Mental Health: ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ತಿಂತಿದ್ರೆ ಮಾನಸಿಕ ಸಮಸ್ಯೆಗಳು ಕಾಡಲ್ವಂತೆ!

| Updated By: ನಯನಾ ರಾಜೀವ್

Updated on: Jul 18, 2022 | 12:25 PM

ಹಣ್ಣುಗಳು ಖಿನ್ನತೆಯನ್ನು ಹೋಗಲಾಡಿಸಲುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

Mental Health: ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ತಿಂತಿದ್ರೆ ಮಾನಸಿಕ ಸಮಸ್ಯೆಗಳು ಕಾಡಲ್ವಂತೆ!
Fruits
Follow us on

ಹಣ್ಣುಗಳು ಖಿನ್ನತೆಯನ್ನು ಹೋಗಲಾಡಿಸಲುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಆಗಾಗ ಹಣ್ಣುಗಳನ್ನು ತಿನ್ನುವ ಜನರು ಕಡಿಮೆ ಮಾನಸಿಕ ಸಮಸ್ಯೆ ಎದುರಿಸಿದರೆ ಹಣ್ಣು ಸೇವಸದೆ ಇರುವವರು ಹೆಚ್ಚಿನ ಖಿನ್ನತೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಮತ್ತೊಂದೆಡೆ, ಕಡಿಮೆ ಪೋಷಕಾಂಶಗಳನ್ನು ಹೊಂದಿರುವ ಖಾರದ ತಿಂಡಿಗಳನ್ನು ತಿನ್ನುವ ಜನರು ಹೆಚ್ಚಿನ ಮಟ್ಟದ ಆತಂಕವನ್ನು ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.

ಯುಕೆಯ ಆಸ್ಟನ್ ವಿಶ್ವವಿದ್ಯಾಲಯ ಈ ಸಂಶೋಧನೆಯನ್ನು ಮಾಡಿದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಯುಕೆಯಾದ್ಯಂತ 428 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಿತು ಮತ್ತು ಅವರ ಹಣ್ಣು, ತರಕಾರಿಗಳು, ಸಿಹಿ ಮತ್ತು ಖಾರದ ಆಹಾರ ತಿಂಡಿಗಳ ಸೇವನೆ ಮತ್ತು ಅವರ ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ನೋಡಿದೆ.

ಫಲಿತಾಂಶಗಳು ಪೌಷ್ಟಿಕಾಂಶ-ಭರಿತ ಹಣ್ಣು ಮತ್ತು ಪೌಷ್ಟಿಕ-ಕಳಪೆ ಖಾರದ ತಿಂಡಿಗಳು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿವೆ ಎಂದು ತೋರಿಸಿದೆ.
ಆದರೆ ತರಕಾರಿಗಳನ್ನು ತಿನ್ನುವುದು ಮತ್ತು ಮಾನಸಿಕ ಆರೋಗ್ಯದ ನಡುವೆ ಯಾವುದೇ ನೇರ ಸಂಬಂಧ ಕಂಡುಬಂದಿಲ್ಲ.

“ಆಹಾರವು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಬಹಳ ಕಡಿಮೆ ಸಂಶೋಧನೆಗಳು ನಡೆದಿವೆ. ಖಾರ, ಕರಿದ ಆಹಾರಗಳನ್ನು ತಿನ್ನುವುದರಿಂದ ಮಾನಸಿಕ ಅಸ್ವಸ್ಥತೆ ಹೆಚ್ಚಲಿದೆ ಎಂಬುದು ತಿಳಿದುಬಂದಿದೆ.

ಹಣ್ಣು ಮತ್ತು ತರಕಾರಿಗಳೆರಡೂ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಮೆದುಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ನಮ್ಮ ಆಹಾರ ವ್ಯವಸ್ಥೆಯನ್ನು ನಾವು ಸುಲಭವಾಗಿ ಬದಲಾಯಿಸಿಕೊಳ್ಳಬಹುದು.