ಆತಂಕವೋ, ಖಿನ್ನತೆಯೋ? ನಿಮ್ಮ ಭಾವನೆಗಳನ್ನು ಅರಿಯುವುದು ಹೇಗೆ?
ನಗು, ಕೋಪ, ಪ್ರೀತಿ, ಖಿನ್ನತೆ, ಆತಂಕ ಎಲ್ಲವೂ ಭಾವನೆಗಳೆನಿಸಿಕೊಳ್ಳುತ್ತವೆ. ಖಿನ್ನತೆ, ಆತಂಕವನ್ನು ಹೊರತುಪಡಿಸಿ ಉಳಿದೆಲ್ಲಾ ಭಾವನೆಗಳನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.
ನಗು, ಕೋಪ, ಪ್ರೀತಿ, ಖಿನ್ನತೆ, ಆತಂಕ ಎಲ್ಲವೂ ಭಾವನೆಗಳೆನಿಸಿಕೊಳ್ಳುತ್ತವೆ. ಖಿನ್ನತೆ, ಆತಂಕವನ್ನು ಹೊರತುಪಡಿಸಿ ಉಳಿದೆಲ್ಲಾ ಭಾವನೆಗಳನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಿರಂತರವಾಗಿ ಖಿನ್ನತೆಗೆ ಒಳಗಾಗಿರುವ ಮನಸ್ಥಿತಿಯು ಜೀವನದಲ್ಲಿ ಗಮನಾರ್ಹ ದುರ್ಬಲತೆಯನ್ನುಂಟು ಮಾಡುತ್ತದೆ.
ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ವಿಷಯದ ಕುರಿತು ಆತಂಕವಾಗುತ್ತದೆ, ಆ ಸಮಸ್ಯೆ ಸಾಲ್ವ್ ಆದಾಗ ಆತಂಕವೂ ದೂರವಾಗುತ್ತದೆ. ಆದರೆ ಖಿನ್ನತೆ ಎಂಬುದು ಹಾಗಲ್ಲ ನಿರಂತರವಾಗಿರುತ್ತದೆ. ಯಾವುದೋ ಮರೆಯಲಾರದ ಕಹಿ ಘಟನೆ ನಿಮ್ಮ ಜೀವನದುದ್ದಕ್ಕೂ ಕಾಡುತ್ತಾ ನಿಮ್ಮ ಜೀವನವನ್ನು ನರಕವಾಗಿಸಿಬಿಡುತ್ತದೆ.
ಖಿನ್ನತೆಯೋ ಆತಂಕವೋ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲೇ ಇರುತ್ತದೆ, ಬೇಕಾದ ವಿಷಯವನ್ನು ಮನಸ್ಸಿಗೆ ತುಂಬಿಸುತ್ತಾ ಬೇಡದ ವಿಷಯವನ್ನು ಡಿಲೀಟ್ ಮಾಡುವ ಕೆಲಸವನ್ನು ನೀವೇ ಮಾಡಬೇಕು.
ಹಾಗಾಗಿ ನೀವು ಖಿನ್ನತೆಗೆ ಒಳಗಾಗಿದ್ದೀರೋ ಅಥವಾ ನಿಮಗಾಗಿರುವುದು ಆತಂಕವೋ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆತಂಕವನ್ನು ನಾವು ಬೇರೆಯವರೊಂದಿಗೆ ಹಂಚಿಕೊಳ್ಳಬಹುದು ಆದರೆ ಖಿನ್ನತೆಯು ನಮಗೇ ತಿಳಿಯದಂತೆ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ.
ಯಾರೊಂದಿಗೂ ಬೆರೆಯಲು ಮನಸ್ಸಾಗುವುದಿಲ್ಲ, ನಿಮ್ಮದೇ ಆದ ಪ್ರಪಂಚದಲ್ಲಿ ಉಳಿದುಬಿಡುತ್ತೀರಿ. ಚಿಂತೆ ಮತ್ತು ಭಯವು ವೇಗವಾದ ಹೃದಯ ಬಡಿತ, ತ್ವರಿತ ಉಸಿರಾಟ, ಬೆವರುವಿಕೆ ಮತ್ತು ದಣಿದ ಭಾವನೆ ಉಂಟಾಗಲಿದೆ.
ಖಿನ್ನತೆಯು ದುಃಖ, ಹತಾಶೆಯನ್ನುಂಟು ಮಾಡುತ್ತದೆ, ಆತಂಕವು ಹೆದರಿಕೆ, ಚಿಂತೆಯ ಭಾವನೆಯನ್ನುಂಟು ಮಾಡುತ್ತದೆ. ನೆನಪಿಡಬೇಕಾದ ವಿಷಯವೇನೆಂದರೆ ಅತಂಕವಿರಲಿ, ಖಿನ್ನತೆಯಿರಿ ನಮ್ಮ ದೈನಂದಿನ ಜೀವನಕ್ಕೆ ಅಡ್ಡಿಯುಂಟುಮಾಡುವಂಥದ್ದಾಗಿದೆ. ಹಾಗಾಗಿ ಯಾರೂ ಕೂಡ ಅದನ್ನು ನಿರ್ಲಕ್ಷಿಸಬಾರದು. “