಳೆದಂತೆ ಕೆಟ್ಟ ಪರಿಣಾಮ ಬೀರಬಹುದು ಎಂದು ಇತ್ತೀಚಿನ ಅಧ್ಯಯನದ ಮೂಲಕ ತಿಳಿದು ಬಂದಿದೆ.
ಉದಾಹರಣೆಗೆ ಬಾಲ್ಯದಲ್ಲಿನ ನಡೆದ ಅಪಘಾತಗಳಲ್ಲಿನ ದೇಹದ ಮೇಲಿನ ನೋವು ಮುಂದೆ ಸ್ಥೂಲಕಾಯತೆ ಮತ್ತು ದೀರ್ಘಕಾಲದ ನೋವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಮತ್ತು ಕೆಲವೊಂದು ಮಾನಸಿಕವಾಗಿ ನೋವು ನೀಡಿದ ಘಟನೆಗಳು ಮುಂದೆ ಮಾನಸಿಕ ಖಿನ್ನತೆಯಾಗಿ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 6 ರಂದು ಜರ್ನಲ್ ಫ್ರಾಂಟಿಯರ್ಸ್ ಇನ್ ಸೈಕಿಯಾಟ್ರಿಯಲ್ಲಿ DRI ಮತ್ತು ಯೂನಿವರ್ಸಿಟಿ ಆಫ್ ನೆವಾಡಾ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಬಾಲ್ಯದ ಆಘಾತಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಭಾವನಾತ್ಮಕ, ದೈಹಿಕ ಅಥವಾ ಲೈಂಗಿಕ ದುರುಪಯೋಗ, ಬಡತನ ಮತ್ತು ಮನೆಯಲ್ಲಿ ಮಾದಕ ವ್ಯಸನದ ಅನುಭವಗಳು ಹೇಗೆ ಯೌವನದಲ್ಲಿ ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ. ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ರೆನೋನ್ ಹೆಲ್ತ್‌ನಿಂದ ನಡೆಸಲ್ಪಡುವ ಅತ್ಯಂತ ವಿಶೇಷವಾದ ಜೀನೋಮಿಕ್ ಅಧ್ಯಯನಗಳಲ್ಲಿ ಒಂದಾಗಿದೆ.
ಇದನ್ನು ಓದಿ: ನಿಮಗೆ ಬೆನ್ನು ನೋವಿನ ಸಮಸ್ಯೆಯೇ? ಹಾಗಾದ್ರೆ ನೋವು ದೂರ ಮಾಡುವ ವಿಧಾನಗಳ ಬಗ್ಗೆ ತಿಳಿಯಲೇಬೇಕು
ಬಾಲ್ಯದಲ್ಲಿನ ನಿರ್ಲಕ್ಷ್ಯ ಮತ್ತು ಬಡತನ, ಆಹಾರದ ಕೊರತೆ, ಲೈಂಗಿಕವಾಗಿ ದುರುಪಯೋಗದೊಂದಿಗಿನ ವೈಯಕ್ತಿಕ ಅನುಭವಗಳು ಪರಿಹರಿಸಲು ಹೆಚ್ಚು ಕಾಲ ತೆಗೆದು ಕೊಳ್ಳುತ್ತದೆ ಎಂದು ಸಂಶೋಧಕ ಮತ್ತು ಅಧ್ಯಯನದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಕರೆನ್ ಸ್ಕ್ಲಾಚ್ ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: